Thursday, April 24, 2014
Last Updated: 12:27:53 PM IST
 • ನಾನೆಲ್ಲಿರುವೆ:
 • ಮುಖಪುಟ
 • ಉದಯವಾಣಿ
 • ವೆ ಬ್
 • ಹುಡುಕಿ
ಶ್ರದ್ಧಾಂಜಲಿ
 • ನಿಧನ
  ಲಲಿತಾ ಶೆಟ್ಟಿ

  ಹೆಬ್ರಿ:
  ಮುನಿಯಾಲು ದೊಡ್ಡ ಮನೆ ವಿಠಲ ಶೆಟ್ಟಿ ಅವರ ಪತ್ನಿ ಲಲಿತಾ ಶೆಟ್ಟಿ (70) ಎ.22ರಂದು ಕಿರಾಡಿಯಲ್ಲಿ ನಿಧನ ಹೊಂದಿದರು. ಮೃತರು ಪತಿಯನ್ನು ಅಗಲಿದ್ದಾರೆ.

  ಲಾಟೆ ಮಹಾದೇವ ನಾಯಕ್‌

  ಉಡುಪಿ
  : ಕೃಷಿಕ ಲಾಟೆ ಮಹಾದೇವ ನಾಯಕ್‌ (79) ಎ. 19ರಂದು ಭೈರಂಜೆ ಲಾಟೆಯ ಸ್ವಗೃಹದಲ್ಲಿ ನಿಧನ ಹೊಂದಿದರು.

  ಮೃತರು ಪತ್ನಿ, ಆರು ಪುತ್ರಿಯರು, ಮೂವರು ಪುತ್ರರನ್ನು ಅಗಲಿದ್ದಾರೆ. ಉಡುಪಿ ಕಿಸಾನ್‌ ಸಂಘದ ತಾಲೂಕು ಉಪಾಧ್ಯಕ್ಷರಾಗಿ, ಬಂಟಕಲ್ಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರಾಗಿ, ಪಟ್ಲ ರೂರಲ್‌ ಎಜುಕೇಶನ್‌ ಸೊಸಾೖಟಿ ಸದಸ್ಯರಾಗಿ, ಭೈರಂಜೆ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾಗಿ ಅವರು ಸೇವೆ ಸಲ್ಲಿಸಿದ್ದರು.

  ವಾಮನ್‌ ಭಟ್‌

  ಕಾರ್ಕಳ
  : ಸ್ಥಳೀಯ ದುರ್ಗ ಗ್ರಾಮದ ಕೆಳಗಿನ ಲೊಂಡೆ ವಾಮನ ಭಟ್‌ ಚಿಪಳೂಣಕರ್‌ (91) ಎ. 20ರಂದು ನಿಧನ ಹೊಂದಿದರು. ಮೃತರು ಇಬ್ಬರು ಪುತ್ರರು, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಕೃಷಿಕರಾದ ಅವರು ಕರ್ನಾಟಕ ಸಂಗೀತದ ಹಾಡುಗಾರರಾಗಿ ಪರಿಸರದಲ್ಲಿ ಜನಾನುರಾಗಿಯಾಗಿದ್ದರು.

  ಅನಂತನಾರಾಯಣ ಐತಾಳ್‌

  ಕೋಟ
  : ಬಾಳುRದ್ರು ನಿವಾಸಿ, ಹಿರಿಯ ಸಮಾಜ ಸೇವಕ, ರಾಜಕೀಯ ಧುರೀಣ ಬಿ. ಅನಂತನಾರಾಯಣ ಐತಾಳ್‌ (93) ಎ.23ರಂದು ನಿಧನ ಹೊಂದಿದರು. ಮೃತರು ಮೂವರು ಪುತ್ರರು, ಪುತ್ರಿಯನ್ನು ಅಗಲಿದ್ದಾರೆ. ಐತಾಳರು ಉಡುಪಿ ತಾಲೂಕು ಕಾಂಗ್ರೆಸ್‌ ಕಾರ್ಯದರ್ಶಿ, ಹಂಗಾರಕಟ್ಟೆ ಕರ್ನಾಟಕ ಸಂಘದ ಕಾರ್ಯದರ್ಶಿ, ಸಾಸ್ತಾನ ಸಿಎ ಬ್ಯಾಂಕ್‌ ನಿರ್ದೇಶಕರು, ಬಾಳುRದ್ರು ಗ್ರಾ.ಪಂ. ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಚೇತನ ಹೈಸ್ಕೂಲ್‌ ಸ್ಥಾಪಕರಲ್ಲಿ ಒಬ್ಬರಾದ ಐತಾಳ್‌ ಹಿಂದೆ ಮಾಬುಕಳದಲ್ಲಿ ಹೊಟೇಲ್‌ ನಡೆಸುತ್ತಿದ್ದರು, ಕೃಷಿಕರಾಗಿದ್ದರು.
 • Copyright @ 2009 Udayavani.All rights reserved.
 • Designed & Hosted By 4cplus