Saturday, October 25, 2014
Last Updated: 5:20:42 PM IST
 • ನಾನೆಲ್ಲಿರುವೆ:
 • ಮುಖಪುಟ ಶ್ರದ್ಧಾಂಜಲಿ
 • ವಿಡಿಯೋ ಗ್ಯಾಲರಿ
 • ಉದಯವಾಣಿ
 • ವೆ ಬ್
 • ಹುಡುಕಿ
ಶ್ರದ್ಧಾಂಜಲಿ

 • ಶ್ರೀಕೃಷ್ಣಮಠದ ವಿಠಲ ಮೇಸಿŒ

  ಉಡುಪಿ
  : ಶ್ರೀಕೃಷ್ಣಮಠದಲ್ಲಿ ಕಳೆದ ನಾಲ್ಕೂವರೆ ದಶಕಗಳಿಂದ ಮೇಸಿŒ ಕೆಲಸ ಮಾಡಿಕೊಂಡಿದ್ದ, ಶ್ರೀಕೃಷ್ಣಮಠ-ಅಷ್ಟಮಠಗಳ ಆಚರಣೆ, ಸಂಪ್ರದಾಯಗಳ ಸೂಕ್ಷ್ಮಗಳನ್ನು ಅರಿತಿದ್ದ ವಿಠಲ ಮೇಸಿŒ (68) ಅ. 23ರಂದು ಹೃದಯಾಘಾತದಿಂದ ನಿಧನ ಹೊಂದಿದರು. ಮೃತರು ಪತ್ನಿ, ನಾಲ್ವರು ಪುತ್ರರನ್ನು ಅಗಲಿದ್ದಾರೆ.

  ವಿಠಲ ಮೇಸಿŒಯವರು ತಂದೆ ಗುಂಡ ಸೇರಿಗಾರ್‌ ಅವರಲ್ಲಿ ತರಬೇತಿ ಪಡೆದಿದ್ದರು. ತಂದೆಯವರು ತೀರಿಕೊಂಡ ಬಳಿಕ ವಿಠಲ ಮೇಸಿŒಯವರು ಸುಮಾರು 1968ರಿಂದ ಶ್ರೀಕೃಷ್ಣಮಠದ ಎಲ್ಲಾ ಕೆಲಸಗಳನ್ನು ನಿರ್ವಹಿಸುವ ಹೊಣೆ ಹೊತ್ತು ಇದುವರೆಗೂ ಯಶಸ್ವಿಯಾಗಿ ನಿಭಾಯಿಸಿದ್ದರು. ವಿಟ್ಲಪಿಂಡಿ, ಪರ್ಯಾಯೋತ್ಸವದಂತಹ ಸಂದರ್ಭ ಆಚರಣೆಗಳು ಏನೇನು ಎನ್ನುವುದು ವಿಠಲ ಮೇಸಿŒಯವರಿಗೆ ಚೆನ್ನಾಗಿ ತಿಳಿದಿತ್ತು. ಇದಕ್ಕೆ ತಕ್ಕುದಾಗಿ ನೂರಾರು ಕೆಲಸಗಾರರನ್ನು ಏಕಕಾಲದಲ್ಲಿ ನಿಭಾಯಿಸುತ್ತಿದ್ದ ಕೀರ್ತಿ ಅವರಿಗೆ ಸಲ್ಲುತ್ತದೆ. ವಿಠಲ ಅವರು ಗುರುವಾರವೂ ಬೆಳಗ್ಗೆ ಪಶ್ಚಿಮಜಾಗರ ಪೂಜೆಗೆ ಬೇಕಾದ ವ್ಯವಸ್ಥೆಗಳನ್ನು ನೋಡಿ, ಶುಕ್ರವಾರದ ಅಭಿಷೇಕಕ್ಕೆ ಎಳನೀರನ್ನು ಕೆತ್ತಿದ್ದರು (ಎಳೆಯ ಎಳನೀರನ್ನು ಸುತ್ತಲೂ ಕೆತ್ತುವುದು ಶ್ರೀಕೃಷ್ಣಮಠದಲ್ಲಿ ಮಾತ್ರ). ಆಗಲೇ ಮೈಯಲ್ಲಿ ಅನಾರೋಗ್ಯ ಕಂಡು ಪಕ್ಕದಲ್ಲಿರುವ ಮನೆಗೆ ಹೋದವರು ಹೃದಯಾಘಾತಕ್ಕೆ ಈಡಾದರು.

  ಅಷ್ಟಮಠಗಳ ಎಲ್ಲ  ಪರ್ಯಾಯಗಳ ಹೊರಗಿನ ವ್ಯವಸ್ಥೆಗಳನ್ನು ಯಶಸ್ವಿಯಾಗಿ ವಿಠಲ ಮೇಸಿŒಯವರು ನಿಭಾಯಿಸಿ ಎಲ್ಲಾ ಮಠಾಧೀಶರಿಗೆ ಪ್ರೀತಿಪಾತ್ರರಾಗಿದ್ದರು. ಆರೇಳು ವರ್ಷಗಳ ಹಿಂದೆ ಇವರ ಅಮೂಲ್ಯ ಸೇವೆಯನ್ನು ಗುರುತಿಸಿ ಪರ್ಯಾಯೋತ್ಸವದ ಸಂದರ್ಭ ಲೇಖನವನ್ನು "ಉದಯವಾಣಿ'' ಪ್ರಕಟಿಸಿತ್ತು.

  ವಿಠಲ ಮೇಸಿŒಯವರ ನಿಧನಕ್ಕೆ ಪರ್ಯಾಯ ಶ್ರೀಕಾಣಿಯೂರು, ಶ್ರೀ ಪೇಜಾವರ, ಶ್ರೀ ಪಲಿಮಾರು, ಶ್ರೀ ಪುತ್ತಿಗೆ, ಶ್ರೀ ಶೀರೂರು, ಶ್ರೀಅದಮಾರು, ಶ್ರೀ ಕೃಷ್ಣಾಪುರ, ಶ್ರೀ ಸೋದೆ ಮಠಾಧೀಶರು ಸಂತಾಪ ಸೂಚಿಸಿ ಅವರ ಆತ್ಮಕ್ಕೆ ಶಾಂತಿ ದೊರಕಲು ದೇವರಲ್ಲಿ ಪ್ರಾರ್ಥಿಸಿದ್ದಾರೆ. ಮಠಗಳ ಅಧಿಕಾರಿಗಳು ವಿಠಲ ಮೇಸಿŒಯವರಿಗೆ ಅಂತಿಮ ನಮನ ಸಲ್ಲಿಸಿದರು.

  ಜೀವರಾಜ್‌ ಭಂಡಾರಿ

  ಮಂಗಳೂರು: ಕೃಷಿಕ, ಹವ್ಯಾಸಿ ಯಕ್ಷಗಾನ ಅರ್ಥಧಾರಿ, ನಾಟಕ ಕಲಾವಿದ ನೋಣಾಲು ಜೀವರಾಜ್‌ ಭಂಡಾರಿ (65) ಅಸೌಖ್ಯದಿಂದ ಅ. 23ರಂದು ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಮೃತರು ಪತ್ನಿ ಮತ್ತು ಪುತ್ರಿಯನ್ನು ಅಗಲಿದ್ದಾರೆ. ಮೃತರು ಬಂಟರ ಸಮುದಾಯದ ವಿವಿಧ ಸಭೆ ಸಮಾರಂಭಗಳಲ್ಲಿ ಕಾರ್ಯನಿರ್ವಾಹಕರಾಗಿ ಚಿರ ಪರಿಚಿತರಾಗಿದ್ದರು.

  ವಿಠಲ ದೇಜು ಶೆಟ್ಟಿ

  ಮುಂಬಯಿ
  : ವಿಕ್ರೋಲಿ ಪೂರ್ವದ ಪುಷ್ಪಾ ಪಂಜಾಬ್‌ ಹೊಟೇಲ್‌ನ ಮಾಲಕ, ಭಾಂಡೂಪ್‌ ಪಶ್ಚಿಮದ ಡ್ರಿಮ್‌ ಕಾಂಪ್ಲೆಕ್ಸ್‌ನ ನಿವಾಸಿ ವಿಠಲ ದೇಜು ಶೆಟ್ಟಿ (66) ಅಸೌಖ್ಯದಿಂದ ಅ. 21ರಂದು ಭಾಂಡೂಪ್‌ನ ಸ್ವಗೃಹದಲ್ಲಿ ನಿಧನ ಹೊಂದಿದರು.

  ಮೂಲತಃ ಕಳಸ ಕೊರಂಗ್ರಪಾಡಿ ಮೂಡು ಹೊಸಮನೆಯವರಾದ ಮೃತರು ಪತ್ನಿ, ಪುತ್ರ, ಪುತ್ರಿಯನ್ನು ಅಗಲಿದ್ದಾರೆ. ಕಳೆದ ಹಲವಾರು ವರ್ಷಗಳಿಂದ ವಿಕ್ರೋಲಿ ಪಶ್ಚಿಮದ ಕೇಸನ್ಸ್‌ ನಿವಾಸಿಯಾಗಿದ್ದ ಅವರು ಸಮಾಜ ಬಾಂಧವರೊಂದಿಗೆ ಬೆರೆತು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು.

  ನರೇಶ್‌ ಎ. ಸಾಲಿಯಾನ್‌

  ಮಂಗಳೂರು
  : ಮುಂಬಯಿಯ ನರೇಶ್‌ ಎ. ಸಾಲಿಯಾನ್‌ (72) ಅ. 18ರಂದು ಹೃದಯಾಘಾತದಿಂದ ಮುಂಬಯಿಯ ಸ್ವಗೃಹದಲ್ಲಿ ನಿಧನ ಹೊಂದಿದರು. ಮೃತರು ಮಂಗಳೂರಿನ ಬಿಕರ್ನಕಟ್ಟೆಯ ನಿವಾಯಾಗಿದ್ದು, ಪತ್ನಿ,  ಪುತ್ರ ಮತ್ತು ಪುತ್ರಿಯನ್ನು ಅಗಲಿದ್ದಾರೆ.

  ಪುಷ್ಪಾವತಿ

  ಶಂಕರಪುರ:
  ಇಲ್ಲಿಯ ಮೆಸ್ಕಾಂ ನಿವೃತ್ತ ಉದ್ಯೋಗಿ ಬಿ. ಸೋಮಶೇಖರ ದೇವಾಡಿಗ ಅವರ ಪತ್ನಿ ಪುಷ್ಪಾವತಿ (74) ಅಸೌಖ್ಯದಿಂದ ಮಣಿಪಾಲ ಆಸ್ಪತ್ರೆಯಲ್ಲಿ ಅ. 21ರಂದು ನಿಧನ ಹೊಂದಿದರು.  ಮೃತರು ಪತಿ, ಐವರು ಪುತ್ರರು, ನಾಲ್ವರು ಪುತ್ರಿಯರನ್ನು ಅಗಲಿದ್ದಾರೆ.

  ಪ್ರಫ‌ುಲ್ಲಾ ಹೆಗ್ಡೆ

  ಉಡುಪಿ
  : ಪಳ್ಳಿ ಸೋಮನಾಥ ಹೆಗ್ಡೆಯವರ ಪತ್ನಿ ಪ್ರಫ‌ುಲ್ಲಾ ಹೆಗ್ಡೆ (74) ಅ. 21ರಂದು ಮಣಿಪಾಲ ಆಸ್ಪತ್ರೆಯಲ್ಲಿ ಅಸೌಖ್ಯದಿಂದ ನಿಧನ ಹೊಂದಿದರು. ಮೃತರು ಪುತ್ರನಾದ ಸಾಲಿಗ್ರಾಮ, ಹಿರಿಯಡಕ ಮೊದಲಾದ ಐದು ಯಕ್ಷಗಾನ ಮೇಳಗಳ ವ್ಯವಸ್ಥಾಪಕ ಪಳ್ಳಿ ಕಿಶನ್‌ ಹೆಗ್ಡೆ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

  ಕೃಷ್ಣಕುಮಾರಿ

  ಕುರಿಯ
  : ಕುರಿಯ ಗ್ರಾಮದ ಸಂಪ್ಯದಮೂಲೆ ನಿವಾಸಿ ಕೃಷ್ಣಕುಮಾರಿ (77) ಅ.20ರಂದು ನಿಧನ ಹೊಂದಿದರು. ಮೃತರು ಮೂವರು ಪುತ್ರರು ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ.

  ಎಂ. ಸದಾಶಿವ ಹೆಗ್ಡೆ

  ಹೆಬ್ರಿ
  : ಕಡ್ತಲ ಗ್ರಾಮದ ನಿವೃತ್ತ ಗ್ರಾಮ ಲೆಕ್ಕಿಗ ಎಂ. ಸದಾಶಿವ ಹೆಗ್ಡೆ (78) ಅ.20ರಂದು ನಿಧನ ಹೊಂದಿದರು. ಅಜೆಕಾರು ಸಿಎ ಬ್ಯಾಂಕ್‌ನ ನಿರ್ದೇಶಕರಾಗಿ, ಎಳ್ಳಾರೆ ಲಕ್ಷ್ಮೀ ಜನಾರ್ದನ ದೇವಸ್ಥಾನದ ಆಡಳಿತ ಸಮಿತಿಯ ಸದಸ್ಯರಾಗಿ, ಬಿಜೆಪಿಯ ಸಕ್ರಿಯ ಕಾರ್ಯಕರ್ತರಾಗಿದ್ದ ಮೃತರು ಪತ್ನಿ, ಐವರು ಪುತ್ರರು ಹಾಗೂ ಪುತ್ರಿಯನ್ನು ಅಗಲಿದ್ದಾರೆ. ಕಾರ್ಕಳ ಶಾಸಕ ವಿ.ಸುನೀಲ್‌ ಕುಮಾರ್‌, ದ.ಕ ಅಪಾರ ಜಿಲ್ಲಾಧಿಕಾರಿ ವಿ. ಸದಾಶಿವ ಪ್ರಭು, ಬಿಜೆಪಿ ಜಿಲ್ಲಾಧ್ಯಕ್ಷ ತಿಂಗಳೆ ವಿಕ್ರಮಾರ್ಜನ ಹೆಗ್ಡೆ, ಉದ್ಯಮಿ ಉದಯಕುಮಾರ್‌ ಶೆಟ್ಟಿ ಮುಂತಾದವರು ಮೃತರ ಅಂತಿಮ ದರ್ಶನ ಪಡೆದರು.

  ಶತಾಯುಷಿ ಶ್ರೀದೇವಿ ಶೆಣೈ

  ಪಡುಬಿದ್ರಿ
  : ಕೆಳಗಿನ ಪೇಟೆ ಪಡುಬಿದ್ರಿಯ ಹಿರಿಯ ಹೊಟೇಲು ಉದ್ಯಮಿ ದಿ| ಲಕ್ಷ್ಮಣ ಶೆಣೈಯವರ ಪತ್ನಿ ಶ್ರೀದೇವಿ ಯಾನೆ ಸಂಜೀವಿ ಶೆಣೈ(100) ಅ. 21ರಂದು ಸ್ವಗೃಹದಲ್ಲಿ  ನಿಧನ ಹೊಂದಿದರು. ಮೃತರು ಐವರು ಪುತ್ರರು ಹಾಗೂ  ಪುತ್ರಿಯನ್ನು ಅಗಲಿದ್ದಾರೆ.

 • Copyright @ 2009 Udayavani.All rights reserved.
 • Designed & Hosted By 4cplus