ಎಫ್.ಆರ್.ಸಿ.ಪಿ., ಎಫ್.ಆರ್.ಸಿ.ಪಿ. (ಎಡಿನ್­ಬರ್ಗ್), ಎಫ್.ಆರ್.ಸಿ.ಪಿ. (ಗ್ಲಾಸೊYà), ಎಫ್.ಆರ್.ಸಿ.ಪಿ. (ಡಬ್ಲಿನ್), ಎಫ್.ಆರ್.ಸಿ.ಪಿ. (ಯು.ಎಸ್.ಎ.), ಎಫ್.ಎ.ಎಂ.ಎಸ್. ಲಂಡನ್­ನ ರಾಯಲ್ ಕಾಲೇಜ್ ಆಫ್ ಫಿಸಿಷಿಯನ್­ಲೆ ನಿವೃತ್ತ ಅಂತರಾಷ್ಟ್ರೀಯ ಸಲಹೆಗಾರರಾಗಿರುವ ಇವರು 2010ರಲ್ಲಿ ಭಾರತ ಸರಕಾರ ಕೊಡಮಾಡುವ ಪದ್ಮ ಭೂಷಣ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. "ಸೈನ್ಸ್ ಆಫ್ ಹೀಲಿಂಗ್ ಔಟ್ಕಮ್ಸ್ 'ಪತ್ರಿಕೆಯ ಪ್ರಧಾನ ಸಂಪಾದಕರೂ ಆಗಿದ್ದಾರೆ. ಬಿಹಾರ, ಪಾಟ್ನಾ ಸರಕಾರದ ರಾಜ್ಯ ಆರೋಗ್ಯ ಸೊಸೈಟಿಯ ಎಕ್ಸ್ಪರ್ಟ್ ಕಮಿಟಿಯ ಅಧ್ಯಕ್ಷರು, ಲಂಡನ್° ಮಿಡ್ಲ್ಸೆಕ್ಸ್ ಹಾಸ್ಪಿಟಲ್ ಮೆಡಿಕಲ್ ಸ್ಕೂಲ್­ನ ಹೃದ್ರೋಗ ವಿಭಾಗದ ನಿವೃತ್ತ ಪ್ರಾಚಾರ್ಯರು, ನಾರ್ತನ್ ಕೊಲೆರೊಡೊ ವಿಶ್ವವಿದ್ಯಾನಿಲಯದ ಮಾನವ ಆರೋಗ್ಯ ವಿಭಾಗದ ನಿಯೋಜಿತ ಪ್ರಾದ್ಯಾಪಕರಾಗಿ ಹಾಗೆಯೇ ಮಣಿಪಾಲ ವಿಶ್ವವಿದ್ಯಾನಿಲಯದ ಹಿಂದಿನ ಉಪಕುಲಪತಿಗಳಾಗಿಯೂ ಸೇವೆ ಸಲ್ಲಿಸಿದ್ದಾರೆ.