Thursday, May 17, 2012
Last Updated: 12:37:05 AM IST
  • Where Am I:
  • Home Opinion Blogs ಗೌರೀಶಂಕರ್
  • Udayavani
  • Web
  • Search
  • TOP HEADLINES:
  • Imageಗೌರೀಶಂಕರ್, ಸಂರಕ್ಷಣಾಧಿಕಾರಿ

    ಹದಿಮೂರರ ಹರೆಯದಲ್ಲೇ ಹಾವುಗಳೊಡನೆ ಸರಸವಾಡಲು ಆರಂಭಿಸಿದ ಗೌರೀಶಂಕರ್ ಈಗ ತಮ್ಮ ಈ ಅಪೂರ್ವ ಕೌಶಲವನ್ನು ಸರೀಸೃಪಗಳ ಅಶೋಧತ ಜಗತ್ತಿನ ಅನ್ವೇಷಣೆಗೆ ಬಳಸುತ್ತಿದ್ದಾರೆ.

    ಗೌರೀಶಂಕರ್ ಪ್ರಕೃತ ಆಗುಂಬೆಯ ಮಳೆ ಅರಣ್ಯ ಸಂಶೋಧನ ಕೇಂದ್ರದಲ್ಲಿ  (ಎಆರ್ಆರ್ಎಸ್) ಸಂರಕ್ಷಣಾಧಿಕಾರಿಯಾಗಿ ದುಡಿಯುತ್ತಿದ್ದಾರೆ. ಈ ಹಿಂದೆ ಅವರು ವನ್ಯಮೃಗ ತಪಾಸಣಾಧಿಕಾರಿಯಾಗಿ, ಶಿಕ್ಷಣಾಧಿಕಾರಿಯಾಗಿ ಹಾಗೂ ಸಂಶೋಧಕರಾಗಿ ದುಡಿದಿದ್ದು  ಇವೆಲ್ಲವುಗಳ ಒಟ್ಟು ಅನುಭವದ ಆಧಾರದಲ್ಲಿ ಅವರಿಗೆ ತಮ್ಮ ಹೊಸ ಹುದ್ದೆಯನ್ನು ನಿರ್ವಹಿಸುವುದು ಸುಲಭ ಸಾಧ್ಯವಾಗಿದೆ. ಅಂತೆಯೇ ಅವರು ಈ ಹುದ್ದೆಗೆ ಸಮರ್ಪಕ ವ್ಯಕ್ತಿಯಾಗಿ ರೂಪುಗೊಂಡಿದ್ದಾರೆ.

    ಆಗುಂಬೆಯ ದಟ್ಟ ಆಡವಿಗಳಲ್ಲಿದ್ದುಕೊಂಡು ಕಾಳಿಂಗ ಸರ್ಪದ ಜೀವನ ಕ್ರಮವನ್ನು ವಿಶೇಷವಾಗಿ ಅಧ್ಯಯನ ಮಾಡುತ್ತಿರುವ ಗೌರೀಶಂಕರ್ ಈ ವಿಷಯದಲ್ಲಿ ವಿಶ್ವದಲ್ಲೇ ಪ್ರಥಮ ಸಾಹಸಿ ಎನಿಸಿದ್ದಾರೆ. ಕಾಳಿಂಗ ಸರ್ಪಗಳು ಗೂಡುಕಟ್ಟುವ ಬಗೆಯಿಂದ ಹಿಡಿದು ಅವುಗಳ ಮಿಲನ, ಪ್ರಜನನ, ಸ್ವಜಾತಿಯ ಉರಗಗಳನ್ನೇ ಹಿಡಿದು ತಿನ್ನುವ ಅವುಗಳ ಸ್ವಭಾವ ಮತ್ತು ಅವುಗಳ ಒಟ್ಟಾರೆ ನಡವಳಿಕೆಯನ್ನು ಅತ್ಯಂತ ನಿಕಟವಾಗಿ, ನೇರವಾಗಿ ಗಮನಿಸಿ ಅಭ್ಯಸಿಸುತ್ತಿರುವ ಗೌರೀಶಂಕರ್ ನಿಜವಾದ ಅರ್ಥದಲ್ಲಿ ಸಾಹಸಿಗರೆನಿಸಿದ್ದಾರೆ.

    ಬಿಬಿಸಿ ಮತ್ತು ನ್ಯಾಶನಲ್ ಜಿಯೋಗ್ರಫಿಕ್ ಟಿವಿ ವಾಹಿನಿಗಳು ರೂಪಿಸಿರುವ "ಕಿಂಗ್ ಆ್ಯಂಡ್ ಐ', "ಸೀಕ್ರೆಟ್ಸ್ ಆಫ್ ಕಿಂಗ್ ಕೋಬ್ರಾ' ಮೂದಲಾದ ಅನೇಕ ರೋಮಾಂಚಕ ವನ್ಯಮೃಗ ಸಾಕ್ಷ್ಯ ಚಿತ್ರಿಕೆಗಳಲ್ಲಿ ಗೌರೀಶಂಕರ್ ಪ್ರಧಾನವಾಗಿ ಕಾಣಿಸಿಕೊಂಡು ವಿಶ್ವ ಗಮನವನ್ನು ಸೆಳೆದಿದ್ದಾರೆ.

    120ಕ್ಕೂ ಹೆಚ್ಚು  ಕಾಳಿಂಗ ಸರ್ಪಗಳನ್ನು ದಯನೀಯ ಸ್ಥಿತಿಯಿಂದ ಪಾರುಗೊಳಿಸಿದ ಹೆಗ್ಗಳಿಕೆ ಗೌರೀಶಂಕರ್ ಅವರ ಪಾಲಿಗಿದೆ. ಕಾಳಿಂಗ ಸರ್ಪಗಳ ಜೀವನ ಕ್ರಮಣಿಕೆ ಕುರಿತಾಗಿ ಅವರು ಸಂಗ್ರಹಿಸಿರುವ ಅತ್ಯಮೂಲ್ಯ ಮಾಹಿತಿಗಳು ಹೊಸ ಚಿಂತನೆಗಳ ಮೇಲೆ ಬೆಳಕು ಚೆಲ್ಲಿವೆ. ಕಾಳಿಂಗ ಸರ್ಪಗಳ ಈ ಅಂತಿಮ ಹಾಗೂ ಅನನ್ಯ ನೆಲೆವೀಡನ್ನು ಸಂರಕ್ಷಿಸಬೇಕಾದ ಸಂದೇಶದೊಂದಿಗೆ ಗೌರೀಶಂಕರ್ ತಮ್ಮ ಅನೇಕ ಶೈಕ್ಷಣಿಕ ಕಾರ್ಯಕ್ರಮಗಳ ಮೂಲಕ ವಿಶ್ವದ ಉದ್ದಗಲವನ್ನು ತಲುಪುವ ಯತ್ನ ನಡೆಸಿದ್ದಾರೆ.

  • Blog Archive
Keywords:   
From:
To:
  • Copyright @ 2009-2010 Udayavani.All rights reserved.
  • Designed & Hosted By 4cplus