ಉಡುಪಿ ಶ್ರೀಕೃಷ್ಣ ಮಠಕ್ಕೆ ದಾರಿ ಯಾವುದಯ್ಯ..?
ಉಡುಪಿ ಶ್ರೀಕೃಷ್ಣಮಠ ದೇಶದ ಪ್ರಮುಖ ಪುಣ್ಯಕ್ಷೇತ್ರಗಳಲ್ಲೊಂದು. ದೇಶ-ವಿದೇಶದಲ್ಲಿ ಶ್ರೀಕೃಷ್ಣ ಮಠದ ಹೆಸರು ಚಿರಪರಿಚಿತ. ಆದರೆ ಉಡುಪಿ ನಗರವನ್ನು ಪ್ರವೇಶಿಸಿದ ಕೂಡಲೇ ಶ್ರೀಕೃಷ್ಣ ಮಠ ಅಪರಿಚಿತ!. ಅಂದರೆ ಶ್ರೀಕೃಷ್ಣ ಮಠ ಎಲ್ಲಿದೆ ಎಂದೇ ತಿಳಿಯದೆ ಕಕ್ಕಾಬಿಕ್ಕಿಯಾಗಬೇಕಾದ ಸ್ಥಿತಿ ಯಾತ್ರಾರ್ಥಿಗಳು, ಪ್ರವಾಸಿಗರದ್ದು.