CONNECT WITH US  
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಭವಿಷ್ಯ

ಮೇಷ
ಸಾಮಾಜಿಕ ರಂಗದಲ್ಲಿ ಚಟುವಟಿಕೆಗಳು ಉತ್ಸಾಹ ದಾಯಕವಾಗಲಿವೆ. ಅತಿಥಿಗಳ ಆಗಮನ ಮನೆಯಲ್ಲಿ ಸಂತೋಷವನ್ನು ದ್ವಿಗುಣಗೊಳಿಸಲಿದೆ. ಅನಿರೀಕ್ಷಿತ ಶುಭವಾರ್ತೆ ಇದೆ.
ವೃಷಭ
ಆಗಾಗ ಧನಾಗಮನದಿಂದ ಮನೋಕಾಮನೆಗಳು ಸಿದ್ದಿಸ‌ಲಿವೆೆ. ನವದಂಪತಿಗಳಿಗೆ ಸಂತಸದ ವಾರ್ತೆ ತಂದು ಕೊಡಲಿದೆ. ಆಲಂಕಾರಿಕ ವಸ್ತುಗಳ ಖರೀದಿಗೆ ಅನುಕೂಲವಾಗಲಿದೆ‌.
ಮಿಥುನ
ವಿದ್ಯಾಭ್ಯಾಸದಲ್ಲಿ ವಿದ್ಯಾರ್ಥಿಗಳು ಯಶಸ್ಸನ್ನು ಸಂಪಾದಿಸಲಿದ್ದಾರೆ. ಹಿರಿಯ ಅಧಿಕಾರಿ ವರ್ಗದವರಿಗೆ ಕಾರ್ಯರಂಗದಲ್ಲಿ ಬದಲಾವಣೆ ಕೊಡಲಿದೆ. ಹಣಕಾಸಿನ ಬಗ್ಗೆ ಜಾಗ್ರತೆ ಇರಲಿ.
ಕಟಕ
ಸಾಂಸಾರಿಕವಾಗಿ ಅಭಿವೃದ್ಧಿ ತೋರಿ ಬಂದು ಹೆಂಡತಿ ಮಕ್ಕಳಿಂದ ಸಹಕಾರ ಸಿಗಲಿದೆ. ನಿರುದ್ಯೋಗಿಗಳು ತಾತ್ಕಾಲಿಕ ಉದ್ಯೋಗದ ಅವಕಾಶವನ್ನು ಪಡೆಯಲಿದ್ದಾರೆ. ದಿನಾಂತ್ಯ ಶುಭ.
ಸಿಂಹ
ಕೋರ್ಟು ಕಚೇರಿ ಕೆಲಸಗಳಲ್ಲಿ ಅಡೆತಡೆಗಳಿದ್ದರೂ ಮುನ್ನಡೆ ಇರುವುದು. ನಿರುದ್ಯೋಗಿಗಳು ಬಂದ ಅವಕಾಶದಲ್ಲೇ ತೃಪ್ತಿ ಪಡುವಂತಾದೀತು. ವಿದ್ಯಾರ್ಥಿಗಳು ಮುನ್ನಡೆ ಸಾಧಿಸಲು ಕಠಿಣ ಶ್ರಮ ಅಗತ್ಯ.
ಕನ್ಯಾ
ಹಿರಿಯರ ಸೂಕ್ತ ನಿರ್ಧಾರಗಳು ಮುನ್ನಡೆಗೆ ಕಾರಣವಾಗುತ್ತವೆೆ. ಆರ್ಥಿಕವಾಗಿ ನಿರೀಕ್ಷಿತ ಕೆಲಸಕಾರ್ಯಗಳಿಗೆ ಅನುಕೂಲವಾಗಲಿದೆ. ಆಗಾಗ ಅತಿಥಿಗಳ ಆಗಮನ ಸಂತಸ ತರಲಿದೆ.
ತುಲಾ
ವೃತ್ತಿರಂಗದಲ್ಲಿ ಮುನ್ನಡೆ ಇರುವುದರಿಂದ ಅವಕಾಶವನ್ನು ಸದುಪಯೋಗಿಸಿಕೊಳ್ಳಿರಿ. ಶುಭಮಂಗಲ ಕಾರ್ಯಗಳಿಗೆ ಮುಂದುವರಿಯಬಹುದು. ದೂರ ಸಂಚಾರದಲ್ಲಿ ಕಾರ್ಯಸಿದ್ಧಿ ಇದೆ.
ವೃಶ್ಚಿಕ
ದೇಹಾರೋಗ್ಯದಲ್ಲಿ ಏರುಪೇರಾಗದಂತೆ ಜಾಗ್ರತೆ ವಹಿಸಿರಿ. ಆಗಾಗ ಅಡೆತಡೆಗಳು ತೋರಿ ಬರಬಹುದು. ಜಾಗ್ರತೆಯಿಂದ ವ್ಯವಹರಿಸಿರಿ. ಶ್ರೀ ದೇವತಾದರ್ಶನ ಭಾಗ್ಯ ತೀರ್ಥಕ್ಷೇತ್ರಯೋಗವಿದೆ.
ಧನು
ಆರ್ಥಿಕವಾಗಿ ಹೆಚ್ಚಿನ ಜಾಗ್ರತೆ ವಹಿಸಿರಿ. ಹಿರಿಯರ ಪ್ರೀತಿ ವಿಶ್ವಾಸಗಳು ಮನಸ್ಸಿಗೆ ಸಮಾಧಾನ ತರುತ್ತವೆ. ಶುಭಮಂಗಲ ಕಾರ್ಯಗಳಿಗೆ ಇದು ಅನುಕೂಲವಾದ ದಿನ. ಸಂಚಾರದಲ್ಲಿ ಜಾಗ್ರತೆ.
ಮಕರ
ಆತ್ಮಸ್ಥರ್ಯ, ಪ್ರಯತ್ನಬಲ ಆತೀ ಮುಖ್ಯವಾದುದು. ದೂರ ಸಂಚಾರದಲ್ಲಿ ವಾಹನ ಚಾಲನೆಯಲ್ಲಿ ಹೆಚ್ಚಿನ ಗಮನ ಹರಿಸಿರಿ. ಹಿತ ಶತ್ರುಗಳ, ದಾಯಾದಿಗಳ ಕಿರಿಕಿರಿ ಇದೆ. ಆದಾಯದಲ್ಲಿ ಕಡಿತವಿದೆ.
ಕುಂಭ
ಅನಿರೀಕ್ಷಿತ ಶುಭವಾರ್ತೆ ಗೋಚರಕ್ಕೆ ಬರುವುದು. ಬರಬೇಕಾದ ಹಣವು ಬರುವುದು. ವೃತ್ತಿರಂಗದಲ್ಲಿ ಮುನ್ನಡೆಯಲಿದ್ದೀರಿ. ದೇಹಾರೋಗ್ಯದ ಬಗ್ಗೆ ಗಮನವಿರಲಿ. ನಿರುದ್ಯೋಗಿಗಳಿಗೆ ಅಸಮಾಧಾನದ ವಾತಾವರಣ.
ಮೀನ
  ವೃತ್ತಿರಂಗದಲ್ಲಿ ಅಧಿಕಾರಿ ವರ್ಗದವರಿಂದ ಭಿನ್ನಾಭಿಪ್ರಾಯದಿಂದ ಸಮಸ್ಯೆ ಬರಲಿದೆ. ನ್ಯಾಯಾಲಯದ ಕೆಲಸಕಾರ್ಯಗಳು ವಿಳಂಬಗತಿಯಲ್ಲಿ ನಡೆಯಲಿವೆ. ನಿರಾಶರಾಗದಿರಿ.
Back to Top