Updated at Wed,28th Jun, 2017 3:35PM IST
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಭವಿಷ್ಯ

ಮೇಷ
ಬಂದ ಅವಕಾಶಗಳನ್ನು ಸದುಪ ಯೋಗ ಗೊಳಿಸಬೇಕಾಗುವುದು. ದೈಹಿಕ, ಮಾನಸಿಕ ಒತ್ತಡಗಳಿಗೆ ವಿಶ್ರಾಂತಿ ಪಡೆಯಿರಿ. ವ್ಯವಹಾರದಲ್ಲಿ ಸ್ಪರ್ಧೆಯನ್ನು ಎದುರಿಸ ಬೇಕಾಗುವುದು. ವಿದ್ಯಾರ್ಥಿ  ಗಳಿಗೆ ಕಠಿಣ ಪರಿಶ್ರಮ ಆಗತ್ಯ.
ವೃಷಭ
ಸ್ವಪ್ರಯತ್ನಬಲ, ಆತ್ಮವಿಶ್ವಾಸ, ಎಲ್ಲವನ್ನು ನಿಮ್ಮದಾಗಿಸಿಗೊಳ್ಳಿರಿ. ವೃತ್ತಿರಂಗದಲ್ಲಿ ನಿಮ್ಮ ಸಾಮರ್ಥ್ಯ ಹೆಚ್ಚಾಗಲಿದೆ. ಇತರರ ಕಿವಿ ಮಾತಿನ ಬಗ್ಗೆ ಹೆಚ್ಚಿನ ವಿಶ್ವಾಸ ತೋರದಿರಿ. ರಾಜಕೀಯದವರಿಗೆ ಮುನ್ನಡೆ ತೋರಿ ಬರಲಿದೆ.
ಮಿಥುನ
ಸ್ಥಿತಿ ಉದ್ಯೋಗಿಗಳಿಗೆ ಬದಲಾವಣೆ ತಂದೀತು. ಅವಿವಾಹಿತರಿಗೆ ಯೋಗವಿದ್ದರೂ ಹೊಂದಾಣಿಕೆ ಆಗತ್ಯವಿದೆ. ಮಡದಿಯ ಸೂಕ್ತ ಸಲಹೆಗೆ ಸ್ಪಂದಿಸಿರಿ. ಭವಿಷ್ಯದ ಚಿಂತನೆ ಬಗ್ಗೆ ಗಮನ ಇರಲಿ.
ಕಟಕ
ನೀವು ಬಯಸದಿದ್ದರೂ ಬದಲಾವಣೆ ಗಳು ನಡೆದು ಹೋಗಲಿವೆ. ಹಿರಿಯರಿಗೆ ಇದು ಆತ್ಮ ಚಿಂತನೆಗೆ ಉತ್ತಮ ಕಾಲ. ಆಗಾಗ ಮಾನಸಿಕ ಅಸ್ಥಿರತೆ ಮಹಿಳಾವರ್ಗಕ್ಕೆ ಕಂಡು ಬರಲಿದೆ.
ಸಿಂಹ
ಶ್ರೀದೇವರ ಅನುಗ್ರಹ ಎಲ್ಲಾ ಗ್ರಹಚಾರ ದೋಷಕ್ಕೆ ಸಾಧಕವಾಗಲಿದೆ. ಆರ್ಥಿಕವಾಗಿ ಹಿಂದಿನ ಋಣಗಳು ಮುಕ್ತಾಯವಾಗಲಿವೆ. ವಿದ್ಯಾರ್ಥಿಗಳು ತಮ್ಮ ಪರೀಕ್ಷೆಯಲ್ಲಿ ಯಶಸ್ಸು ಪಡೆಯಲಿದ್ದಾರೆ.
ಕನ್ಯಾ
ಸಾಮಾಜಿಕ ರಂಗದಲ್ಲಿ ನಯವಂಚಕರ ಅನುಭವವಾಗಲಿದೆ. ಅನಾವಶ್ಯಕವಾಗಿ ಕೋಪತಾಪ ಉದ್ವೇಗಕ್ಕೆ ಕಾರಣರಾಗದಿರಿ. ಸಾಂಸಾರಿಕವಾಗಿ, ಕೌಟುಂಬಿಕವಾಗಿ ಹೊಂದಾಣಿಕೆ ಮಾಡಿಕೊಳ್ಳಿರಿ.
ತುಲಾ
ನಿಮ್ಮ ವಿಶ್ವಾಸದ ಬಗ್ಗೆ ಕೆಲವೊಮ್ಮೆ ನಿಮಗೆ ಅಚ್ಚರಿ ಆಗಲಿದೆ. ಆರ್ಥಿಕವಾಗಿ ಹೆಚ್ಚಿನ ಅನುಕೂಲವಾಗದಿದ್ದರೂ ಸಮಸ್ಯೆ ಇರದು. ವೃತ್ತಿರಂಗದಲ್ಲಿ ಅಧಿಕಾರಿ ವರ್ಗದವರ ಸಹಕಾರ ಕಂಡು ಬಂದೀತು.
ವೃಶ್ಚಿಕ
ಉದ್ಯೋಗಿಗಳಿಗೆ ಅವಿರತ ದುಡಿಮೆಯ ಬಿಸಿ ತಟ್ಟಲಿದೆ. ಸಾಂಸಾರಿಕ ವಾಗಿ ಧರ್ಮ ಪತ್ನಿಯ ಸಹಕಾರ ಹೆಚ್ಚಿನ ಫ‌ಲ ನೀಡಲಿದೆ. ವೃತ್ತಿರಂಗದಲ್ಲಿ ದಿನಗಳು ಯಥಾ ಪ್ರಕಾರ ನಡೆದು ಹೋಗಲಿವೆ.
ಧನು
ಎಲ್ಲಾ ರೀತಿಯ ಕೆಲಸಕಾರ್ಯಗಳು ನೀವು ಎಣಿಸಿದಂತೆ ನಡೆದು ಹೋದರೂ ದೃಢ ನಿರ್ಧಾರವಿರಲಿ. ಆರ್ಥಿಕವಾಗಿ ಸಹಕಾರ ಸಿಗಲಿದೆ. ನಿರುದ್ಯೋಗಿಗಳಿಗೆ ಬಯಸಿದ ಉದ್ಯೋಗ ದೊರೆತು ಅಚ್ಚರಿ ತಂದೀತು.
ಮಕರ
ಕೋರ್ಟು ಕಚೇರಿ ಕಾರ್ಯ ಭಾಗದಲ್ಲಿ ಮೇಲುಗೈ ನಿಮ್ಮದೇ ಆಗಿರುತ್ತದೆ. ವೃತ್ತಿರಂಗದಲ್ಲಿ ಸ್ಥಾನಮಾನದ ಯೋಗವಿದೆ. ನೂತನ ಮಿತ್ರಾಗಮನದಿಂದ ಕಾರ್ಯಸಾಧನೆಗೆ ಅನುಕೂಲವಾದೀತು. ವೈವಾಹಿಕ ಭಾಗ್ಯಕ್ಕೆ ಸಕಾಲ.
ಕುಂಭ
ಸ್ವತಂತ್ರ ವ್ಯವಹಾರಕ್ಕೆ ಇದು ಸಕಾಲವಾದರೂ ದುಡುಕದಿರಿ. ಸರಕಾರಿ ಕೆಲಸಕಾರ್ಯಗಳಲ್ಲಿ ಅಡೆತಡೆಗಳು ತೋರಿ ಬಂದಾವು. ವೃತ್ತಿರಂಗದಲ್ಲಿ ಮುನ್ನಡೆ ಸಾಧಕವಾಗಲಿದೆ. ಮನೆ ಬದಲಾವಣೆ ಸಾಧ್ಯತೆ ಇದೆ.
ಮೀನ
ಉದ್ಯೋಗಿಗಳು ತಮ್ಮ ಪ್ರಯತ್ನಬಲದ ಫ‌ಲವನ್ನು ಪಡೆಯಲಿದ್ದಾರೆ. ಸಾಂಸಾರಿಕವಾಗಿ ಕುಟುಂಬಿಕವಾಗಿ ಎಲ್ಲರ ಸಹಕಾರ ನಿಮಗೆ ಸಿಗಲಿದೆ. ನಿರುದ್ಯೋಗಿಗಳಿಗೆ ತಮ್ಮ ಉದ್ಯೋಗದ ಬಗ್ಗೆ ಬದಲಾವಣೆ ತಂದೀತು.
Back to Top