ಮಾಧ್ಯಮ ತಂಡದ ಪರಿಸರ ಪ್ರೇಮ


Team Udayavani, Jul 14, 2017, 10:13 AM IST

14-KALA-6.jpg

ಮಂಗಳೂರಿನ ಪ್ರಸ್‌ ಕ್ಲಬ್‌ ಮತ್ತು ವೃತ್ತಿನಿರತ ಪತ್ರಕರ್ತರ ಸಂಘವು ಪತ್ರಿಕಾ ದಿನಾಚರಣೆಯಂದು ವಿಶಿಷ್ಟ ಮತ್ತು ವಿನೂತನವಾದ ಒಂದು ಮಾದರಿ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ಪತ್ರಿಕೆಗಳನ್ನು ಕತ್ತರಿಸಿ ಅಂಟಿಸಿ ಕೊಲಾಜ್‌ ಕಲಾಕೃತಿಯನ್ನಾಗಿ ಮಾಡಿ ಅದರಲ್ಲಿ ದಕ್ಷಿಣ ಭಾರತಕ್ಕೆ ಭದ್ರತಾ ಗೋಡೆಯಾಗಿರುವ ಪಶ್ಚಿಮ ಘಟ್ಟದ ಗಿರಿಕಣಿವೆ, ಕಾನನ, ಝರಿಗಳನ್ನು ರಚಿಸಿ ಪರಿಸರ ಸಂದೇಶವನ್ನು ಪಸರಿಸಲಾಯಿತು. ಪತ್ರಿಕೆಯ ಮಹತ್ವ ಮತ್ತು ಅಗತ್ಯ ಆ ಮೂಲಕ ಅಭಿವ್ಯಕ್ತಗೊಂಡು, ಪತ್ರಿಕೆಯು ಓದಿದ ಅನಂತರ ನಗಣ್ಯ ವಸ್ತುವಲ್ಲ; ಆ ಪೇಪರ್‌ ಹಾಳೆಗಳಿಗೂ ಜೀವ ತುಂಬಿ ಹಸಿರು ಪರಿಸರ ವನ್ನು ಶೋಭಿಸಬಹುದು ಎನ್ನುವ ಸಂದೇಶವು ಈ ಕೊಲಾಜ್‌ ಕಲಾಕೃತಿಯಲ್ಲಿ ಸ್ಪಷ್ಟವಾಗಿತ್ತು. 15 ಪತ್ರಿಕೆಗಳ ಕಪ್ಪು ಬಿಳುಪು ಮತ್ತು ಬಣ್ಣದ ಪುಟಗಳನ್ನು ಕಲಾಕೃತಿಯ ವಸ್ತು ವಿಚಾರಕ್ಕೆ ಅನುಗುಣವಾಗುವಂತೆ ಕತ್ತರಿಸಿ ಅಂಟಿಸಿ 16 ಅಡಿ ಅಗಲ, 3 ಅಡಿ ಎತ್ತರದ ಕಲಾಕೃತಿಯನ್ನು ರಚಿಸಲಾಗಿತ್ತು. ಪಶ್ಚಿಮ ಘಟ್ಟದ ಮೋಡಗಳಿಗೆ ಕಪ್ಪು ಬಿಳುಪು ಹಾಳೆಗಳನ್ನು ಕತ್ತರಿಸಿ ಜೋಡಿಸಿದರೆ; ಗಿರಿ, ಝರಿ, ಕಾನನ ಪ್ರದೇಶಗಳನ್ನು ಬಣ್ಣದ ಹಾಳೆಗಳ ಮೂಲಕ ವಿನ್ಯಾಸಗೊಳಿಸಲಾಗಿತ್ತು. ಹಸಿರು ಕಾನನ ಹಾಗೂ ಬೆಟ್ಟದಂಚಿನ ಹಾಸು ಹುಲ್ಲಿಗೆ ಹಳದಿ ಹಾಗೂ ಹಸಿರು ಬಣ್ಣಗಳನ್ನು ಜೋಡಿಸಿ ಕಣಿವೆ ಪ್ರದೇಶಗಳಿಗೆ ಕಂದು, ನೀಲಿ ಬಣ್ಣಗಳ ಪ್ರತಿಗಳನ್ನು ಅಂಟಿಸಿದುದರಿಂದ ಪಶ್ಚಿಮ ಘಟ್ಟದ ಅತೀ ಸೂಕ್ಷ್ಮ ಜೀವ ವೈವಿದ್ಯ ತಾಣಗಳು ಕಡು ತಿಳಿ ಬಣ್ಣಗಳ ಹೊಂದಾಣಿಕೆಯೊಂದಿಗೆ ಗೋಚರಿಸುತ್ತಿದ್ದವು.

ಕಲಾವಿದರಾದ ತಾರಾನಾಥ ಕೈರಂಗಳ, ಸುಧೀರ್‌ ಕಾವೂರು, ವಿಕ್ರಮ್‌ ಶೆಟ್ಟಿ, ಈರಣ್ಣ ತಿಪ್ಪಣ್ಣವರ್‌, ಶೈಲೇಶ್‌ ಕೋಟ್ಯಾನ್‌, ಪ್ರಿಯಾಂಕಾ ಈ ಕೊಲಾಜ್‌ ಕಲಾಕೃತಿಯನ್ನು ರಚಿಸಿದರು. ಕೊಲಾಜ್‌ನಲ್ಲಿ ವಿಶೇಷ ಪರಿಣತಿ ಹೊಂದಿರುವ ತಾರಾನಾಥ್‌ ಕೈರಂಗಳ ಅವರ “ಕೊಲಾಜ್‌ ಚಿತ್ರ ಪಯಣ’ ಎಂಬ ಶಾಲಾ ಮಕ್ಕಳ ಕೊಲಾಜ್‌ ಚಿತ್ರ ಪ್ರದರ್ಶನವನ್ನು ಇಲ್ಲಿ ಸ್ಮರಿಸಬಹುದಾಗಿದೆ. ಪ್ರಸ್‌ ಕ್ಲಬ್‌ ಹಾಗೂ ಮಂಗಳೂರಿನ ವೃತ್ತಿನಿರತ ಪತ್ರಕರ್ತರ ಸಂಘವು ಪತ್ರಿಕಾ ದಿನಾಚರಣೆಗೆ ಪೂರಕವಾಗುವಂತೆ ಹಾಗೂ ಪತ್ರಿಕೆಗಳ ಅಗತ್ಯವನ್ನು ಸಾರುವಂತೆ ಆಯೋಜಿಸಿದ್ದ ಈ ಕಾರ್ಯಕ್ರಮವು ಅರ್ಥಗರ್ಭಿತವಾಗಿತ್ತು. ಜತೆಗೆ ಕಾಗದವನ್ನು ಮರುಬಳಕೆ ಮಾಡುವಂತಹ, ನಿಸರ್ಗದ ಉಳಿವಿನ ಅಗತ್ಯವನ್ನು ಸಾರುವಂತಹ ಸಂದೇಶವೂ ಈ ಕೊಲಾಜ್‌ ಕಲಾಕೃತಿಯಲ್ಲಿ ಅಡಕವಾಗಿತ್ತು. ಹಳೆಯ ದಿನಪತ್ರಿಕೆಗಳಿಗೆ ಹೊಸಜೀವ ನೀಡುವ ಪ್ರಯತ್ನ ಇಲ್ಲಿ ಯಶಸ್ವಿಯಾಗಿದೆ. 

ದಿನೇಶ್‌ ಹೊಳ್ಳ

ಟಾಪ್ ನ್ಯೂಸ್

1-wewqeq

Kejriwal ಪತ್ನಿಯನ್ನು ರಾಬ್ರಿ ದೇವಿಗೆ ಹೋಲಿಸಿದ ಕೇಂದ್ರ ಸಚಿವ ಹರ್ದೀಪ್ ಪುರಿ

1-eqqwqw

Mukhtar Ansari ಸಾವಿನ ಪ್ರಕರಣ: ನ್ಯಾಯಾಂಗ ತನಿಖೆಗೆ ಆದೇಶಿಸಿದ ಕೋರ್ಟ್

ವಿಕಸಿತ ಭಾರತದಂತಹ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಇನ್ನೆಷ್ಟು ವರ್ಷ ಆಳ್ವಿಕೆ ಮಾಡಿದರೂ ಬಾರದು

ವಿಕಸಿತ ಭಾರತದಂತ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಎಷ್ಟು ವರ್ಷ ಆಳ್ವಿಕೆ ಮಾಡಿದರೂ ಸಾಧ್ಯವಾಗದು

it

Congress ಬಳಿಕ ಸಿಪಿಐಗೂ 11 ಕೋಟಿ ರೂ.ಬಾಕಿಗಾಗಿ ಐಟಿ ನೋಟಿಸ್

ಸಿರಿಯಾದ ಮೇಲೆ ಇಸ್ರೇಲ್ ವೈಮಾನಿಕ ದಾಳಿ… 5 ಹಿಜ್ಬುಲ್ ಸದಸ್ಯರು ಸೇರಿ 38 ಮಂದಿ ಹತ

ಸಿರಿಯಾದ ಮೇಲೆ ಇಸ್ರೇಲ್ ವೈಮಾನಿಕ ದಾಳಿ… 5 ಹಿಜ್ಬುಲ್ ಸದಸ್ಯರು ಸೇರಿ 38 ಮಂದಿ ಹತ

20-

Crime: ಗುದದ್ವಾರಕ್ಕೆ ಗಾಳಿ: ಸ್ನೇಹಿತನ ದುರ್ಮರಣ: ಕೃತ್ಯವೆಸಗಿದಾತನ ಬಂಧನ

Bidar; The man jumps into the water tank

Bidar; ಪತ್ನಿಯ ಅನೈತಿಕ ಸಂಬಂಧಕ್ಕೆ ಮನನೊಂದು ನೀರಿನ ಟ್ಯಾಂಕ್ ಗೆ ಬಿದ್ದು ಪತಿ ಆತ್ಮಹತ್ಯೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-wewqeq

Kejriwal ಪತ್ನಿಯನ್ನು ರಾಬ್ರಿ ದೇವಿಗೆ ಹೋಲಿಸಿದ ಕೇಂದ್ರ ಸಚಿವ ಹರ್ದೀಪ್ ಪುರಿ

partner kannada movie

Kannada Cinema; ಸ್ನೇಹಿತರ ಸುತ್ತ ‘ಪಾರ್ಟ್ನರ್‌’: ಟ್ರೇಲರ್‌, ಆಡಿಯೋದಲ್ಲಿ ಹೊಸಬರ ಚಿತ್ರ

1-eqqwqw

Mukhtar Ansari ಸಾವಿನ ಪ್ರಕರಣ: ನ್ಯಾಯಾಂಗ ತನಿಖೆಗೆ ಆದೇಶಿಸಿದ ಕೋರ್ಟ್

ವಿಕಸಿತ ಭಾರತದಂತಹ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಇನ್ನೆಷ್ಟು ವರ್ಷ ಆಳ್ವಿಕೆ ಮಾಡಿದರೂ ಬಾರದು

ವಿಕಸಿತ ಭಾರತದಂತ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಎಷ್ಟು ವರ್ಷ ಆಳ್ವಿಕೆ ಮಾಡಿದರೂ ಸಾಧ್ಯವಾಗದು

it

Congress ಬಳಿಕ ಸಿಪಿಐಗೂ 11 ಕೋಟಿ ರೂ.ಬಾಕಿಗಾಗಿ ಐಟಿ ನೋಟಿಸ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.