ಮಂಜೇಶ್ವರದ ರಾಷ್ಟ್ರಕವಿ ಭವನದಲ್ಲಿ ತೆಂಕಣ ಯಕ್ಷಗಾನದ ಮ್ಯೂಸಿಯಂ


Team Udayavani, Sep 23, 2017, 11:30 AM IST

23-Kalavihara.4.jpg

ಮಂಗಳೂರಿನಿಂದ ಕೇರಳಕ್ಕೆ ಬರಬೇಕಾದರೆ ಮಂಜೇಶ್ವರವನ್ನು ದಾಟದೇ ಬರಲಾಗದು. ಮಂಜೇಶ್ವರ ಎಂದಾಗ ಕನ್ನಡ ಸಾಹಿತ್ಯ- ಸಂಸ್ಕೃತಿ ಪ್ರೇಮಿಗಳಿಗೆ ಥಟ್ಟನೆ ನೆನಪಾಗುವ ಹೆಸರು ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ. ಹದಿನೆಂಟು ಭಾಷೆಗಳನ್ನು ಬಲ್ಲ ಕನ್ನಡದ ಅಭಿಮಾನದ ಕವಿ ಮಂಜೇಶ್ವರ ಗೋವಿಂದ ಪೈಗಳ ನಿವಾಸವೀಗ ಕುಪ್ಪಳ್ಳಿಯ ಕವಿ ಕುವೆಂಪು ನಿವಾಸ ಕವಿಶೈಲದಂತೆಯೇ ಸಾಹಿತ್ಯ- ಸಾಂಸ್ಕೃತಿಕ- ಅಧ್ಯಯನ ಕೇಂದ್ರವಾಗಿ ಮೈದಾಳುವ ಸಿದ್ಧತೆಯಲ್ಲಿದೆ. ಕೇರಳ-ಕರ್ನಾಟಕ ಜಂಟಿ ಸರಕಾರದ  ಅನುದಾನದೊಂದಿಗೆ, ಮಾಜಿ ಕೇಂದ್ರ ಸಚಿವ ವೀರಪ್ಪ ಮೊಯ್ಲಿ ಅವರ ವಿಶೇಷ ಮುತುವರ್ಜಿಯಲ್ಲಿ ಎರಡು ಕೋಟಿ ರೂ. ವೆಚ್ಚದಲ್ಲಿ `ಗಿಳಿವಿಂಡು’ ಎಂಬ ಹೆಸರಿನಲ್ಲಿ ಜೀರ್ಣೋದ್ಧಾರಗೊಂಡು ನವೀಕರಿಸಲ್ಪಟ್ಟ ಮಂಜೇಶ್ವರದ ಕವಿನಿವಾಸದಲ್ಲೀಗ ತೆಂಕುತಿಟ್ಟು ಯಕ್ಷಗಾನದ ಸುಸಜ್ಜಿತ ಮ್ಯೂಸಿಯಂ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ. ಇದು ಕೇರಳದಲ್ಲಿ ಅನುಷ್ಠಾನಕ್ಕೆ ಬಂದ ಮೊದಲ ಯಕ್ಷಗಾನ ಮ್ಯೂಸಿಯಂ. ತೆಂಕುತಿಟ್ಟು ಯಕ್ಷಗಾನ ಪ್ರಬೇಧ ಉಗಮಗೊಂಡ ಪ್ರದೇಶದಲ್ಲಿ ಯಕ್ಷಗಾನದ ಪ್ರಾಥಮಿಕ ಪರಿಚಯ ನೀಡುವ ಮ್ಯೂಸಿಯಂ ಸಾಕಾರಗೊಂಡಿರುವುದು ಯಕ್ಷಗಾನದ ವಾಲ್ಮೀಕಿಯೆಂದೇ ಕೊಂಡಾಡಲ್ಪಟ್ಟ ಪಾರ್ತಿಸುಬ್ಬನಿಗೆ ಸಲ್ಲುವ ಮನ್ನಣೆಯೂ ಹೌದು.


ರಾಷ್ಟ್ರಕವಿ ಗೋವಿಂದ ಪೈಗಳು ಯಕ್ಷಗಾನ ಸಾಹಿತ್ಯ ರಚಿಸಿದವರಲ್ಲ. ಆದರೆ ಯಕ್ಷಗಾನದ ವಾತಾವರಣದಲ್ಲಿ ಬೆಳೆದವರು, ಕಲೆಯನ್ನು ಪ್ರೀತಿಸಿದವರು. ಹಿಂದೊಮ್ಮೆ ಕವಿ ಪಾರ್ತಿಸುಬ್ಬ ಕುಂಬಳೆಯವನಲ್ಲ ಎಂಬ ವಾದ-ಸಂವಾದ ನಡೆದಾಗ ಆತ ಕುಂಬಳೆಯವನೆಂದು ಸಾರಲು ಪ್ರಪ್ರಥಮ ಹೋರಾಟಕ್ಕಿಳಿದವರು ಮಂಜೇಶ್ವರ ಗೋವಿಂದ ಪೈಗಳು. ಇಂದೀಗ ಕಾಲವುರುಳಿದೆ. ಸಾಂಸ್ಕೃತಿಕ ಸ್ಥಿತ್ಯಂತರಗಳು ಸಂಭವಿಸಿವೆ. ಗೋವಿಂದ ಪೈಗಳ ಕಾವ್ಯತಪೋಭೂಮಿಯಾದ ಮಂಜೇಶ್ವರದ ಅವರ ಮೂಲಮನೆ `ಗಿಳಿವಿಂಡು’ ಎಂಬ ಹೆಸರಿನಲ್ಲಿ ಸಾಂಸ್ಕೃತಿಕ ಅಧ್ಯಯನ ಕೇಂದ್ರವಾಗಿ ನಾಡಿಗೆ ಸಮರ್ಪಣೆಯಾಗಿದೆ. ಕವಿಮನೆಯೊಂದು ಸಾಹಿತ್ಯ-ಸಂಸ್ಕೃತಿಯ ಆರಾಧನೆ ಮತ್ತು ಅಧ್ಯಯನ ಕೇಂದ್ರವಾಗಿ ಪರಿಷ್ಕರಣೆಗೊಳ್ಳುವಾಗ ಅದರೊಳಗೆ ಪ್ರಪ್ರಥಮವಾಗಿ ಅನುಷ್ಠಾನಕ್ಕೆ ಬಂದದ್ದು ಯಕ್ಷಗಾನ ಮ್ಯೂಸಿಯಂ. ಪ್ರಸ್ತುತ ತಿಂಗಳಿಗೊಂದರಂತೆ ಸಾಹಿತ್ಯ-ಸಂಸ್ಕೃತಿ ಕಲಾಪಗಳು ಇಲ್ಲಿ ನಡೆಯತೊಡಗಿವೆ. ಈ ನಿಟ್ಟಿನಲ್ಲಿ ಇಲ್ಲಿಗೆ ಬಂದವರ ಕಣ್ಣರಳಿಸುತ್ತಿದೆ ಈ ಮ್ಯೂಸಿಯಂ. 

`ಯಕ್ಷದೇಗುಲ’ ಎಂಬ ಹೆಸರಿನಲ್ಲಿ ಕವಿಮನೆಯ ಒಂದು ಭಾಗವೇ ಯಕ್ಷಗಾನಕ್ಕಾಗಿ ಮೀಸಲಿರಿಸಲ್ಪಟ್ಟಿದೆ. ಇಲ್ಲಿ ಸ್ವತಃ ಯಕ್ಷಗಾನ ವೇಷಧಾರಿಗಳೇ ವೇಷ ತೊಟ್ಟು ನಿಂತುಕೊಂಡಿರುವಂತಹ ಆಳೆತ್ತರದ 10 ಯಕ್ಷ ಶಿಲ್ಪಗಳು ತೆಂಕುತಿಟ್ಟಿನ ಪ್ರಾತಿನಿಧಿಕ ವೇಷಗಳಾಗಿ ಸರದಿ ಸಾಲಲ್ಲಿ ನಿಂತಿವೆ. ನೈಜ ವೇಷಗಳನ್ನೇ ಹೋಲುವ ಈ ಬೊಂಬೆಗಳು ತೆಂಕಣ ಯಕ್ಷಗಾನದ ಪರಂಪರೆಯನ್ನು ಪ್ರತಿನಿಧಿಸುತ್ತಾ, ಪ್ರತಿಧ್ವನಿಸುತ್ತವೆ. ಈ ಗೊಂಬೆಗಳನ್ನು ನಿರ್ಮಿಸಿದವರು ಉಜಿರೆಯ ಶಿವಕುಮಾರ್‌. ಇದಕ್ಕೆ ಮುಖವರ್ಣಿಕೆ ಮತ್ತು ವೇಷಭೂಷಣಗಳನ್ನು ಒದಗಿಸಿದವರು ಪ್ರಸಾದನ ತಜ್ಞ ದೇವಕಾನ ಕೃಷ್ಣ ಭಟ್‌ ಬಳಗದವರು. ಯಕ್ಷಗಾನದ ಪುಂಡುವೇಷ, ಸ್ತ್ರೀವೇಷ, ಕೇಸರಿತಟ್ಟಿ, ರಾಜವೇಷ, ಭೀಮನಮುಡಿ, ಹೆಣ್ಣುಬಣ್ಣ, ಕಿರಾತ, ಹನೂಮಂತ, ಹಾಸ್ಯ ಸೇರಿದಂತೆ ಎಲ್ಲ ನಮೂನೆಯ ಪ್ರಾತಿನಿಧಿಕ ವೇಷಗಳು ಇಲ್ಲಿವೆ. ಈ ಹಿಂದೆ ಮಂಗಳೂರು ವಿವಿಯ ಯಕ್ಷಗಾನ ಅಧ್ಯಯನ ಕೇಂದ್ರದಲ್ಲಿ ಯಕ್ಷಗಾನ ಮ್ಯೂಸಿಯಂ ಸಾಕಾರಗೊಳಿಸಿದ ಅನುಭವದ ಹಿನ್ನೆಲೆಯಲ್ಲಿ ರಂಗನಿರ್ದೇಶಕ ಜೀವನ್‌ ರಾಂ ಸುಳ್ಯ ಅವರ ಮೇಲ್ನೋಟದಲ್ಲಿ ಈ ಮ್ಯೂಸಿಯಂ ಅಸ್ತಿತ್ವಕ್ಕೆ ಬಂದಿದೆ.


ಮ್ಯೂಸಿಯಂನೊಳಗೆ ವೇಷಗಳಷ್ಟೇ ಅಲ್ಲ. ಯಕ್ಷಗಾನದಲ್ಲಿ ವೇಷವೊಂದು ಧರಿಸುವ ಎಲ್ಲ ಆಭರಣಗಳು, ಧರಿಸುವ ಜವುಳಿಗಳನ್ನು ಜೋಡಿಸಿಟ್ಟು, ಅದರ ಕುರಿತು ಕನ್ನಡ, ಮಲಯಾಳಂ ಮತ್ತು ಇಂಗ್ಲಿಷ್‌ ಭಾಷೆಗಳಲ್ಲಿ ಪ್ರಾಥಮಿಕ ವಿವರಣೆ ನೀಡಲಾಗಿದೆ. ಯಕ್ಷಗಾನದಲ್ಲಿ ಈ ಹಿಂದೆ ಆಗಿಹೋದ, ಧ್ರುವತಾರೆ ಗಳೆಂದು ಕರೆಸಿಕೊಂಡ ಹಿರಿಯ, ಜನಪ್ರಿಯ ಕಲಾವಿದರ ಭಾವಚಿತ್ರಗಳು ಅವರ ಹೆಸರಿನೊಂದಿಗೆ ಇಲ್ಲಿ ಜೋಡಿಸಿಡಲ್ಪಟ್ಟಿವೆ. ಅಲ್ಲದೆ ಯಕ್ಷಲೋಕವನ್ನಾಳಿದ ಹಳೆಯ ತಲೆಮಾರಿನ ಪ್ರಸಿದ್ಧ ಕಲಾವಿದರ ಪ್ರಾತಿನಿಧಿಕ ವೇಷಗಳ ಚಿತ್ರಗಳೂ ಇಲ್ಲಿ ಅಲಂಕರಿಸಲ್ಪಟ್ಟಿವೆ. ಅಲ್ಲದೇ ಯಕ್ಷಗಾನದಲ್ಲಿ ಕಾಣಬರುವ ಪ್ರತಿಯೊಂದು ವೇಷಗಳ ಮುಖವರ್ಣಿಕೆಗಳ ವಿನ್ಯಾಸದ ಪ್ರತಿಕೃತಿ, ಯಕ್ಷಗಾನ ಬಯಲಾಟ ನಡೆಯುವ ಜಾಗದಲ್ಲಿ ಕಾಣುವ ರಂಗಸ್ಥಳ ಮತ್ತು ಕಲಾವಿದರು ಪಾತ್ರಧಾರಿಗಳಾಗಿ ಸಜ್ಜಾಗುವ ಚೌಕಿಯ ಕ್ರಮಗಳನ್ನು ಯಥಾವತ್‌ ಹೋಲುವ ಪ್ರತಿಕೃತಿಗಳೂ ಇಲ್ಲಿವೆ. ಪ್ರಾತಿನಿಧಿಕವಾಗಿ ಬಡಗುತಿಟ್ಟಿನ ಒಂದು ವೇಷವನ್ನೂ ಇಲ್ಲಿ ಅಳವಡಿಸಲಾಗಿದೆ.

ತೆಂಕುತಿಟ್ಟು ಯಕ್ಷಗಾನದ ಬಗ್ಗೆ ಅರಿಯದ  ಅರಿಯದ ಸಂಶೋಧಕರು, ಬರಹಗಾರರು, ವಿದ್ಯಾರ್ಥಿಗಳು ನಾಡಿನ ನಾನಾ ಕಡೆಯಿಂದ ಮಂಜೇಶ್ವರದ ಕವಿನಿವಾಸಕ್ಕೆ ಆಗಮಿಸಿದರೆ ಅವರಿಗೆ ಈ ನೆಲದ ಮಣ್ಣಿನ ಕಲೆಯ ಬಗ್ಗೆ ಪ್ರಾಥಮಿಕ ಪರಿಚಯ ನೀಡುವ ಉದ್ದೇಶದಿಂದ ಇಲ್ಲಿ ಮ್ಯೂಸಿಯಂ ಅಸ್ತಿತ್ವಕ್ಕೆ ಬಂದಿದೆ. ಈಗಾಗಲೇ ನೂರಾರು ಪ್ರಸಿದ್ಧರು ಈ ಮ್ಯೂಸಿಯಂಗೆ ಭೇಟಿ ಇತ್ತು, ಮಣ್ಣಿನ ಕಲೆಯನ್ನು ಕಾಪಾಡುವ ಕಾಳಜಿಗೆ ಪ್ರಶಂಸೆಯ ನುಡಿಗಳನ್ನಾಡಿದ್ದಾರೆ. `ಯಕ್ಷದೇಗುಲ’ ಎಂಬ ಹೆಸರಿನಲ್ಲಿ ಯಕ್ಷಗಾನದ ಹಿಮ್ಮೇಳ ಪರಿಕರ ಮತ್ತು ಮುಖಚಿತ್ರವನ್ನೊಳಗೊಂಡ ದ್ವಾರದಲ್ಲಿ ಮ್ಯೂಸಿಯಂನ ಒಳಗೆ ಬಂದೊಡ ನೆಯೇ ಹವಾನಿಯಂತ್ರಿತ ವಾತಾವರಣದಲ್ಲಿ ಯಕ್ಷಗಾನದ ಹಿಮ್ಮೇಳ, ಪದ್ಯ ಗಳನ್ನಾಲಿಸುತ್ತಾ ಮ್ಯೂಸಿಯಂ ನೋಡಬಹುದು, ಮಾಹಿತಿಗಳನ್ನು ಪಡೆಯ ಬಹುದು. ಪ್ರಸ್ತುತ ಮ್ಯೂಸಿಯಂ ಹೊಂದಿಕೊಂಡು ಕವಿಮನೆಯ ಒಳ ಅಂಗಳ ದಲ್ಲೊಂದು ವೇದಿಕೆ ಇದೆ. ಇದಕ್ಕೆ `ಪಾರ್ತಿಸುಬ್ಬ ಮಂಟಪ’ ಎಂದು ಹೆಸರು. ಕನಿಷ್ಟ 50 ಮಂದಿ ಕುಳಿತುಕೊಳ್ಳುವ ಸೌಕರ್ಯವಿದ್ದು, ಇದು ಕಲೆಯ ಕುರಿತು ಪ್ರಾತ್ಯಕ್ಷಿಕೆ-ಸಂವಾದ-ಅಧ್ಯಯನಕ್ಕೆ ಅವಕಾಶ ಒದಗಿಸುವ ಉದ್ದೇಶ ಹೊಂದಿದೆ.

ತೆಂಕುತಿಟ್ಟು ಯಕ್ಷಗಾನ ಉಗಮಗೊಂಡು ವಿಕಸಿಸಿದ ನಾಡಿನಲ್ಲಿ ಈ ಕಲೆಯನ್ನು ಇನ್ನಿತರರಿಗೆ ಪರಿಚಯಿಸುವ ಆಶಯದ ಮ್ಯೂಸಿಯಂ ಅಸ್ತಿತ್ವಕ್ಕೆ ಬಂದಿರುವುದು ರಾಷ್ಟ್ರಕವಿ ಗೋವಿಂದ ಪೈಗಳ ನಿವಾಸಕ್ಕೊಂದು ಅಲಂಕಾರವಾಗಿದೆ. ಯಕ್ಷಗಾನದಲ್ಲಿ ತೆಂಕು-ಬಡಗು-ಬಡಾಬಡಗು ಮತ್ತು ಮೂಡಲ ಪಾಯ -ಪಡುವಲಪಾಯ ಮತ್ತಿತರ ಪ್ರಬೇಧಗಳಿದ್ದರೂ ಅವುಗಳನ್ನು ಸಮಗ್ರ ಜನರಿಗೆ ಪರಿಚಯಿಸುವ ಮತ್ತು ಪರಂಪರೆಯನ್ನು ಕಾಪಿಡುವ ದೃಷ್ಟಿಯಲ್ಲಿ ಮ್ಯೂಸಿಯಂಗಳು ಅಸ್ತಿತ್ವಕ್ಕೆ ಬಂದಿರುವುದು ವಿರಳ. ಕಲಾ ವಿಸ್ತರಣೆಯ ದೃಷ್ಟಿ ಯಲ್ಲಿ ಇದು ಕಾಲಘಟ್ಟದ ಅಗತ್ಯ. ಪ್ರಸ್ತುತ ಮಂಜೇಶ್ವರದ ರಾಷ್ಟ್ರಕವಿ ನಿವಾಸಕ್ಕೆ ದೇಶದ ಯಾವುದೇ ಮೂಲೆಯಿಂದ ಯಾರೇ ಬರಲಿ, ಅವರು ತೆಂಕುತಿಟ್ಟು ಯಕ್ಷಗಾನದ ಬಗ್ಗೆ ಸಮಗ್ರವಾದ ಪ್ರಾಥಮಿಕ ಅರಿವನ್ನು ಹೊಂದಿ, ಅದರ ಸೌಂದರ್ಯವನ್ನು ಸವಿದು ಹೋಗುವಂತೆ ಈ ಮ್ಯೂಸಿಯಂ ಪ್ರಚೋದಿಸುತ್ತದೆ ಎಂದರದು ಉತ್ಪ್ರೇಕ್ಷೆಯಲ್ಲ.

ಎಂ.ನಾ. ಚಂಬಲ್ತಿಮಾರ್‌

ಟಾಪ್ ನ್ಯೂಸ್

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

ಧರ್ಮ ಮಾರ್ಗದಲ್ಲಿ ನಡೆದರಷ್ಟೇ ಜೀವನ ಸಾರ್ಥಕ: ಶ್ರೀ ವಿಧುಶೇಖರಶ್ರೀ

ಧರ್ಮ ಮಾರ್ಗದಲ್ಲಿ ನಡೆದರಷ್ಟೇ ಜೀವನ ಸಾರ್ಥಕ: ಶ್ರೀ ವಿಧುಶೇಖರಶ್ರೀ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

Karkala: ಕಾಂಗ್ರೆಸ್ಸಿನಿಂದ ಬೃಹತ್‌ ಪರಿವರ್ತನಾ ರ್‍ಯಾಲಿ

Karkala: ಕಾಂಗ್ರೆಸ್ಸಿನಿಂದ ಬೃಹತ್‌ ಪರಿವರ್ತನಾ ರ್‍ಯಾಲಿ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

ಕೊಪ್ಪಳ: ಮಗ ರಾಜಶೇಖರ ವಿರುದ್ಧ ತಂದೆ ನಾಮಪತ್ರ ಸಲ್ಲಿಕೆ!

ಕೊಪ್ಪಳ: ಮಗ ರಾಜಶೇಖರ ವಿರುದ್ಧ ತಂದೆ ನಾಮಪತ್ರ ಸಲ್ಲಿಕೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.