ಪಿಶಾಚದೋಷ ಎಂಬುದು ನಿಜವೇ, ಇದೆಯೇ?


Team Udayavani, Dec 10, 2016, 6:42 AM IST

588.jpg

ಹಲವರು ಫೋನಿನಲ್ಲಿ ಕೇಳುತ್ತಿರುತ್ತಾರೆ. ಪಿಶಾಚ ದೋಷ‚ ಎಂದರೇನು? ಪಿಶಾಚಿಗಳು ನಿಜಕ್ಕೂ ಇರುತ್ತವೆಯೇ? ಏನೆಲ್ಲಾ ತೊಂದರೆಗಳನ್ನು ಅವು ಕೊಡಬಲ್ಲವು? ಎಂಬುದಾಗಿ ಕೇಳುತ್ತಿರುತ್ಥಾರೆ. ಪಿಶಾಚ ದೋಷ ಎಂಬುದು ಸಾಮಾನ್ಯವಾಗಿ ಸರ್ವನಾಶಕ್ಕೂ ಮುಂದಾಗುತ್ತದೆಯೇ? ಎಂಬ ಪ್ರಶ್ನೆಯನ್ನು ಮುಂದಿಡುತ್ತಾರೆ/ ದೇವರು ಇದ್ದಾನೆಯೇ, ಇದ್ದರೆ ಎಲ್ಲಿದ್ದಾನೆ ನಮಗೆ ಏಕೆ ಕಾಣುವುದಿಲ್ಲ. ದೇವರು ಪುರುಷನೋ ಅಥವಾ ಸ್ತ್ರೀಯೋ? ಇಲ್ಲಾ ದೇವತೆ ದೇವಿ ಎಂದರೆ ಬೇರೆಯೇ? ಇತ್ಯಾದಿ ಅವರ ಕುತೂಹಲ. ಆದರೆ ದೇವರನ್ನೋ, ದೇವಿಯನ್ನೋ ತೋರಿಸುವುದು ಹೇಗೆ? ಇದು ಲಕ್ಷಾಂತರ ವರ್ಷಗಳಿಂದ ಕೇಳಿಕೊಂಡು ಬಂದ ಪ್ರಶ್ನೆ. ಉತ್ತರಿಸಲಾಗದ ಪ್ರಶ್ನೆ. ಸುಲಭವಾಗಿ ತಿಳಿಯಬಹುದಾದರೂ ಅರ್ಥವಾಗದಂತೆ ಕಿಲಾಡಿತನದಿಂದ ರೇಗಿಸುವ ಪ್ರಶ್ನೆ. ನಿಜವಾಗಿ ತಿಳಿದವರು ಸುಮ್ಮನೆ ಕೇಳಿಸಿಕೊಳ್ಳುವ ಪ್ರಶ್ನೆ. 

ಜಗತ್ತಿನಲ್ಲಿ ಗುಲಾಬಿಗಳು, ಗುಲಾಬಿಯ ಹೂವುಗಳಾಗಿಯೇ ಕಾಣಿಸಿಕೊಳ್ಳುತ್ತವೆಯೇ ವಿನಾ ಮಲ್ಲಿಗೆಯ ಹೂವಿನಂತೆ ಸಂಧಾನವನ್ನು ಅಥವಾ ತಮ್ಮ ಆಕೃತಿಯನ್ನು ಬದಲಿಸಿ ಕೊಳ್ಳಲಾರವು. ಹಾಗೆಯೇ ವಾಯುಮಂಡಲವೊಂದು ಇದೆಯೆಂದು ಹೇಳಬಹುದೇ ವಿನಾ ತೋರಿಸವುದು ಕಷ್ಟವೇ ಸರಿ. 75 ವರ್ಷದ ವೃದ್ಧರು ತಾನು ಯಾವಾಗ ಸಾಯುತ್ತೇನೆ ಎಂಬ ಪ್ರಶ್ನೆ ಕೇಳಿದ್ದರು.. 83 ವರ್ಷಗಳ ತನಕ ಯೋಚಿಸಬೇಡಿ ಎಂದು ಉತ್ತರಿಸಲಾಗಿತ್ತು. ಆದರೂ ಅವರಿಗೆ ಏನು ಮಾನಸಿಕ ತಾಕಲಾಟಗಳಿದ್ದವೋ ಎರಡು ಬಾರಿ ಬಾವಿಗೆ ಕಲ್ಲು ಕಟ್ಟಿಕೊಂಡು ಹಾರಿದ್ದರೂ ಬದುಕುಳಿದಿದ್ದರು. ಅವರು ಬಾವಿಗೆ ಹಾರಿದಾಗಲೆಲ್ಲ ಯಾರೋ ಒಬ್ಬರು ನೋಡಿ ಅವರನ್ನು ಬದುಕಿಸುತ್ತಿದ್ದರು. ಇದರಿಂದ ಏನೋ ಒಂದು ಬದುಕನ್ನು ಗೆಲ್ಲಿಸುವ ದೈವಶಕ್ತಿ ಇದೆ ಎಂದು ಅರಿವಾಗುತ್ತದೆ. ಆ ವೃದ್ಧರು ನಂತರ 83 ವರ್ಷಕ್ಕೆ ತೀರಿಕೊಂಡರು. ಈ ದೈವ ಶಕ್ತಿಗೆ ಎದುರಾಗಿ ಒಂದು ದುಷ್ಟ ಶಕ್ತಿ ತನ್ನ ಕರಾಳಹಸ್ತ ಚಾಚುತ್ತಿರುತ್ತದೆ. ಅವಘಡಗಳನ್ನು ಸೃಷ್ಟಿಸುತ್ತಲೇ ಇರುತ್ತದೆ . ಸೂಕ್ತವಾಗಿ ಜಾತಕದ ಪರಿಶೀಲನೆಯಿಂದಲೇ ಯಾವ ದುಷ್ಟ ಶಕ್ತಿ ನಕಾರಾತ್ಮಕ ಅಲೆಗಳನ್ನು ಸೃಷ್ಟಿಸುತ್ತಿದೆ ಎಂಬುದನ್ನು ಅರಿಯಬೇಕು. ಪಿಶಾಚ ಶಕ್ತಿಯು ಕೆಟ್ಟಗ್ರಹಗಳ ವಿಷಮ ಕಾರಸ್ಥಾನಗಳಿಂದಲೇ ಸೃಷ್ಟಿಯಾಗುತ್ತದೆ. ಪಿಶಾಚ ಶಕ್ತಿ ಎಂದರೆ ದೆವ್ವಭೂತಗಳಲ್ಲ. ದೆವ್ವಭೂತಗಳ ದೇಹತೊರೆದು ಅತಂತ್ರ ಸ್ಥಿತಿಯಲ್ಲಿರುವ ಆತ್ಮದ ತಾಕಲಾಟದ ಫ‌ಲದಿಂದಾಗಿ ಪಿಶಾಚಶಕ್ತಿ ಉದ್ಭವಿಸುವುದಲ್ಲ. ದೈವಕ್ಕೆ ಅದೃಷ್ಟಕ್ಕೆ ಎದುರಾಗಿ ಇವು ಕುಂತಂತ್ರವನ್ನು ನಡೆಸುತ್ತಿರುತ್ತದೆ. ಸೂಕ್ತವಾದ ಆತ್ಮಶಕ್ತಿ ಅನುಷ್ಠಾನಗಳಿಂದಲೇ ಪಿಶಾಚ ಶಕ್ತಿಯನ್ನು ದೂರಿಕರಿಸಿಕೊಳ್ಳುವ ಸಕಾರಾತ್ಮಕ ಶಕ್ತಿ ಜಾಗೃತಗೊಳಿಸಿಕೊಳ್ಳುವ ಕ್ರಿಯೆ ಸಾಧ್ಯವಾಗಬೇಕು.  ಸೂಕ್ತವಾದದ್ದು ಏನು? ಹೇಗೆ ?ಎಷ್ಟು ಸಾಧಿಸಲು ಸಾಧ್ಯ ಎಂಬುದನ್ನು ಜಾತಕದಿಂದ ತಿಳಿದು ಪಿಶಾಚಬಾಧೆಗೆ ಒಳಗಾದ ವ್ಯಕ್ತಿ ಅದನ್ನು ನಿವಾರಿಸಿಕೊಳ್ಳಲು ಪ್ರಯತ್ನಿಸಬೇಕು. 

ನಮ್ಮ ಜನಪ್ರಿಯ ನಟಿಯ ಜೀವನದಲ್ಲಿ ಪಿಶಾಚ ಶಕ್ತಿ
 ಈಕೆಯ ಜಾತಕದಲ್ಲಿ ಅರಿಷ್ಟ ಸ್ಥಾನಗಳಾದ ಛಿದ್ರ ಭಾವ, ಮರಣಸ್ಥಾನಗಳು ತಮ್ಮಲ್ಲಿನ ದೋಷಗಳಿಂದಾಗಿ ಹೊಂದಾಣಿಕೆ ತರದ ಗಂಡಿನ ಜೊತೆಗಿನ ಸ್ನೇಹವನ್ನು ಗಂಟು ಹಾಕುತ್ತಿದ್ದವು. ಬಾಳ ಸಂಗಾತಿಯ ಸ್ಥಳದ ರಾಹು ಗಂಡುಗಳನ್ನು ಗಂಟು ಹಾಕುತ್ತಿದ್ದನೇ ವಿನಾ ಈಕೆಯ ವ್ಯಕ್ತಿತ್ವವನ್ನು ಎತ್ತರಕ್ಕೆ ಏರಿಸುವ ನಿಟ್ಟಿನಲ್ಲಿ ಸೂಕ್ತವಾಗಿ ಸಂವೇದಿಸುವ ಜತೆಗಾರನನ್ನು ಒದಗಿಸುತ್ತಿರಲಿಲ್ಲ. ವ್ಯಕ್ತಿತ್ವದಲ್ಲಿ ಗಟ್ಟಿತನವಿರದೆ ಬಳಿಗೆ ಬರುವ ಗಂಡುಗಳು ಮತ್ತೆ ಬರುವುದಕ್ಕೆ ಹಿಂಜರಿಯುತ್ತಿದ್ದರು. ಏಕಾಂಗಿತನ ಹತ್ತಿಕ್ಕಲಾಗದ ಲೈಂಗಿಕ ದಾಹಗಳಿಂದಾಗಿ ಕುಡಿತಕ್ಕೆ ಶರಣಾಗಿ ಅತ್ಯದ್ಭುತ ಪ್ರತಿಭೆ ಮಿಂಚಿದ ನಟಿಯಾದರೂ ನರಳಿ ನರಳಿ ಕೊನೆಯುಸಿರೆಳೆದಳು. ಅವಳ ದೇಹಸುಖ ಪಡೆದ ಗಂಡಸರಾರೂ ಅವಳನ್ನು ಗೌರವಿಸಲಿಲ್ಲ. ಗೌರವ ಸಂಪಾದಿಸುವ ವ್ಯಕ್ತಿತ್ವ ಅವಳು ಪ್ರದರ್ಶಿಸಲಿಲ್ಲ. ತೆರೆಯ ಜೀವನದಲ್ಲಿ ಜನಪ್ರಿಯತೆಯ ಎತ್ತರ ಅದ್ಭುತ ತೆರೆಯ ಹಿಂದಿನ ಕುಸಿತ ಹೇಳಲಸದಳ. ವ್ಯಕ್ತಿತ್ವವನ್ನು ಒಂದು ಔನ್ನತ್ಯಕ್ಕೆ ಏರಿಸಿಕೊಳ್ಳು ಸಾಧ್ಯ ಮಾಡಿಕೊಡದೆ ಹೋದ ಶನೈಶ್ಚರನನ್ನು  ತೀರಾ ನಿಕೃಷ್ಟ ಮಟ್ಟಕಲ್ಕೆ ಇಳಿದ ಮಂಗಳ ಭಾಗ್ಯ ನೀಡುವ ಮಂಗಳನ ಶಕ್ತಿಯನ್ನು ಮುದುಡಿಸಿ ಪದೇ ಪದೇ ಲೈಂಗಿಕ ದಾಹಕ್ಕೆ ತಳ್ಳುತ್ತಿದ್ದ ಶುಕ್ರ ಪಾಪಪ್ರಜ್ಞೆಯನ್ನು ಹತ್ತಿಕ್ಕಲು ಅಸಾಧ್ಯವಾಗಿಸಿದ ಸೂರ್ಯ ಮತ್ತು ಚಂದ್ರ. ಜಾnನಬುದ್ಧಿಗಳಿದ್ದರೂ ವಿಷ ತುಂಬಿದ ಕೇತು.  ಹೀಗೆ ಒಟ್ಟಾಗಿ ಸೇರಿ ಆ ನಟಿಯನ್ನು ಹಿಂಸಿಸಿದ ಪಿಶಾಚ ಶಕ್ತಿಗಳಾದವು. ಹಾಗಾದರೆ ನಟಿಯಾಗಿ ಜನರ ನಡುವೆ ನಿಲ್ಲಿಸಿದವರಾರು? ಮುಖವಾಡ ತೊಟ್ಟ ಕುಜಶುಕ್ರರೇ ಇದಕ್ಕೂ ಕಾರಣರು. ಛಿದ್ರ ಭಾವಕ್ಕೆ ಬಂದೊದಗಿದ ನೂರಕ್ಕೆ ನೂರು ಮಟ್ಟದ ಅರಿಷ್ಟತನ ನಟಿಯನ್ನು ಪಿಶಾಚಿಯನ್ನಾಗಿಸಿತು.

ಭಾರತದ ಬಹು ಪ್ರತಿಭಾವಂತ ಕ್ರೀಡಾಪಟು
 ಇವರು ಯಾರು ಎಂಬ ವಿಚಾರ ಬೇಡ. ಆದರೆ ಪ್ರತಿಭೆಯಲ್ಲಿ ಇವರ ಎತ್ತರ ದೊಡ್ಡದೇ. ಒಂದು ಹಂತದವರೆಗೆ ಎಲ್ಲಾ ಅನುಮಾನಗಳನ್ನು ಎದುರಿಸಿ ತನ್ನ ವೃತ್ತಿಯ ಜೀವನದ ಪ್ರಾರಂಭವನ್ನು ಜೋರಾಗಿಯೇ ಶೂರುಗೈದರೆನ್ನಬಹುದು. ಹೊರಟ ವೇಗ ಗಮನಿಸಿದರೆ ಇವರ ಕ್ಷೇತ್ರದ ಆಟದ ಪ್ರಕಾರದಲ್ಲಿನ ಎಷ್ಟೋ ಅದ್ಭುತ ಪ್ರತಿಭೆಗಳನ್ನು ಹಿಂದಿಕ್ಕಿ ಪುಡಿಗುಟ್ಟುವ ಸಾಮರ್ಥ್ಯ ಸುಸ್ಪಷ್ಟ. ಆದರೆ ಮಂಗಳ ರಾಹು ಶನೈಶ್ಚರರರೆಲ್ಲಾ ಭಾಗ್ಯವನ್ನು ಮೀರಿದ ಪಿಶಾಚ ಶಕ್ತಿಗಳಾಗಿ ಪರಿವರ್ತನೆಗೊಂಡಿದ್ದರು. ಏಕಾಂಗಿತನ ಕೀಳರಿಮೆಗಳಿಂದಾಗಿ ಆಕರ್ಷಿತರಾಗಿ ಬರುತ್ತಿದ್ದ ಗೆಳತಿಯರೊಡನೆ ತನ್ನ ಬಾಲ್ಯದ ಅವಮಾನಗಳನ್ನು ಹೇಳಿಕೊಳ್ಳುವುದೇ ವರ್ತಮಾನವನ್ನು ಮರೆಯುವ ದಾರುಣತೆಯ ಅಚ್ಛಾದಿನ ಹೊರಹಾಕದಿರಲು ಸಾಧ್ಯವಾಗುತ್ತಿರಲಿಲ್ಲ. ಗೆಳತಿಯರಾಗ ಬಯಸಿದ ಹುಡುಗಿಯರಲ್ಲಿ ತನ್ನನ್ನು ಸಂತೈಯಿಸಿ ಉತ್ತೇಜನದ ಮಾತುಗಳನ್ನು ನಿರೀಕ್ಷಿಸುತ್ತಿದ್ದ. ಆದರೆ ಅವರಿಗೆ ಈತ ಅರೆಹುಚ್ಚನಂತೆಯೋ, ಪೆದ್ದನಂತೆಯೋ ಕಂಡು ಅವನಿಂದ ದೂರವಾಗುತ್ತಿದ್ದರು. ಬಾಲ್ಯದ ಅವಮಾನ ವರ್ತಮಾನದ ಪ್ರೇಮ ವೈಫ‌ಲ್ಯ ಇನ್ನಷ್ಟು ದುಃಖಗಳನ್ನು ಕಟ್ಟಿಕೊಟ್ಟವೇ ವಿನಾ ಸ್ಥೈರ್ಯದಿಂದ ಹಿಂದಿನದನ್ನು ಮರೆತು ವರ್ತಮಾನವನ್ನು ಪ್ರೀತಿಸಲು ಆಗಲಿಲ್ಲ. ತನ್ನ ಶಕ್ತಿ ಪ್ರದರ್ಶನವನ್ನು ತೋರಿಸಲೇ ಬೇಕಾದ ಅಂಗಳದಲ್ಲಿ ಸಹಜವಾಗಿಯೇ ವರ್ತಮಾನ ಕುಂಟುತ್ತಿತ್ತು. ಈ ಕುಂಟುವ ಕ್ರಿಯೆಯನ್ನು ಮೃದು ಹೃದಯದಿಂದ ಸ್ವೀಕರಿಸಿ ಇವನನ್ನು ಹುರಿದುಂಬಿಸುವ ಗಾಡ್‌ ಫಾದರುಗಳು ಇರಲಿಲ್ಲ. ಮಿಂಚಬೇಕಾಗಿದ್ದ ನಕ್ಷತ್ರವು ದಾರುಣವಾದ ಪತನವನ್ನು ಕಂಡಿತು. ಜೊತೆಗೆ ಇದ್ದ ಗೆಳೆಯರು ಮುಂದೆ ಸಾಗಿದ್ದರು. 

ಕರ್ನಾಟಕ ಕಂಡ ಎರಡು ಅದ್ವಿತೀಯ ರಾಜಕಾರಣಿಗಳು
 ಹೆಸರು ಬೇಡ, ಕುಡಿತ ಮತ್ತು ಸುಖಕ್ಕಾಗಿನ ಸಂಗಾತಿಗಳು ಇವರ ಕುರುಡು ಸಾಧನಗಳಾದವು. ರಾಜಕಾರಣ ವಿವಿಧ ಕಾರಣಗಳಿಂದಾಗಿ ನಾಯಕನನ್ನು ಭ್ರಷ್ಟಗೊಳಿಸಿಯೇ ತೀರುವ ರಂಗವಾಗಿ ಬೆಳೆದುನಿಂತದ್ದಿ ಸ್ವತಂತ್ರ ಭಾರತದ ಬಹುದೊಡ್ಡ ವಿಪರ್ಯಾಸ. ಹಣವಿರದೆ ಏನು ಮಾಡಲು ಸಾಧ್ಯ? ದಾಳಗಳನ್ನು ಉರುಳಿಸದೆ ಯಾವ ರಾಜಕೀಯ ಪಗಡೆಯಾಟ ಸಾಧ್ಯ? ಇವರಿಂದ ಮೇಲೇರಿದವರೇ ಸೂಕ್ತ ಸಂದರ್ಭದಲ್ಲಿ ಕೈಕೊಟ್ಟರು. ತನಗೆ ಕೈ ಕೊಡಲು ಯಾರಿಗೆ ಸಾಧ್ಯ? ಎಂಬ ಆತ್ಮವಿಶ್ವಾಸ.  ಆದರೆ ಛಿದ್ರಭಾವದ ಭ್ರಮಾತ್ಮಕ ಸ್ಥಿತಿಗೆ ಜೀವ ತುಂಬುವ ಗ್ರಹಗಳು ಕೇತುರಾಹುಗಳು  ಪಿಶಾಚ ಶಕ್ತಿಗಳಾಗಿ ಸಂಪೂರ್ಣವಾಗಿ ಇವರನ್ನು ನಿಸ್ತೇಜಗೊಳಿಸಿದ್ದಾರೆ.  

ಅನಂತಶಾಸ್ತ್ರಿ    
 

ಟಾಪ್ ನ್ಯೂಸ್

Congress ಅಭ್ಯರ್ಥಿ ಡಿ.ಕೆ. ಸುರೇಶ್‌ 6 ಮಂದಿ ಆಪ್ತರ ಮನೆ ಮೇಲೆ ಐಟಿ ದಾಳಿ

Congress ಅಭ್ಯರ್ಥಿ ಡಿ.ಕೆ. ಸುರೇಶ್‌ 6 ಮಂದಿ ಆಪ್ತರ ಮನೆ ಮೇಲೆ ಐಟಿ ದಾಳಿ

Congress ವಿರುದ್ಧ ಬಿಜೆಪಿ ಕ್ಯೂಆರ್‌ ಕೋಡ್‌ ಸಮರ

Congress ವಿರುದ್ಧ ಬಿಜೆಪಿ ಕ್ಯೂಆರ್‌ ಕೋಡ್‌ ಸಮರ

Lok Sabha Elections; ಕುಮಾರಸ್ವಾಮಿ ಪರ ಕೊನೆಗೂ ಪ್ರಚಾರಕ್ಕೆ ಬಾರದ ಸುಮಲತಾ

Lok Sabha Elections; ಕುಮಾರಸ್ವಾಮಿ ಪರ ಕೊನೆಗೂ ಪ್ರಚಾರಕ್ಕೆ ಬಾರದ ಸುಮಲತಾ

ಮಹಿಳೆಯರಿಗೆ 2 ಸಾವಿರ ಕೊಟ್ಟು ಗಂಡಸರ ಜೇಬಿಗೆ ಕತ್ತರಿ: ಕುಮಾರಸ್ವಾಮಿ

ಮಹಿಳೆಯರಿಗೆ 2 ಸಾವಿರ ಕೊಟ್ಟು ಗಂಡಸರ ಜೇಬಿಗೆ ಕತ್ತರಿ: ಕುಮಾರಸ್ವಾಮಿ

OBC ವರ್ಗಕ್ಕೆ ಕಾಂಗ್ರೆಸ್‌ನಿಂದ ಅನ್ಯಾಯ: ಸುನಿಲ್‌ ಕುಮಾರ್‌

OBC ವರ್ಗಕ್ಕೆ ಕಾಂಗ್ರೆಸ್‌ನಿಂದ ಅನ್ಯಾಯ: ಸುನಿಲ್‌ ಕುಮಾರ್‌

ಸರಕಾರದ ಖಜಾನೆ ಖಾಲಿ, ರೈತರಿಗೆ ಪರಿಹಾರ ನೀಡಲು ಹಣವಿಲ್ಲ: ವಿಜಯೇಂದ್ರ

ಸರಕಾರದ ಖಜಾನೆ ಖಾಲಿ, ರೈತರಿಗೆ ಪರಿಹಾರ ನೀಡಲು ಹಣವಿಲ್ಲ: ವಿಜಯೇಂದ್ರ

ಬಿಜೆಪಿಗೆ ಅಭ್ಯರ್ಥಿ ಇರಲಿಲ್ಲ, ಎಚ್‌ಡಿಕೆಗೆ ಧೈರ್ಯ ಇರಲಿಲ್ಲ: ಡಿಕೆಶಿ

Bangalore Rural; ಬಿಜೆಪಿಗೆ ಅಭ್ಯರ್ಥಿ ಇರಲಿಲ್ಲ, ಎಚ್‌ಡಿಕೆಗೆ ಧೈರ್ಯ ಇರಲಿಲ್ಲ: ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Astrology 2024: 2024ರಲ್ಲಿ ಮಿಶ್ರ ಫ‌ಲಗಳೇ ಅಧಿಕ-ರಾಜ್ಯದಲ್ಲೇನಾಗುತ್ತದೆ?

Astrology 2024: 2024ರಲ್ಲಿ ಮಿಶ್ರ ಫ‌ಲಗಳೇ ಅಧಿಕ-ರಾಜ್ಯದಲ್ಲೇನಾಗುತ್ತದೆ?

ಜ್ಯೋತಿಷ್ಯದಲ್ಲಿ ನವಗ್ರಹಕ್ಕಿಂತಲೂ ನಕ್ಷತ್ರಗಳಿಗೆ ಹೆಚ್ಚು ಪ್ರಾಮುಖ್ಯತೆ ಯಾಕೆ ಕೊಡಲಾಗಿದೆ?

ಜ್ಯೋತಿಷ್ಯದಲ್ಲಿ ನವಗ್ರಹಕ್ಕಿಂತಲೂ ನಕ್ಷತ್ರಗಳಿಗೆ ಹೆಚ್ಚು ಪ್ರಾಮುಖ್ಯತೆ ಯಾಕೆ ಕೊಡಲಾಗಿದೆ?

ಶುಭ ವಿಚಾರ ತಿಳಿಯುವ ಗೋಚಾರ ಫಲ ಎಂದರೇನು, ಗುರುದೆಸೆ ಯಾವಾಗ ಆರಂಭವಾಗಲಿದೆ…

ಶುಭ ವಿಚಾರ ತಿಳಿಯುವ ಗೋಚಾರ ಫಲ ಎಂದರೇನು, ಗುರುಬಲ ಯಾವಾಗ ಆರಂಭವಾಗಲಿದೆ…

jjhgfd

ಮಾರಕಾಧಿಪತಿ, ಭಾದಕಾಧಿಪತಿ: ಅಕಾಲಿಕ ಮರಣದ ಬಗ್ಗೆ “ಅಷ್ಠಮ ಸ್ಥಾನ” ಮುನ್ಸೂಚನೆ ಕೊಡುತ್ತದೆಯೇ?

ಗಜಕೇಸರಿ ಯೋಗ… ಈ ಯೋಗ ಹೇಗೆ ಉಂಟಾಗುತ್ತದೆ, ಇದರ ಮಹತ್ವವೇನು?

ಗಜಕೇಸರಿ ಯೋಗ… ಈ ಯೋಗ ಹೇಗೆ ಉಂಟಾಗುತ್ತದೆ, ಇದರ ಮಹತ್ವವೇನು?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಕೊಲೆಗಾಗಿಯೇ ಚಾಕು ಖರೀದಿಸಿದ್ದ ಫ‌ಯಾಜ್‌: ಮೂರೂವರೆ ತಾಸು ಸ್ಥಳ ಮಹಜರು ಮಾಡಿದ ಸಿಐಡಿ ತಂಡ

ಕೊಲೆಗಾಗಿಯೇ ಚಾಕು ಖರೀದಿಸಿದ್ದ ಫ‌ಯಾಜ್‌: ಮೂರೂವರೆ ತಾಸು ಸ್ಥಳ ಮಹಜರು ಮಾಡಿದ ಸಿಐಡಿ ತಂಡ

Congress ಅಭ್ಯರ್ಥಿ ಡಿ.ಕೆ. ಸುರೇಶ್‌ 6 ಮಂದಿ ಆಪ್ತರ ಮನೆ ಮೇಲೆ ಐಟಿ ದಾಳಿ

Congress ಅಭ್ಯರ್ಥಿ ಡಿ.ಕೆ. ಸುರೇಶ್‌ 6 ಮಂದಿ ಆಪ್ತರ ಮನೆ ಮೇಲೆ ಐಟಿ ದಾಳಿ

Congress ವಿರುದ್ಧ ಬಿಜೆಪಿ ಕ್ಯೂಆರ್‌ ಕೋಡ್‌ ಸಮರ

Congress ವಿರುದ್ಧ ಬಿಜೆಪಿ ಕ್ಯೂಆರ್‌ ಕೋಡ್‌ ಸಮರ

Lok Sabha Elections; ಕುಮಾರಸ್ವಾಮಿ ಪರ ಕೊನೆಗೂ ಪ್ರಚಾರಕ್ಕೆ ಬಾರದ ಸುಮಲತಾ

Lok Sabha Elections; ಕುಮಾರಸ್ವಾಮಿ ಪರ ಕೊನೆಗೂ ಪ್ರಚಾರಕ್ಕೆ ಬಾರದ ಸುಮಲತಾ

ಮಹಿಳೆಯರಿಗೆ 2 ಸಾವಿರ ಕೊಟ್ಟು ಗಂಡಸರ ಜೇಬಿಗೆ ಕತ್ತರಿ: ಕುಮಾರಸ್ವಾಮಿ

ಮಹಿಳೆಯರಿಗೆ 2 ಸಾವಿರ ಕೊಟ್ಟು ಗಂಡಸರ ಜೇಬಿಗೆ ಕತ್ತರಿ: ಕುಮಾರಸ್ವಾಮಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.