Updated at Wed,24th May, 2017 11:33AM IST
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

'ಲೀಡರ್‌' ಉದಯವಾಣಿ ವೆಬ್ ಸೈಟ್ ನಲ್ಲಿ ಟ್ರೇಲರ್ ರಿಲೀಸ್

ಶಿವರಾಜಕುಮಾರ್‌ ಅಭಿನಯದ "ಲೀಡರ್‌' ಚಿತ್ರದ ಪ್ರಚಾರ ಕೆಲಸವನ್ನು ಚಿತ್ರತಂಡ ಶುರು ಮಾಡಿರಲಿಲ್ಲ. ಅದಕ್ಕೆ ಕಾರಣ "ಶ್ರೀಕಂಠ'. ಶಿವರಾಜಕುಮಾರ್‌ ಅಭಿನಯದ "ಶ್ರೀಕಂಠ' ಚಿತ್ರದ ಬಿಡುಗಡೆ ಜನವರಿ ಆರಕ್ಕೆ ನಿಗದಿಯಾಗಿತ್ತು. ಈಗ ಚಿತ್ರ ಬಿಡುಗಡೆಯಾಗಿರುವುದರಿಂದ, "ಲೀಡರ್‌' ಚಿತ್ರತಂಡದವರು ಚಿತ್ರದ ಪ್ರಚಾರ ಕೆಲಸವನ್ನು ಶುರು ಮಾಡಿದ್ದಾರೆ. ಇದರ ಮೊದಲ ಹಂತವಾಗಿ "ಲೀಡರ್‌' ಚಿತ್ರದ ಟ್ರೇಲರ್‌ ಬಿಡುಗಡೆಯಾಗಲಿದೆ. ಟ್ರೇಲರ್‌ ಬಿಡುಗಡೆಯು ಜನವರಿ 13ರ ಶುಕ್ರವಾರದಂದು ನಿಗದಿಯಾಗಿದ್ದು, ಅಂದು ಮೊಟ್ಟ ಮೊದಲ ಬಾರಿಗೆ ಉದಯವಾಣಿ ಡಾಟ್‌ಕಾಮ್‌ ಮೂಲಕ ಬಿಡುಗಡೆಯಾಗಲಿದೆ.

ಈ ಟ್ರೇಲರ್‌ನ ವಿಶೇಷವೆಂದರೆ, ಈ ಟ್ರೇಲರ್‌ ಸಂಪೂರ್ಣ ಶಿವಮಯವಾಗಿರುವುದು. ಅಂದರೆ ಶಿವರಾಜಕುಮಾರ್‌ಮಯವಾಗಿರುವುದು. ಇಲ್ಲಿ ಅವರ ಲುಕ್‌, ಖದರ್‌, ಸ್ಟೈಲ್‌ ಎಲ್ಲವೂ ಪರಿಚಯಿಸಬೇಕೆಂಬುದು ಚಿತ್ರತಂಡದ ಉದ್ದೇಶ. ಅದೇ ಕಾರಣಕ್ಕೆ ಶಿವರಾಜಕುಮಾರ್‌ ಅವರ ಎಕ್ಸ್‌ಕ್ಲೂಸಿವ್‌ ಟ್ರೇಲರ್‌ ಬಿಡುಗಡೆ ಮಾಡಲಾಗುತ್ತದೆ. ಅಂದಹಾಗೆ, "ಲೀಡರ್‌' ಚಿತ್ರದ ಶೇ 70ರಷ್ಟು ಚಿತ್ರೀಕರಣ ಮುಗಿದಿದೆ. ಮಾತು, ಹಾಡು, ಫೈಟು ಎಲ್ಲವೂ ಮುಗಿದಿದೆ. ಇನ್ನು ಚಿತ್ರತಂಡವು ಕಾಶ್ಮೀರದಲ್ಲಿ ಚಿತ್ರೀಕರಣ ಮಾಡುವುದಕ್ಕೆ ಉದ್ದೇಶಿಸಿತ್ತು. ಈಗ ಚಿತ್ರೀಕರಣ ಮನಾಲಿಗೆ ಶಿಫ್ಟ್ ಆಗಲಿದೆಯಂತೆ.

ಅದರ ಜೊತೆಗೆ ಒಂದು ಹಾಡನ್ನು ಖತಾರ್‌ನಲ್ಲಿ ಚಿತ್ರೀಕರಿಸಬೇಕು ಎಂಬ ಯೋಚನೆಯೂ ಇದೆ. ಹೀಗೆ ಖತಾರ್‌ ಮತ್ತು ಮನಾಲಿ ಚಿತ್ರೀಕರಣವು ಫೆಬ್ರವರಿ 20ರ ಹೊತ್ತಿಗೆ ಮುಗಿಯಲಿದೆ. "ಲೀಡರ್‌' ಚಿತ್ರದಲ್ಲಿ ದೊಡ್ಡ ತಾರಾಬಳಗವೇ ಇದೆ. "ಲೀಡರ್‌' ಚಿತ್ರದಲ್ಲಿ ಪ್ರಣೀತಾ ನಾಯಕಿಯಾಗಿದ್ದಾರೆ. ಇನ್ನು ಶರ್ಮಿಳಾ ಮಾಂಡ್ರೆ, ಆಶಿಕಾ, ವಂಶಿಕೃಷ್ಣ, ಚಿ. ಗುರುದತ್‌, ವಿಜಯ್‌ ರಾಘವೇಂದ್ರ, ಗುರು ಜಗ್ಗೇಶ್‌ ಹಾಗೂ ಯೋಗಿ ನಟಿಸುತ್ತಿದ್ದಾರೆ. ಇನ್ನು ತಂತ್ರಜ್ಞರ ಬಗ್ಗೆ ಹೇಳುವುದಾದರೆ, ಈ ಚಿತ್ರವನ್ನು ಸಹನಾ ಮೂರ್ತಿ ನಿರ್ದೇಶಿಸುತ್ತಿದ್ದಾರೆ.

ಕಥೆ, ಚಿತ್ರಕಥೆ ಸಹ ಅವರದ್ದೇ. ಎರಡು ವರ್ಷಗಳ ಹಿಂದೆ ಬಿಡುಗಡೆಯಾದ "ರೋಸ್‌' ಎಂಬ ಅಜೇಯ್‌ ರಾವ್‌ ಹಾಗೂ ಶ್ರಾವ್ಯ ಅಭಿನಯದ ಚಿತ್ರವನ್ನು ಅವರು ನಿರ್ದೇಶಿಸಿದ್ದರು. ಈಗ ಈ ಚಿತ್ರದ ಮೂಲಕ ಅವರು ನಿರ್ದೇಶನಕ್ಕೆ ವಾಪಸ್ಸಾಗುತ್ತಿದ್ದಾರೆ. ಆ ಚಿತ್ರವನ್ನು ನಿರ್ಮಿಸಿದ್ದ ತರುಣ್‌ ಶಿವಪ್ಪ ಈ ಚಿತ್ರದ ನಿರ್ಮಾಪಕರು. ಅವರೊಂದಿಗೆ ಹಾರ್ದಿಕ್‌ ಶೆಟ್ಟಿ ಸಹ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಇನ್ನು "ರೋಸ್‌'ಗೆ ಛಾಯಾಗ್ರಹಣ ಮಾಡಿದ್ದ ಗುರುಪ್ರಶಾಂತ್‌ ರೈ, ಸಂಗೀತ ನೀಡಿದ್ದ ವೀರ್‌ ಸಮರ್ಥ್ ಎಲ್ಲರೂ ಈ ಚಿತ್ರದಲ್ಲೂ ಮುಂದುವರೆದಿದ್ದಾರೆ.


More News of your Interest

Trending videos

Back to Top