Updated at Thu,25th May, 2017 3:04AM IST
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ದಶರಥನ ಜೋಡಿಯಾದ ಸೋನಿಯಾ

ಫೆಬ್ರವರಿಯಲ್ಲಿ ರವಿಚಂದ್ರನ್‌ ಅವರ ಮೂರು ಸಿನಿಮಾಗಳಿಗೆ ಒಂದೇ ದಿನ ಮುಹೂರ್ತವಾಗಿತ್ತು. "ರಾಜೇಂದ್ರ ಪೊನ್ನಪ್ಪ', "ದಶರಥ' ಹಾಗೂ "ಬಕಾಸುರ' ಚಿತ್ರಗಳು ಆರಂಭವಾಗಿದ್ದವು. ಆ ಚಿತ್ರಗಳು ಯಾವ ಹಂತದಲ್ಲಿವೆ, ಯಾರ್ಯಾರು ಆಯ್ಕೆಯಾದರು ಎಂಬ ಪ್ರಶ್ನೆ ಅನೇಕರಲ್ಲಿತ್ತು. ಮೂರು ಚಿತ್ರಗಳಲ್ಲಿ ಎಂ.ಎಸ್‌.ರಮೇಶ್‌ ನಿರ್ದೇಶನದ "ದಶರಥ' ಚಿತ್ರದ ಚಿತ್ರೀಕರಣ ಆರಂಭಾಗಿದೆ. ಈಗಾಗಲೇ ಸತತ 15 ದಿನಗಳ ಕಾಲ ಚಿತ್ರೀಕರಣ ಬೆಂಗಳೂರು ಸುತ್ತಮುತ್ತ ನಡೆದಿದೆ.

"ದಶರಥ' ಚಿತ್ರದ ಮೂಲಕ ಸೋನಿಯಾ ಅಗರ್‌ವಾಲ್‌ ಮತ್ತೆ ಕನ್ನಡಕ್ಕೆ ಬಂದಿದ್ದಾರೆ. ಯಾವ ಸೋನಿಯಾ ಅಗರ್‌ವಾಲ್‌ ಎಂದರೆ ನಿಮಗೆ ಸುದೀಪ್‌ ಅವರ "ಚಂದು' ಚಿತ್ರವನ್ನು ತೋರಿಸಬೇಕು. ಈ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದು ಇದೇ ಸೋನಿಯಾ ಅಗರ್‌ವಾಲ್‌. ಆ ಚಿತ್ರ 2002ರಲ್ಲಿ ತೆರೆಕಂಡಿತ್ತು. ಆ ನಂತರ ಸೋನಿಯಾ ಯಾವುದೇ ಕನ್ನಡ ಚಿತ್ರಗಳಲ್ಲಿ ನಟಿಸಿರಲಿಲ್ಲ. ಈಗ ಸುಮಾರು 15 ವರ್ಷಗಳ ನಂತರ ಮತ್ತೆ ಸೋನಿಯಾ "ದಶರಥ' ಮೂಲಕ ಕನ್ನಡಕ್ಕೆ ಬಂದಿದ್ದಾರೆ.

ಈ ಚಿತ್ರದಲ್ಲಿ ರವಿಚಂದ್ರನ್‌ ಜೋಡಿಯಾಗಿ ನಟಿಸುತ್ತಿರುವ ಸೋನಿಯಾ ಅಗರ್‌ವಾಲ್‌ಗೆ ಒಳ್ಳೆಯ ಪಾತ್ರವಿದೆಯಂತೆ. ಒಂದು ಕಡೆ ಒಳ್ಳೆಯ ಪಾತ್ರ, ಇನ್ನೊಂದು ಕಡೆ ರವಿಚಂದ್ರನ್‌ ಎಂಬ ಕಾರಣಕ್ಕೆ ಸೋನಿಯಾ ಈಗ "ದಶರಥ' ತಂಡ ಸೇರಿಕೊಂಡಿದ್ದಾರೆ. 

ಹಾಗಂತ "ದಶರಥ'ನ ಜೊತೆ ಕೇವಲ ಸೋನಿಯಾ ಅಷ್ಟೇ ಇಲ್ಲ, ಪ್ರಿಯಾಮಣಿ ಕೂಡಾ ಪ್ರಮುಖ ಪಾತ್ರ ಮಾಡುತ್ತಿದ್ದಾರೆ. ಈ ಹಿಂದೆ ರಿಯಾಲಿಟಿ ಶೋನಲ್ಲಿ ಜಡ್ಜ್ ಆಗಿದ್ದ ರವಿಚಂದ್ರನ್‌ ಹಾಗೂ ಪ್ರಿಯಾಮಣಿ ಈ ಚಿತ್ರದಲ್ಲಿ ಒಂದಾಗಿದ್ದಾರೆ. ಈಗಾಗಲೇ ಚಿತ್ರೀಕರಣದಲ್ಲೂ ಭಾಗವಹಿಸಿದ್ದಾರೆ. ಈ ಚಿತ್ರದಲ್ಲಿ ರವಿಚಂದ್ರನ್‌ ಲಾಯರ್‌ ಪಾತ್ರ ಮಾಡುತ್ತಿದ್ದಾರೆ.


More News of your Interest

Trending videos

Back to Top