ಇಂದು ಡಾ.ರಾಜ್‌ 89ನೇ ಹುಟ್ಟುಹಬ್ಬ

Team Udayavani, Apr 24, 2017, 11:19 AM IST

Raj-10.jpg

ಇಂದು ಮೇರು ಕಲಾವಿದ ಡಾ.ರಾಜಕುಮಾರ್‌ ಅವರ 89 ನೇ ಹುಟ್ಟುಹಬ್ಬ. ಅಭಿಮಾನಿಗಳ ಪಾಲಿನ ದೊಡ್ಡ ಹಬ್ಬ. ಬೆಳಗ್ಗೆಯಿಂದಲೇ ಕಂಠೀರವ ಸ್ಟುಡಿಯೋದಲ್ಲಿರುವ ರಾಜ್‌ ಸಮಾಧಿ ಬಳಿ ಅಭಿಮಾನಿಗಳು ಸಹಸ್ರಾರು ಸಂಖ್ಯೆಯಲ್ಲಿ ಸೇರಿ ತಮ್ಮ ನೆಚ್ಚಿನ ನಟನ ಹುಟ್ಟುಹಬ್ಬ ಆಚರಿಸಲಿದ್ದಾರೆ. ರಾಜ್‌ಕುಟುಂಬ ವರ್ಗ ಕೂಡಾ ಸಮಾಧಿಗೆ ತೆರಳಿ ಪೂಜೆ ಸಲ್ಲಿಸಲಿದೆ.

ಇದೇ ವೇಳೆ  ಡಾ.ರಾಜಕುಮಾರ್‌ ಅಭಿಮಾನಿಗಳ ಸಂಘದಿಂದ ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಇದಲ್ಲದೇ, ಕರ್ನಾಟಕ ಚಲನಚಿತ್ರ ಅಕಾಡೆಮಿ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ರಾಜ್‌ ಹುಟ್ಟುಹಬ್ಬ ಆಚರಿಸಲಿದೆ. ಬೆಳಗ್ಗೆ 11 ಗಂಟೆಗೆ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಲಿರುವ ರಾಜ್‌ ಜನ್ಮದಿನಾಚರಣೆ ಕಾರ್ಯಕ್ರಮಕ್ಕೆ ಹಿರಿಯ ಕಲಾವಿದೆ ಲಕ್ಷ್ಮೀ ಚಾಲನೆ ನೀಡಲಿದ್ದಾರೆ.

ಶಾಸಕ ಆರ್‌.ವಿ.ದೇವರಾಜ್‌ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಅಂದು ಸಾಹಿತಿ ಬರಗೂರು ರಾಮಚಂದ್ರಪ್ಪ ಅವರು ಪ್ರಧಾನ ಭಾಷಣ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಚಿವರಾದ ಅನಂತಕುಮಾರ್‌ ಹಾಗೂ ಕೆ.ಜೆ.ಜಾರ್ಜ್‌ ಭಾಗವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಹಿರಿಯ ನಿರ್ಮಾಪಕಿ ಪಾರ್ವತಮ್ಮ ರಾಜ್‌ಕುಮಾರ್‌ ಸೇರಿದಂತೆ ಅನೇಕ ಗಣ್ಯರು ಭಾಗವಹಿಸುತ್ತಿದ್ದಾರೆ.

ಡಾ.ರಾಜ್‌ ಸ್ಮಾರಕ ಬಳಿ ಟಗರು ಮೇಕಿಂಗ್‌ ವಿಡಿಯೋ ಬಿಡುಗಡೆ
ಡಾ. ರಾಜ್‌ ಹುಟ್ಟುಹಬ್ಬವಾದ ಇಂದು “ಟಗರು’ ಚಿತ್ರದ ಮೇಕಿಂಗ್‌ ವೀಡಿಯೋ ಬಿಡುಗಡೆ ಮಾಡುವುದಕ್ಕೆ ನಿರ್ಮಾಪಕ ಕೆ.ಪಿ. ಶ್ರೀಕಾಂತ್‌ ಮತ್ತು ನಿರ್ದೇಶಕ ಸೂರಿ ತೀರ್ಮಾನಿಸಿದ್ದಾರೆ.  ಜೊತೆಗೆಹಿರಿಯ ನಟ-ನಿರ್ಮಾಪಕ ದ್ವಾರಕೀಶ್‌ ಅವರನ್ನು ಆತ್ಮೀಯವಾಗಿ ಸನ್ಮಾನಿಸಲಾಗುತ್ತದೆ.  

ಇದರ ಜೊತೆಗೆ, ಶಿವರಾಜಕುಮಾರ್‌ ಅಭಿಮಾನಿಗಳ ಸಂಘದಿಂದ ಗೋಸೇನೆ ಪ್ರಾರಂಭಿಸಲಾಗುತ್ತದೆ. 10 ಲೋಡ್‌ ಮೇವನ್ನು ಚಾಮರಾಜನಗರ ಜಿಲ್ಲೆಗೆ ಕಳುಹಿಸಲಾಗುತ್ತದೆ. ಶಿವರಾಜಕುಮಾರ್‌ ಅವರು ಹಸು-ಕರುವಿಗೆ ಹುಲ್ಲು ತಿನ್ನಿಸುವುದರ ಮೂಲಕ ಚಾಲನೆ ನೀಡಲಿದ್ದಾರೆ.

ಇಂದು ರಾಜ್ಯಪ್ರಶಸ್ತಿ ಪ್ರದಾನ
ಕಳೆದ ವರ್ಷ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಮುಂದಿನ ವರ್ಷದಿಂದ ಡಾ.ರಾಜಕುಮಾರ್‌ ಹುಟ್ಟುಹಬ್ಬದಂದು (ಏ.24) ಚಲನಚಿತ್ರ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಘೋಷಿಸಿದ್ದರು. ಅದರಂತೆ 2016ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರದಾನ ಇಂದು ಡಾ.ರಾಜ್‌ಕುಮಾರ್‌ ಹುಟ್ಟುಹಬ್ಬದಂದು ನಡೆಯಲಿದೆ. ವಸಂತನಗರದಲ್ಲಿರುವ ಡಾ.ಬಿ.ಆರ್‌.ಅಂಬೇಡ್ಕರ್‌ ಭವನದಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಸಿಎಂ ಪ್ರಶಸ್ತಿ ನೀಡಲಿದ್ದಾರೆ.

ಇಂದು ರಾಜ್‌ಕುಮಾರ ಟಿಕೆಟ್‌ನಲ್ಲಿ ರಿಯಾಯಿತಿ
ಪುನೀತ್‌ ರಾಜಕುಮಾರ್‌ ಅವರ “ರಾಜ್‌ಕುಮಾರ’ ಚಿತ್ರ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಡಾ.ರಾಜ್‌ಕುಮಾರ್‌ ಹುಟ್ಟುಹಬ್ಬ ಪ್ರಯುಕ್ತ “ರಾಜ್‌ಕುಮಾರ’ ಚಿತ್ರತಂಡ ಪ್ರೇಕ್ಷಕರಿಗೆ ಟಿಕೆಟ್‌ ಬೆಲೆಯಲ್ಲಿ ಶೇ 50 ರಿಯಾಯಿತಿ ನೀಡುವ ಮೂಲಕ ಸಿನಿಮಾವನ್ನು ಮತ್ತಷ್ಟು ಮಂದಿಗೆ ತಲುಪಿಸಲು ಹೊರಟಿದೆ. ಇಂದು “ರಾಜ್‌ಕುಮಾರ’ ಚಿತ್ರದ ಎಲ್ಲಾ ಪ್ರದರ್ಶನಗಳ ಟಿಕೆಟ್‌ ಬೆಲೆಯಲ್ಲೂ ಶೇ.50 ರಿಯಾಯಿತಿ ನೀಡಿದೆ.

ಇದು ರಾಜ್ಯದ  ಎಲ್ಲಾ ಸಿಂಗಲ್‌ ಸ್ಕ್ರೀನ್‌ ಚಿತ್ರಮಂದಿರಗಳಿಗೆ ಅನ್ವಯಿಸಲಿದ್ದು, ಮಲ್ಟಿಪ್ಲೆಕ್ಸ್‌ಗಳಿಗೆ ಮಾತ್ರ ಇದು ಅನ್ವಯವಾಗುವುದಿಲ್ಲ. ಅಭಿಮಾನಿಗಳಿಗೆ ರಾಜ್‌ ಹುಟ್ಟುಹಬ್ಬ ದಿನ ರಿಯಾಯಿತಿ ದರದಲ್ಲಿ ಸಿನಿಮಾ ತೋರಿಸುವ ಬಗ್ಗೆ ಮಾತನಾಡುವ ಚಿತ್ರದ ನಿರ್ಮಾಪಕ ವಿಜಯ್‌ ಕಿರಗಂದೂರು, “ಡಾ.ರಾಜ್‌ ಅವರ ಆದರ್ಶಗಳನ್ನಿನ್ನಿಟ್ಟುಕೊಂಡು ನಾವು “ರಾಜ್‌ಕುಮಾರ’ ಸಿನಿಮಾ ಮಾಡಿದ್ದೇವೆ. ಇಂದು ರಾಜ್‌ ಅವರ ಹುಟ್ಟುಹಬ್ಬ. ಅವರ ಆದರ್ಶವನ್ನು ಅಭಿಮಾನಿಗಳು ಮೈಗೂಡಿಸಿಕೊಳ್ಳಬೇಕೆಂಬ ಉದ್ದೇಶದಿಂದ ಟಿಕೆಟ್‌ ಬೆಲೆಯಲ್ಲಿ ಶೇ 50 ರಿಯಾಯಿತಿ ನೀಡಿದ್ದೇವೆ’ ಎನ್ನುತ್ತಾರೆ.

ಟಾಪ್ ನ್ಯೂಸ್

Udupi; ಮಸ್ಟರಿಂಗ್‌ ಕೇಂದ್ರದಲ್ಲಿ ಸಕಲ ತಯಾರಿ

Udupi; ಮಸ್ಟರಿಂಗ್‌ ಕೇಂದ್ರದಲ್ಲಿ ಸಕಲ ತಯಾರಿ

ಮತದಾನ ಮಾಡಿದ ನಿವೃತ್ತ ಯೋಧ ನಿಧನ

Mangaluru; ಮತದಾನ ಮಾಡಿದ ನಿವೃತ್ತ ಯೋಧ ನಿಧನ

Lok Sabha ಚುನಾವಣೆ ಕರ್ತವ್ಯಕ್ಕೆ 60ಕ್ಕೂ ಅಧಿಕ ಸರಕಾರಿ ಬಸ್‌

Lok Sabha ಚುನಾವಣೆ ಕರ್ತವ್ಯಕ್ಕೆ 60ಕ್ಕೂ ಅಧಿಕ ಸರಕಾರಿ ಬಸ್‌

ದಿ| ಜಾರ್ಜ್‌ ಫೆರ್ನಾಂಡಿಸ್‌ ಆದರ್ಶ, ಅವರೇ ಸ್ಫೂರ್ತಿ: ಕ್ಯಾ| ಬ್ರಿಜೇಶ್‌ ಚೌಟ

ದಿ| ಜಾರ್ಜ್‌ ಫೆರ್ನಾಂಡಿಸ್‌ ಆದರ್ಶ, ಅವರೇ ಸ್ಫೂರ್ತಿ: ಕ್ಯಾ| ಬ್ರಿಜೇಶ್‌ ಚೌಟ

jaಅಭಿವೃದ್ಧಿ ಎಂದರೆ ಏನೆಂದು ತೋರಿಸಲು ಈ ಬಾರಿ ಅವಕಾಶ ಕೊಡಿ: ಜೆ.ಪಿ. ಹೆಗ್ಡೆ

ಅಭಿವೃದ್ಧಿ ಎಂದರೆ ಏನೆಂದು ತೋರಿಸಲು ಈ ಬಾರಿ ಅವಕಾಶ ಕೊಡಿ: ಜೆ.ಪಿ. ಹೆಗ್ಡೆ

ಉಡುಪಿ-ಚಿಕ್ಕಮಗಳೂರು; ಕ್ಷೇತ್ರದಲ್ಲಿ ಆಗಬೇಕಿರುವ ಅಭಿವೃದ್ಧಿಯ ಸ್ಪಷ್ಟತೆಯಿದೆ: ಜೆ.ಪಿ.

ಉಡುಪಿ-ಚಿಕ್ಕಮಗಳೂರು; ಕ್ಷೇತ್ರದಲ್ಲಿ ಆಗಬೇಕಿರುವ ಅಭಿವೃದ್ಧಿಯ ಸ್ಪಷ್ಟತೆಯಿದೆ: ಜೆ.ಪಿ.

ಉಡುಪಿ- ಚಿಕ್ಕಮಗಳೂರು: ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಅವಕಾಶಗಳು ಇವೆ: ಕೋಟ

ಉಡುಪಿ- ಚಿಕ್ಕಮಗಳೂರು: ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಅವಕಾಶಗಳು ಇವೆ: ಕೋಟ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sandalwood: ಶೈನ್‌ ಶೆಟ್ಟಿ ಹೊಸ ಚಿತ್ರಕ್ಕೆ “ಜಸ್ಟ್‌ ಮ್ಯಾರೀಡ್‌” ಟೈಟಲ್

Sandalwood: ಶೈನ್‌ ಶೆಟ್ಟಿ ಹೊಸ ಚಿತ್ರಕ್ಕೆ “ಜಸ್ಟ್‌ ಮ್ಯಾರೀಡ್‌” ಟೈಟಲ್

21

ಹೊಸ ಚಿತ್ರಕ್ಕೆ ಮಹೇಶ್‌ ಬಾಬು ರೆಡಿ: ‘ವೀರ ಮದಕರಿ’ ಬಾಲ ಕಲಾವಿದೆ ಈಗ ನಾಯಕಿ

Ithyadi Movie: ಇತ್ಯಾದಿ ಮೇಲೆ ವಿಕ್ರಮ್‌ ಕಣ್ಣು

Ithyadi Movie: ಇತ್ಯಾದಿ ಮೇಲೆ ವಿಕ್ರಮ್‌ ಕಣ್ಣು

New Movie: ಪತ್ರಕರ್ತ ಚಿತ್ರಕ್ಕೆ ಮುಹೂರ್ತ

New Movie: ಪತ್ರಕರ್ತ ಚಿತ್ರಕ್ಕೆ ಮುಹೂರ್ತ

Dr Rajkumar: ಇಂದು ರಾಜ್‌ 96ನೇ ಹುಟ್ಟು ಹಬ್ಬ; ಅರ್ಥಪೂರ್ಣ ಆಚರಣೆಗೆ ಅಭಿಮಾನಿಗಳ ಸಿದ್ಧತೆ

Dr Rajkumar: ಇಂದು ರಾಜ್‌ 96ನೇ ಹುಟ್ಟು ಹಬ್ಬ; ಅರ್ಥಪೂರ್ಣ ಆಚರಣೆಗೆ ಅಭಿಮಾನಿಗಳ ಸಿದ್ಧತೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Udupi; ಮಸ್ಟರಿಂಗ್‌ ಕೇಂದ್ರದಲ್ಲಿ ಸಕಲ ತಯಾರಿ

Udupi; ಮಸ್ಟರಿಂಗ್‌ ಕೇಂದ್ರದಲ್ಲಿ ಸಕಲ ತಯಾರಿ

ಮತದಾನ ಮಾಡಿದ ನಿವೃತ್ತ ಯೋಧ ನಿಧನ

Mangaluru; ಮತದಾನ ಮಾಡಿದ ನಿವೃತ್ತ ಯೋಧ ನಿಧನ

Lok Sabha ಚುನಾವಣೆ ಕರ್ತವ್ಯಕ್ಕೆ 60ಕ್ಕೂ ಅಧಿಕ ಸರಕಾರಿ ಬಸ್‌

Lok Sabha ಚುನಾವಣೆ ಕರ್ತವ್ಯಕ್ಕೆ 60ಕ್ಕೂ ಅಧಿಕ ಸರಕಾರಿ ಬಸ್‌

ದಿ| ಜಾರ್ಜ್‌ ಫೆರ್ನಾಂಡಿಸ್‌ ಆದರ್ಶ, ಅವರೇ ಸ್ಫೂರ್ತಿ: ಕ್ಯಾ| ಬ್ರಿಜೇಶ್‌ ಚೌಟ

ದಿ| ಜಾರ್ಜ್‌ ಫೆರ್ನಾಂಡಿಸ್‌ ಆದರ್ಶ, ಅವರೇ ಸ್ಫೂರ್ತಿ: ಕ್ಯಾ| ಬ್ರಿಜೇಶ್‌ ಚೌಟ

jaಅಭಿವೃದ್ಧಿ ಎಂದರೆ ಏನೆಂದು ತೋರಿಸಲು ಈ ಬಾರಿ ಅವಕಾಶ ಕೊಡಿ: ಜೆ.ಪಿ. ಹೆಗ್ಡೆ

ಅಭಿವೃದ್ಧಿ ಎಂದರೆ ಏನೆಂದು ತೋರಿಸಲು ಈ ಬಾರಿ ಅವಕಾಶ ಕೊಡಿ: ಜೆ.ಪಿ. ಹೆಗ್ಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.