Updated at Sat,24th Jun, 2017 3:51PM IST
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ನೋಡ ನೋಡುತಾ ವಿಸ್ಮಯ

ಅರ್ಜುನ್‌ ಸರ್ಜಾ ಬಹುಭಾಷಾ ನಟ. ಕನ್ನಡ, ತಮಿಳು, ತೆಲುಗು, ಮಲಯಾಳಂ ಭಾಷೆಯಲ್ಲಿ ನಟಿಸಿ ತಮ್ಮದೇ ಆದ ಅಭಿಮಾನಿ ವರ್ಗ ಹೊಂದಿದ್ದಾರೆ. ಇಂತಿಪ್ಪ ಅರ್ಜುನ್‌ ಸರ್ಜಾ ನೋಡ ನೋಡುತ್ತಿದ್ದಂತೆ 150 ಸಿನಿಮಾಗಳನ್ನು ಪೂರೈಸಿದ್ದಾರೆ. ಹಾಗಾದರೆ ಅರ್ಜುನ್‌ ಸರ್ಜಾ ಅವರ 150ನೇ ಸಿನಿಮಾ ಯಾವುದು ಎಂಬ ಪ್ರಶ್ನೆ ಸಹಜವಾಗಿಯೇ ಬರುತ್ತದೆ. ಈ ಪ್ರಶ್ನೆಗೆ ಉತ್ತರ "ವಿಸ್ಮಯ'.

ಹೌದು, ಈಗಾಗಲೇ ಬಹುತೇಕ ಚಿತ್ರೀಕರಣ "ವಿಸ್ಮಯ' ಅರ್ಜುನ್‌ ಸರ್ಜಾ ಅವರ 150ನೇ ಸಿನಿಮಾ ಎಂಬುದು ವಿಶೇಷ. ಈ ಚಿತ್ರ ತಮಿಳು ಹಾಗೂ ಕನ್ನಡದಲ್ಲಿ ತಯಾರಾಗುತ್ತಿದ್ದು, ತಮಿಳಿನಲ್ಲಿ "ನಿಬುನನ್‌' ಎಂಬ ಶೀರ್ಷಿಕೆ ಇಡಲಾಗಿದೆ. ಅರುಣ್‌ ವೈದ್ಯನಾಥನ್‌ ಈ ಚಿತ್ರದ ನಿರ್ದೇಶಕರು.

ಈ ಹಿಂದೆ ಮಲಯಾಳಂನಲ್ಲಿ ಮೋಹನ್‌ ಲಾಲ್‌ ನಾಯಕರಾಗಿದ್ದ "ಪೆರುಚಾಯಿ'ಎಂಬ ಸಿನಿಮಾ ಮಾಡಿದ್ದ ಅರುಣ್‌, ಈಗ ಅರ್ಜುನ್‌ ಸರ್ಜಾ ಜೊತೆ ಸಿನಿಮಾ ಮಾಡುತ್ತಿದ್ದಾರೆ. ಪಕ್ಕಾ ಆ್ಯಕ್ಷನ್‌ ಚಿತ್ರವಾದ "ವಿಸ್ಮಯ' ಕಳೆದ ವರ್ಷದ ನವೆಂಬರ್‌ನಲ್ಲಿ ಆರಂಭವಾಗಿತ್ತು.  ಈಗ ಅಂತಿಮ ಹಂತಕ್ಕೆ ಬಂದು ನಿಂತಿದೆ.

ಚಿತ್ರೀಕರಣವನ್ನು ಬೆಂಗಳೂರಿನ ಸುತ್ತಮುತ್ತಲಿನ ಪ್ರದೇಶಗಳಲ್ಲಿಯೇ ನಡೆಸಲಾಗಿದೆ. ಚಿತ್ರದಲ್ಲಿ ಶ್ರುತಿ ಹರಿಹರನ್‌ ನಾಯಕಿಯಾಗಿ ನಟಿಸುತ್ತಿದ್ದು, ತಮಿಳಿನ ವರಲಕ್ಷ್ಮೀ ಕೂಡಾ ನಟಿಸುತ್ತಿದ್ದಾರೆ. ಉಳಿದಂತೆ ಸುಧಾರಾಣಿ, ಸುಹಾಸಿನಿ, ಸುಮನ್‌ ಮುಂತಾದ ಕಲಾವಿದರು ಈ ಚಿತ್ರದ ತಾರಾಗಣದಲ್ಲಿದ್ದಾರೆ. ತಮಿಳಿನ ಖ್ಯಾತ ನಟ ಪ್ರಸನ್ನ ಮುಖ್ಯ ಪಾತ್ರವೊಂದರಲ್ಲಿ ನಟಿಸಿದ್ದಾರೆ. 

ಚಿತ್ರದ ವಿಶೇಷ ಪಾತ್ರವೊಂದರಲ್ಲಿ ಕನ್ನಡ ಚಿತ್ರರಂಗದ ಖ್ಯಾತ ನಟರೊಬ್ಬರು ನಟಿಸುತ್ತಿದ್ದು, ಅವರಿಲ್ಲಿ ವಿಲನ್‌ ಆಗಿ ಕಾಣಿಸಿಕೊಳ್ಳುತ್ತಿದ್ದಾರಂತೆ. ಆ ನಟ ಯಾರು ಎಂಬುದನ್ನು ಚಿತ್ರತಂಡ ಗೌಪ್ಯವಾಗಿಟ್ಟಿದೆ. ಈ ನಡುವೆಯೇ ಅರ್ಜುನ್‌ ಸರ್ಜಾ ನಿರ್ದೇಶನದ "ಪ್ರೇಮ ಬರಹ' ಚಿತ್ರ ಕೂಡಾ ಚಿತ್ರೀಕರಣದಲ್ಲಿದೆ. ಈ ಚಿತ್ರದ ಮೂಲಕ ಅರ್ಜುನ್‌ ಪುತ್ರಿ ಐಶ್ವರ್ಯಾ ಕನ್ನಡ ಚಿತ್ರರಂಗಕ್ಕೆ ನಾಯಕಿಯಾಗಿ ಎಂಟ್ರಿಕೊಡುತ್ತಿದ್ದಾರೆ.


More News of your Interest

Back to Top