Updated at Tue,23rd May, 2017 11:44AM IST
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಚಮಕ್‌ಜೊತೆ ರಾಯಲ್‌ ಎನ್‌ಫೀಲ್ಡ್‌

ಗಣೇಶ್‌ ಅಭಿನಯದ "ಚಮಕ್‌' ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಈಗಾಗಲೇ ನಿರ್ದೇಶಕ ಸುನಿ 18 ದಿನಗಳ ಕಾಲ ಚಿತ್ರೀಕರಣ ನಡೆಸಿದ್ದು, ಸದ್ಯ ಬನ್ನೇರುಘಟ್ಟದಲ್ಲಿನ ಮನೆಯೊಂದರಲ್ಲಿ ಗಣೇಶ್‌, ಸಾಧುಕೋಕಿಲ, ರಶ್ಮಿಕಾ ಸೇರಿದಂತೆ ಚಿತ್ರದ ಪ್ರಮುಖ ಕಲಾವಿದರಿರುವ ದೃಶ್ಯಗಳ ಚಿತ್ರೀಕರಣದಲ್ಲಿ ತೊಡಗಿದೆ "ಚಮಕ್‌' ತಂಡ.

ನಿಮಗೆ "ಚಮಕ್‌' ಸಿನಿಮಾ ನೋಡುವಾಗ ರಾಯಲ್‌ ಎನ್‌ಫೀಲ್ಡ್‌ ಬೈಕ್‌ವೊಂದು ಸಿನಿಮಾದುದ್ದಕ್ಕೂ ಕಾಣಸಿಗಲಿದೆ. ಅದಕ್ಕೆ ಕಾರಣ, "ಚಮಕ್‌' ತಂಡದ ಜೊತೆಗೆ ರಾಯಲ್‌ ಎನ್‌ಫೀಲ್ಡ್‌ ಕೈ ಜೋಡಿಸಿರುವುದು. ಹೌದು, ಇದೇ ಮೊದಲ ಬಾರಿಗೆ ಕನ್ನಡ ಚಿತ್ರರಂಗದ ಜೊತೆಗೆ ರಾಯಲ್‌ ಎನ್‌ಫೀಲ್ಡ್‌ ಸಂಸ್ಥೆ ಕೈ ಜೋಡಿಸಿದ್ದು, ಗಣೇಶ್‌ ನಾಯಕರಾಗಿರುವ "ಚಮಕ್‌' ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿಕೊಡುತ್ತಿದೆ.

ದೊಡ್ಡ ಸಂಸ್ಥೆಯೊಂದು ತಮ್ಮ ಚಿತ್ರದ ಜೊತೆಗೆ ಕೈ ಜೋಡಿಸಿರುವುದರಿಂದ ಸಹಜವಾಗಿಯೇ ಚಿತ್ರತಂಡ ಕೂಡಾ ಖುಷಿಯಾಗಿದೆ. ಇನ್ನು, ಗಣೇಶ್‌ "ಚಮಕ್‌'ನಲ್ಲಿ ಡಾಕ್ಟರ್‌ ಆಗಿ ನಟಿಸುತ್ತಿದ್ದು, ವಿಭಿನ್ನವಾದ ಪಾತ್ರವಂತೆ. ಇಲ್ಲಿನ ದೃಶ್ಯಗಳ ಚಿತ್ರೀಕರಣ ಮುಗಿಸಿಕೊಂಡು ಚಿತ್ರತಂಡ ಪೋರ್ಚುಗಲ್‌ ಹಾರಲಿದ್ದು, ಅಲ್ಲಿನ ಪ್ರಮುಖ ನಗರಗಳಲ್ಲಿ ಹಾಡು ಹಾಗೂ ದೃಶ್ಯಗಳ ಚಿತ್ರೀಕರಣ ನಡೆಸಲಿದೆ. 


More News of your Interest

Trending videos

Back to Top