ಯೋಗಿ-ಸಾಹಿತ್ಯ ಮ್ಯಾರೇಜ್ ಸ್ಟೋರಿ
Team Udayavani, May 23, 2017, 11:42 AM IST
“ಲೂಸ್ಮಾದ’ ಯೋಗೇಶ್ಗೆ ಹುಡುಗಿ ಫಿಕ್ಸ್ ಆಗಿರೋದು, ಅಣ್ಣನ ಮದುವೆ ನಂತರ ತನ್ನ ಮದುವೆ ಎಂದು ಯೋಗಿ ಹೇಳಿರೋದೆಲ್ಲವೂ ನಿಮಗೆ ಗೊತ್ತೇ ಇದೆ. ಆದರೆ, ಯಾವಾಗ ಯೋಗಿ ಮದುವೆ ಎಂಬ ಮಾಹಿತಿ ಇರಲಿಲ್ಲ. ಈಗ ಯೋಗಿ ಮದುವೆಯ ಸುದ್ದಿ ಜೋರಾಗಿ ಓಡುತ್ತಿದೆ. ಕಳೆದ ವರ್ಷ ಯೋಗಿ ಅಣ್ಣ ಮಹೇಶ್ ಮದುವೆ ನಡೆದಿತ್ತು. ಈ ವರ್ಷ ಯೋಗಿ ಮದುವೆ ನಡೆಯಲಿದೆ. ಆದಕ್ಕಿಂತ ಮೊದಲು ಯೋಗಿ ನಿಶ್ಚಿತಾರ್ಥ.
ಹೌದು, ಯೋಗಿ, ಸಾಹಿತ್ಯ ಎನ್ನುವವರನ್ನು ಮದುವೆಯಾಗುತ್ತಿದ್ದು, ಜೂನ್ 11 ರಂದು ಯೋಗಿ ನಿಶ್ಚಿತಾರ್ಥ ಬೆಂಗಳೂರಿನಲ್ಲಿ ನಡೆಯಲಿದೆ. ಇನ್ನು, ಮದುವೆ ಯಾವಾಗ ಎಂಬ ಪ್ರಶ್ನೆಗೂ ಉತ್ತರ ಸಿಕ್ಕಿದೆ. ನವೆಂಬರ್ 2 ರಂದು ಯೋಗೇಶ್-ಸಾಹಿತ್ಯ ಮದುವೆ ನಡೆಯಲಿದೆಯಂತೆ.ಸಾಹಿತ್ಯಗೂ ಕನ್ನಡ ಚಿತ್ರರಂಗಕ್ಕೂ ಯಾವುದೇ ಸಂಬಂಧವೂ ಇಲ್ಲ, ಹಿನ್ನೆಲೆಯೂ ಇಲ್ಲ. ಸಾಹಿತ್ಯ ಐಟಿ ಉದ್ಯೋಗಿಯಂತೆ. ಕೆಲವು ವರ್ಷಗಳಿಂದ ಯೋಗಿಯ ಸ್ನೇಹವಿತ್ತಂತೆ.
ಆ ಸ್ನೇಹ ಪ್ರೀತಿಗೆ ತಿರುಗಿ, ಆ ಪ್ರೀತಿಯನ್ನು ಮನೆಯವರೆಲ್ಲಾ ಒಪ್ಪಿಕೊಂಡು, ಎರಡು ಕುಟುಂಬದವರೂ ಮುಂದೆ ನಿಂತು ಯೋಗಿ ಮತ್ತು ಸಾಹಿತ್ಯ ಅವರ ಮದುವೆ ಮಾಡಲು ತೀರ್ಮಾನಿಸಿದ್ದಾರೆ. ಸದ್ಯ ಯೋಗಿ ನಟಿಸಿರುವ “ದುನಿಯಾ-2′ ಚಿತ್ರ ಬಿಡುಗಡೆಗೆ ರೆಡಿಯಾಗಿದೆ. ಈ ನಡುವೆಯೇ ಯೋಗಿ ಶಿವರಾಜಕುಮಾರ್ ಅವರ “ಲೀಡರ್’ನಲ್ಲೂ ಪ್ರಮುಖ ಪಾತ್ರ ಮಾಡಿದ್ದಾರೆ. ಇದಲ್ಲದೆ “ಕೋಲಾರ’ ಮುಂತಾದ ಚಿತ್ರಗಳು ಬಿಡುಗಡೆಗೆ ಸಿದ್ಧತೆ ನಡೆಸಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಇಂಡಿಯನ್ ಆಯಿಲ್ ಕಂಪನಿಗೆ ನಿರ್ದೇಶಕರಾಗಿ (ಎಚ್ಆರ್) ರಶ್ಮಿ ಗೋವಿಲ್ ಅಧಿಕಾರ ಸ್ವೀಕಾರ
OTT: ಸದ್ದಿಲ್ಲದೆ ಓಟಿಟಿಗೆ ಬಂತು ʼಒಂದು ಸರಳ ಪ್ರೇಮಕಥೆ’: ಯಾವುದರಲ್ಲಿ ಸ್ಟ್ರೀಮಿಂಗ್?
Lok Sabha 2024: ಮೇಘಾಲಯದಲ್ಲಿ ಯಾವಾಗ ಜಾನ್ ಎಫ್ ಕೆನಡಿ ಹಿಟ್ಲರ್ ನನ್ನು ಬಂಧಿಸಿದ್ದು!
ನಿರ್ಮಾಪಕನಾದ ರಾಜಮೌಳಿ ಪುತ್ರ: ಎರಡು ಹೊಸ ಸಿನಿಮಾ ಅನೌನ್ಸ್; ಲೀಡ್ ರೋಲ್ ನಲ್ಲಿ ಫಾಫಾ
ಕಾಂಗ್ರೆಸ್ ಸರಕಾರ ಬಂದಾಗಿನಿಂದ ರಾಜ್ಯದಲ್ಲಿ ಹಿಂದೂಗಳಿಗೆ ರಕ್ಷಣೆಯೇ ಇಲ್ಲದಾಗಿದೆ: ಜೋಶಿ