ಅಂಬರೀಶ್ಗೆ ಬರ್ತ್ಡೇ ಸಂಭ್ರಮ!
Team Udayavani, May 30, 2017, 11:41 AM IST
“ರೆಬೆಲ್ ಸ್ಟಾರ್’ ಅಂಬರೀಶ್ ಸೋಮವಾರ ತಮ್ಮ 65ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಪ್ರತಿ ವರ್ಷದಂತೆ ಈ ವರ್ಷ ಸಹ ಬೆಳಿಗ್ಗೆಯಿಂದಲೇ ಅಂಬರೀಶ್ ಅವರ ಮನೆ ಫುಲ್. ಕುಟುಂಬದವರು, ಹಿತೈಷಿಗಳು, ಆಪ್ತರು, ಸ್ನೇಹಿತರು, ಅಭಿಮಾನಿಗಳು … ಅಂತೆಲ್ಲಾ ಅಂಬರೀಶ್ ಅವರ ಮನೆಗೆ ನೂರಾರು ಜನ ಭೇಟಿಕೊಟ್ಟು, ಶುಭ ಕೋರಿದ್ದಾರೆ. ಈ ಸಂದರ್ಭದಲ್ಲಿ ಅವರು ತಂದ ಕೇಕ್ಗಳನ್ನು ಕತ್ತರಿಸುವ ಮೂಲಕ ಅಂಬರೀಶ್ ತಮ್ಮ ಹುಟ್ಟುಹಬ್ಬವನ್ನು ಗ್ರಾಂಡ್ ಆಗಿ ಆಚರಿಸಿಕೊಂಡಿದ್ದಾರೆ.