ನಾಯಕಿ ಜೊತೆಗೆ ಗಾಯಕಿ
Team Udayavani, Jun 22, 2017, 4:41 PM IST
“ಪುಟ್ಟಗೌರಿ ಮದುವೆ’ ಧಾರಾವಾಹಿ ಖ್ಯಾತಿಯ ರಂಜಿನಿ ರಾಘವನ್ ಅವರು ಹಿರಿತೆರೆಗೆ ಜಂಪ್ ಮಾಡಿದ್ದು, “ರಾಜ-ಹಂಸ’ ಎಂಬ ಚಿತ್ರದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದು ಎಲ್ಲರಿಗೂ ಗೊತ್ತೇ ಇದೆ. ಆದರೆ, ಬಹಳಷ್ಟು ಜನರಿಗೆ ಗೊತ್ತಿರದ ಒಂದು ವಿಷಯವೆಂದರೆ, ರಂಜಿನಿ ಈ ಚಿತ್ರದಲ್ಲಿ ಬರೀ ನಾಯಕಿಯಾಗಷ್ಟೇ ಎಂಟ್ರಿ ಕೊಡುತ್ತಿಲ್ಲ, ಗಾಯಕಿಯಾಗಿಯೂ ಎಂಟ್ರಿ ಕೊಡುತ್ತಿದ್ದಾರೆ.
“ರಾಜ-ಹಂಸ’ ಚಿತ್ರಕ್ಕೆ ರಂಜಿನಿ ರಾಘವನ್, ಸಂಗೀತ ನಿರ್ದೇಶಕ ಜೋಶ್ವಾ ಶ್ರೀಧರ್ ಸಂಗೀತ ನಿರ್ದೇಶನದಲ್ಲಿ ಒಂದು ಹಾಡನ್ನು ಹಾಡಿದ್ದಾರೆ. ಚಿತ್ರದ ಹಾಡುಗಳು ಸೋಮವಾರ ಸಂಜೆ ಬಿಡುಗಡೆಯಾಗಿದ್ದೂ ಆಗಿದೆ. ನಟ ಅಜೇಯ್ ರಾವ್, ಬಿ.ಸಿ. ಪಾಟೀಲ್, ಯಮುನಾ ಮುಂತಾದವರು ಚಿತ್ರದ ಹಾಡುಗಳನ್ನು ಬಿಡುಗಡೆ ಮಾಡಿದ್ದಾರೆ.
“ಒಂದೇ ಚಿತ್ರದಲ್ಲಿ ನಾಯಕಿಯಾಗಿ ಮತ್ತು ಗಾಯಕಿಯಾಗಿ ಡೆಬ್ಯು ಮಾಡುತ್ತಿದ್ದೇನೆ.ಮುಂಚೆ ಒಂದು ಬಿಟ್ ಹಾಡಿದ್ದೆ. ಅದನ್ನು ಕೇಳಿ ಇಷ್ಟವಾಗಿ, ಜೋಶ್ವಾ ಶ್ರೀಧರ್ ಅವರು ಒಂದು ಹಾಡನ್ನು ಹಾಡಿಸಿದ್ದಾರೆ. ಅವರಿಗೆ ನಾನು ದೊಡ್ಡ ಥ್ಯಾಂಕ್ಸ್ ಹೇಳಬೇಕು. ಏಕೆಂದರೆ, ದೊಡ್ಡದೊಡ್ಡ ಗಾಯಕರ ಮಧ್ಯೆ, ನನಗೂ ಹಾಡುವುದಕ್ಕೆ ಅವಕಾಧ ಕೊಟ್ಟಿದ್ದಾರೆ. ಒಂದೇ ಚಿತ್ರದಲ್ಲಿ ನಟನೆ ಮಾಡುವುದರ ಜೊತೆಗೆ ಹಾಡುವುದಕ್ಕೆ ಅವಕಾಶ ಸಿಕ್ಕಿರುವುದು ಬಹಳ ಸಂತೋಷವಾಗಿದೆ’ ಎಂದು ರಂಜಿನಿ ಹೇಳಿಕೊಂಡರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!
Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?
ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ