ತಾರಕಾಸುರನ ಜೊತೆ ಮಾನ್ವಿತಾ
Team Udayavani, Jun 25, 2017, 10:20 AM IST
ನಟಿ ಮಾನ್ವಿತಾ ನಿಧಾನವಾಗಿ ಬಿಝಿಯಾಗುತ್ತಿದ್ದಾರೆ. ಸದ್ಯ ಅವರ ಕೈಯಲ್ಲಿ ನಾಲ್ಕು ಸಿನಿಮಾಗಳಿವೆ. “ಟಗರು’, “ಕನಕ’, “ರಿಲ್ಯಾಕ್ಸ್ ಸತ್ಯ’ ಹಾಗೂ “ತಾರಕಾಸುರ’. “ತಾರಕಾಸುರ’ ಚಿತ್ರ ಮಾನ್ವಿತಾ ಪಟ್ಟಿಯಲ್ಲಿ ಯಾವತ್ತು ಸೇರಿಕೊಂಡಿತು ಎಂದು ನೀವು ಕೇಳಬಹುದು. ಅದು ಮೊನ್ನೆಯಷ್ಟೇ ಸೇರಿಕೊಂಡ ಸಿನಿಮಾ.
ಹೌದು, “ತಾರಕಾಸುರ’ ಚಿತ್ರದಲ್ಲಿ ಮಾನ್ವಿತಾ ನಾಯಕಿಯಾಗಿ ನಟಿಸುತ್ತಿದ್ದಾರೆ. ಆರಂಭದಲ್ಲಿ ಚಿತ್ರದಲ್ಲಿ ಶ್ರುತಿ ಹರಿಹರನ್ ನಟಿಸುತ್ತಾರೆಂದು ಹೇಳಲಾಗಿತ್ತು. ಕಾರಣಾಂತರಗಳಿಂದ ಶ್ರುತಿ ಹರಿಹರನ್ ಬೇರೆ ಸಿನಿಮಾಗಳಲ್ಲಿ ಬಿಝಿಯಾಗಿರುವುದರಿಂದ “ತಾರಕಾಸುರ’ ತಂಡ ಸೇರಿಲ್ಲ. ಈಗ ಮಾನ್ವಿತಾ ಹರೀಶ್ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಸದ್ಯದಲ್ಲೇ ಚಿತ್ರೀಕರಣದಲ್ಲಿ ಮಾನ್ವಿತಾ ಭಾಗಿಯಾಗಲಿದ್ದಾರೆ.
ಚಿತ್ರದಲ್ಲಿ ಮಾನ್ವಿತಾಗೆ ಒಳ್ಳೆಯ ಪಾತ್ರ ಸಿಕ್ಕಿದೆಯಂತೆ. ಯಾವುದೋ ಒಂದು ಗುರಿ ಇಟ್ಟುಕೊಂಡು ಅದಕ್ಕಾಗಿ ಶ್ರಮಿಸುವ ಪಾತ್ರದಲ್ಲಿ ಅವರು ಕಾಣಿಸಿಕೊಳ್ಳುತ್ತಿದ್ದಾರೆ. ಸದ್ಯ ಮಾನ್ವಿತಾ ಕೈಯಲ್ಲಿರುವ ನಾಲ್ಕು ಸಿನಿಮಾಗಳ ಪಾತ್ರ ಕೂಡಾ ತುಂಬಾ ವಿಭಿನ್ನವಾಗಿದ್ದು, ಜನ ಇಷ್ಟಪಡುವ ವಿಶ್ವಾಸ ಮಾನ್ವಿತಾಗಿದೆ. ಸದ್ಯ “ತಾರಕಾಸುರ’ ಚಿತ್ರೀಕರಣಕ್ಕಾಗಿ ಮಾನ್ವಿತಾ ಎದುರು ನೋಡುತ್ತಿದ್ದಾರೆ.
ಈ ಚಿತ್ರವನ್ನು ಚಂದ್ರಶೇಖರ ಬಂಡಿಯಪ್ಪ ನಿರ್ದೇಶಿಸುತ್ತಿದ್ದು, ನರಸಿಂಹಲು ನಿರ್ಮಾಪಕರು. ವೈಭವ್ ಈ ಚಿತ್ರದ ನಾಯಕ. ಇಲ್ಲಿ ಅಳಿವಿನಂಚಿನಲ್ಲಿರುವ ಜಾನಪದ ಕಲೆಯೊಂದರ ಸುತ್ತ ಕಥೆ ಮಾಡಿಕೊಂಡಿರುವ ಬಂಡಿಯಪ್ಪ ಅದನ್ನು ಕಮರ್ಷಿಯಲ್ ಆಗಿ ಹೇಳಲು ಹೊರಟಿದ್ದಾರಂತೆ.
ಹೀರೋ ಇಲ್ಲಿ ಮೂರು ಶೇಡ್ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದು, ಮೊದಲ ಶೇಡ್ನಲ್ಲಿ ಗಡ್ಡ ಬಿಟ್ಟು ಸಖತ್ ರಗಡ್ ಆಗಿ ಕಾಣಿಸಿಕೊಂಡರೆ, ಎರಡನೇ ಶೇಡ್ನಲ್ಲಿ ಸ್ಟೈಲಿಶ್ ಹಾಗೂ ಮೂರನೇ ಶೇಡ್ನಲ್ಲಿ ಹೈಸ್ಕೂಲ್ ಹುಡುಗನ ಪಾತ್ರದಲ್ಲಿ ವೈಭವ್ ಕಾಣಿಸಿಕೊಳ್ಳಲಿದ್ದಾರೆ. ಚಿತ್ರಕ್ಕೆ ಧರ್ಮವಿಶ್ ಸಂಗೀತ, ಕುಮಾರ್ ಛಾಯಾಗ್ರಹಣ, ಡಿಫರೆಂಟ್ ಡ್ಯಾನಿ ಸಾಹಸವಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ
Kumta: ಮಾಜಿ ಶಾಸಕಿ ಶಾರದಾ ಮೋಹನ್ ಶೆಟ್ಟಿ ಮರಳಿ ಕಾಂಗ್ರೆಸ್ ಸೇರ್ಪಡೆ
Udupi: ರಮಾಬಾಯಿ ಕೊಚ್ಚಿಕಾರ್ ಪೈ ನಿಧನ
Bajpe: ಹೆದ್ದಾರಿಯಲ್ಲಿ ಬ್ರೇಕ್ ಫೇಲ್ ಆಗಿ ಅಂಗಡಿಗಳು, ಹಲವು ವಾಹನಗಳಿಗೆ ಗುದ್ದಿದ ಲಾರಿ!
ಧರ್ಮ ಮಾರ್ಗದಲ್ಲಿ ನಡೆದರಷ್ಟೇ ಜೀವನ ಸಾರ್ಥಕ: ಶ್ರೀ ವಿಧುಶೇಖರಶ್ರೀ