Updated at Sun,23rd Jul, 2017 11:55AM IST
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಕೆಂಪೇಗೌಡ-2ಗೆ ನೀವಾ ಶರ್ಮಾ ನಾಯಕಿ

ಕೋಮಲ್‌ ನಾಯಕರಾಗಿರುವ "ಕೆಂಪೇಗೌಡ-2' ಚಿತ್ರಕ್ಕೆ ನಾಯಕಿಯ ಆಯ್ಕೆಯಾಗಿದೆ. ಜೊತೆಗೆ ನಿರ್ದೇಶಕರು ಬದಲಾಗಿದ್ದಾರೆ! ಹೌದು, "ಕೆಂಪೇಗೌಡ-2' ಚಿತ್ರಕ್ಕೆ ನೀವಾ ಶರ್ಮಾ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಮುಂಬೈ ಮೂಲದ ಮಾಡೆಲ್‌ ನೀವಾ ಈಗ ಕೋಮಲ್‌ಗೆ ಜೋಡಿ. ಚಿತ್ರಕ್ಕೆ ಸಾಕಷ್ಟು ಮಂದಿ ನಾಯಕಿಯರನ್ನು ಆಡಿಷನ್‌ ಮಾಡಲಾಗಿದ್ದು, ಈಗ ನೀವಾ ನಾಯಕಿಯಾಗಿದ್ದಾರೆ. ಚಿತ್ರದಲ್ಲಿ ಶ್ರೀಮಂತ ಕುಟುಂಬದ ಮಾಡರ್ನ್ ಹುಡುಗಿಯಾಗಿ ಕಾಣಿಸಿಕೊಳ್ಳುತ್ತಿದ್ದಾರಂತೆ ನೀವಾ.

ಇದು ನಾಯಕಿಯ ವಿಷಯವಾದರೆ ಚಿತ್ರದ ನಿರ್ದೇಶಕರು ಕೂಡಾ ಬದಲಾಗಿದ್ದಾರೆ. ಶಂಕರೇಗೌಡ ನಿರ್ಮಾಣದ ಈ ಚಿತ್ರವನ್ನು ಈ ಹಿಂದೆ ರೋಶನ್‌ ಮೋಹನ್‌ ನಿರ್ದೇಶಿಸುತ್ತಾರೆನ್ನಲಾಗಿತ್ತು. ಅದರಂತೆ ಚಿತ್ರದ ಟೈಟಲ್‌ ಬಿಡುಗಡೆಯಲ್ಲೂ ರೋಶನ್‌ ಮೋಹನ್‌ ಹಾಜರಿದ್ದರು. ಈಗ ಚಿತ್ರದ ನಿರ್ದೇಶನದ ಜವಾಬ್ದಾರಿ ಸ್ವತಃ ನಿರ್ಮಾಪಕ ಶಂಕರೇಗೌಡ ಅವರ ಹೆಗಲಿಗೆ ಬಂದಿದೆ.  

ಹೌದು, "ಕೆಂಪೇಗೌಡ-2' ಚಿತ್ರವನ್ನು ಶಂಕರೇಗೌಡ ಅವರೇ ನಿರ್ಮಿಸುತ್ತಿದ್ದಾರೆ. ರೋಶನ್‌ ಮೋಹನ್‌ ಅವರು ಶಂಕರೇಗೌಡ ಅವರ ಮತ್ತೂಂದು ತೆಲುಗು ಚಿತ್ರ ನಿರ್ದೇಶನ ಮಾಡಲಿದ್ದು, ಅದರಲ್ಲಿ ತಯಾರಿಯಲ್ಲಿ ತೊಡಗಿದ್ದಾರಂತೆ. "ಕೆಂಪೇಗೌಡ -2 ನನ್ನ ಕಲ್ಪನೆಯ ಚಿತ್ರ. ಆ ಕಲ್ಪನೆಯನ್ನು ನಾನು ಮಾಡಿದರೆ ಅದನ್ನು ನಾನಂದುಕೊಂಡಂತೆ ತೆರೆಮೇಲೆ ತರಬಹುದೆಂದೆನಿಸಿ ನಿರ್ದೇಶನವನ್ನು ವಹಿಸಿಕೊಂಡಿದ್ದೇನೆ.

ರೋಶನ್‌ ಅವರು ನಮ್ಮದೇ ಮತ್ತೂಂದು ಸಿನಿಮಾ ಕೆಲಸದಲ್ಲಿ ಬಿಝಿ ಇದ್ದಾರೆ' ಎನ್ನುವ ಮೂಲಕ ತಾವು ನಿರ್ದೇಶನ ಮಾಡುವುದನ್ನು ಒಪ್ಪಿಕೊಳ್ಳುತ್ತಾರೆ ಶಂಕರೇಗೌಡ. ಚಿತ್ರದ ಚಿತ್ರೀಕರಣ ಮುಂದಿನ ಸೋಮವಾರದಿಂದ ಆರಂಭವಾಗುತ್ತಿದೆ. ಬೆಂಗಳೂರು, ಚೆನ್ನೈ ಸುತ್ತಮುತ್ತ ಚಿತ್ರೀಕರಣ ನಡೆಯಲಿದೆ. ಚಿತ್ರದಲ್ಲಿ ಕ್ರಿಕೆಟಿಗ ಶ್ರೀಶಾಂತ್‌ ಕೂಡಾ ನಟಿಸುತ್ತಿದ್ದು, ಅವರಿಲ್ಲಿ ವಿಲನ್‌ ಆಗಿ ಕಾಣಿಸಿಕೊಳ್ಳುತ್ತಿದ್ದಾರೆನ್ನಲಾಗಿದೆ. 


Back to Top