ಕೆ.ಜಿ.ರಸ್ತೆಯಲ್ಲಿ ಸಿನ್ಮಾ ಟ್ರಾಫಿಕ್‌

Team Udayavani, Jul 17, 2017, 10:56 AM IST

kg-road-cinma.jpg

ಸಿನಿಮಾಗಳ ಬಿಡುಗಡೆ ವಾರದಿಂದ ವಾರಕ್ಕೆ ಹೆಚ್ಚಾಗುತ್ತಲೇ ಇದೆ. ಕಳೆದ ವಾರ ಐದು ಸಿನಿಮಾಗಳು ಬಿಡುಗಡೆಯಾಗಿದ್ದವು. ಅದಕ್ಕಿಂತ ಹಿಂದಿನ ವಾರ ನಾಲ್ಕು ಸಿನಿಮಾಗಳು ತೆರೆಗೆ ಬಂದಿದ್ದವು. ಹೀಗೆ ಸತತವಾಗಿ ವಾರಕ್ಕೆ ನಾಲ್ಕೈದು ಸಿನಿಮಾಗಳು ಬಿಡುಗಡೆಯಾಗುತ್ತಾ ಅದೃಷ್ಟ ಪರೀಕ್ಷೆ ಮಾಡಿಕೊಳ್ಳುತ್ತಲೇ ಇವೆ. ಆದರೆ, ಈ ವಾರ ಮಾತ್ರ ಬರೋಬ್ಬರಿ ಏಳು ಸಿನಿಮಾಗಳು ತೆರೆಕಾಣುತ್ತಿರೋದು ವಿಶೇಷ.

ಇತ್ತೀಚಿನ ದಿನಗಳಲ್ಲಿ ಒಂದೇ ವಾರದಲ್ಲಿ ಏಳು ಸಿನಿಮಾಗಳು ತೆರೆಕಂಡ ಉದಾಹರಣೆ ಇರಲಿಲ್ಲ. ಈ ಹಿಂದೆ ಏಳು ಸಿನಿಮಾಗಳು ತಮ್ಮ ಬಿಡುಗಡೆಯನ್ನು ಘೋಷಿಸಿಕೊಂಡಿದ್ದರೂ ಕೊನೆಕ್ಷಣದಲ್ಲಿ ಬಿಡುಗಡೆಯನ್ನು ಮುಂದಕ್ಕೆ ಹಾಕಿದ್ದವು. ಈ ವಾರ ಕೆ.ಜಿ.ರಸ್ತೆ ಏಳು ಸಿನಿಮಾಗಳ ಬಿಡುಗಡೆಗೆ ಸಾಕ್ಷಿಯಾಗುತ್ತಿದೆ. 

ಈ ಶುಕ್ರವಾರ ಅಂದರೆ ಜುಲೈ 21 ರಂದು “ಧೈರ್ಯಂ’, “ದಾದಾ ಇಸ್‌ ಬ್ಯಾಕ್‌’, “ಆಪರೇಷನ್‌ ಅಲಮೇಲಮ್ಮ’, “ಮೀನಾಕ್ಷಿ’, “ಟಾಸ್‌’, “ಶ್ವೇತ’ ಹಾಗೂ “ಟ್ರಿಗರ್‌’ ಚಿತ್ರಗಳು ಈ ವಾರ ತೆರೆಕಾಣುತ್ತಿವೆ. ಹೊಸಬರ ಹಾಗೂ ಈಗಾಗಲೇ ಚಿತ್ರಪ್ರೇಮಿಗಳಿಗೆ ಪರಿಚಿತರಾಗಿರುವವರ ಚಿತ್ರಗಳು ಈ ಪಟ್ಟಿಯಲ್ಲಿವೆ ಎಂಬುದು ವಿಶೇಷ. ಆ್ಯಕ್ಷನ್‌, ಲವ್‌ಸ್ಟೋರಿ, ಕಾಮಿಡಿ, ಹಾರರ್‌ ಜಾನರ್‌ಗೆ ಸೇರಿದ ಚಿತ್ರಗಳು ಒಂದೇ ವಾರ ಒಟ್ಟಿಗೆ ತೆರೆಕಾಣುವ ಮೂಲಕ ಪ್ರೇಕ್ಷಕರಿಗೆ ಆಯ್ಕೆಯ ಅವಕಾಶ ಮಾಡಿಕೊಟ್ಟಿವೆ. 

ಅಜೇಯ್‌ ರಾವ್‌ ಮೊದಲ ಬಾರಿಗೆ ಆ್ಯಕ್ಷನ್‌ ಇಮೇಜ್‌ನಲ್ಲಿ ಕಾಣಿಸಿಕೊಂಡಿರುವ “ಧೈರ್ಯಂ’ ಚಿತ್ರವನ್ನು ಶಿವತೇಜಸ್‌ ನಿರ್ದೇಶನ ಮಾಡಿದ್ದಾರೆ. ಈ ಹಿಂದೆ “ಮಳೆ’ ಚಿತ್ರ ನಿರ್ಮಿಸಿದ್ದ ಶಿವ ತೇಜಸ್‌ ಅವರ ಎರಡನೇ ಚಿತ್ರವಿದು. ಚಿತ್ರದಲ್ಲಿ ಆದಿತಿ ನಾಯಕಿಯಾಗಿ ನಟಿಸಿದ್ದು, ರವಿಶಂಕರ್‌ ಪೊಲೀಸ್‌ ಆಫೀಸರ್‌ ಆಗಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರವನ್ನು ಡಾ.ರಾಜು ನಿರ್ಮಾಣ ಮಾಡಿದ್ದಾರೆ.

ಮಧ್ಯಮ ವರ್ಗದ ಹುಡುಗನೊಬ್ಬ ತನಗೆ ಬರುವ ಸಮಸ್ಯೆಗಳನ್ನು ಧೈರ್ಯದಿಂದ ಹೇಗೆ ಎದುರಿಸುತ್ತಾನೆಂಬ ಅಂಶಗಳೊಂದಿಗೆ ಈ ಚಿತ್ರ ಸಾಗುತ್ತದೆ. ಈಗಾಗಲೇ ಚಿತ್ರದ ಟ್ರೇಲರ್‌ ಹಾಗೂ ಹಾಡುಗಳಿಗೆ ಮೆಚ್ಚುಗೆ ವ್ಯಕ್ತವಾಗಿರುವುದರಿಂದ ಸಿನಿಮಾವನ್ನು ಕೂಡಾ ಜನ ಇಷ್ಟಪಡುತ್ತಾರೆಂಬ ವಿಶ್ವಾಸದಲ್ಲಿ ಚಿತ್ರತಂಡ ಶುಕ್ರವಾರಕ್ಕಾಗಿ ಎದುರು ನೋಡುತ್ತಿದೆ. ಚಿತ್ರ ತ್ರಿವೇಣಿಯಲ್ಲಿ ಬಿಡುಗಡೆಯಾಗುತ್ತಿದೆ.

ಇನ್ನು “ದಾದಾ ಇಸ್‌ ಬ್ಯಾಕ್‌’ ಚಿತ್ರವನ್ನು ಈ ಹಿಂದೆ “ಗೊಂಬೆಗಳ ಲವ್‌’ ಮಾಡಿದ ಸಂತೋಷ್‌ ನಿರ್ದೇಶನ ಮಾಡಿದ್ದು, ಅರುಣ್‌ ನಾಯಕರಾಗಿ ನಟಿಸಿದ್ದಾರೆ. ಚಿತ್ರದಲ್ಲಿ ಪಾರ್ಥಿಬನ್‌ ಕೂಡಾ ಪ್ರಮುಖ ಪಾತ್ರ ಮಾಡಿದ್ದು, ಶಾರದಾ ಚಿತ್ರಮಂದಿರಲ್ಲಿ ಚಿತ್ರ ತೆರೆಕಾಣುತ್ತಿದೆ. ಸುನಿ ನಿರ್ದೇಶನದ “ಆಪರೇಷನ್‌ ಅಲಮೇಲಮ್ಮ’ ಒಂದು ಹೊಸ ಪ್ರಯೋಗದ ಚಿತ್ರವಾಗಿದ್ದು, ಚಿತ್ರದಲ್ಲಿ ರಿಷಿ ಹಾಗೂ ಶ್ರದ್ಧಾ ಶ್ರೀನಾಥ್‌ ನಟಿಸಿದ್ದಾರೆ.

ಟ್ರೇಲರ್‌ ಹಿಟ್‌ ಆಗಿದ್ದು, ಚಿತ್ರದ ಮೇಲೂ ಚಿತ್ರತಂಡ ಸಾಕಷ್ಟು ನಿರೀಕ್ಷೆ ಇಟ್ಟಿದೆ. ಈ ಚಿತ್ರ ಕೆ.ಜಿ.ರಸ್ತೆಯ ಸಂತೋಷ್‌ ಚಿತ್ರಮಂದಿರದಲ್ಲಿ ತೆರೆಕಾಣುತ್ತಿದೆ. ಇದಲ್ಲದೇ, ವಿಜಯರಾಘವೇಂದ್ರ ಐದು ವರ್ಷಗಳ ಹಿಂದೆ ಒಪ್ಪಿಕೊಂಡು ನಟಿಸಿದ “ಟಾಸ್‌’ ಚಿತ್ರ ಕೂಡಾ ಈ ವಾರ ಬಿಡುಗಡೆಯಾಗುತ್ತಿದ್ದು, ಈ ಚಿತ್ರವನ್ನು ದಯಾಳ್‌ ಪದ್ಮನಾಭನ್‌ ನಿರ್ದೇಶಿಸಿದ್ದಾರೆ. ಈ ಹಿಂದೆ ಈ ಚಿತ್ರಕ್ಕೆ “ಒಂದು ರೂಪಾಯಿ ಎರಡು ಪ್ರೀತಿ’ ಎಂದು ಟೈಟಲ್‌ ಇಡಲಾಗಿತ್ತು.

ಈಗ ಅದು ಟ್ಯಾಗ್‌ಲೈನ್‌ ಆಗಿ “ಟಾಸ್‌’ ಎಂಬ ಟೈಟಲ್‌ನೊಂದಿಗೆ ಬಿಡುಗಡೆಯಾಗುತ್ತಿದೆ. ಇದಲ್ಲದೇ, “ಶ್ವೇತ’ ಎಂಬ ಹಾರರ್‌ ಸಿನಿಮಾ ಸ್ವಪ್ನ ಚಿತ್ರಮಂದಿರದಲ್ಲಿ, “ಟ್ರಿಗರ್‌’ ಎಂಬ ಚಿತ್ರ ಭೂಮಿಕಾದಲ್ಲಿ ಬಿಡುಗಡೆಯಾಗುತ್ತಿದೆ. ಜೊತೆಗೆ ಶುಭಾಪೂಂಜಾ ಅಭಿನಯದ “ಮೀನಾಕ್ಷಿ’ ಚಿತ್ರ ಕೂಡಾ ತನ್ನ ಬಿಡುಗಡೆಯನ್ನು ಘೋಷಿಸಿಕೊಂಡಿದ್ದು, ಕೆ.ಜಿ.ರಸ್ತೆಯ ಚಿತ್ರಮಂದಿರ ಘೋಷಿಸಿಲ್ಲ. ವಾರದಿಂದ ವಾರಕ್ಕೆ ಬಿಡುಗಡೆಯಾಗುತ್ತಿರುವ ಸಿನಿಮಾಗಳ ಸಂಖ್ಯೆ ಹೆಚ್ಚಾಗುತ್ತಿರುವ ಮೂಲಕ ಥಿಯೇಟರ್‌ ಸಮಸ್ಯೆ ಕೂಡಾ ಎದುರಾಗುತ್ತಿದೆ.

ಹಿಂದಿನ ವಾರ ತೆರೆಕಂಡ ಚಿತ್ರಗಳು ಒಂದೇ ವಾರಕ್ಕೆ ಥಿಯೇಟರ್‌ ಬಿಟ್ಟುಕೊಡುವಂತಾಗಿದೆ. ಹಾಗಾಗಿಯೇ “ಹೊಂಬಣ್ಣ’, “ಕಥಾವಿಚಿತ್ರ’ ಸೇರಿದಂತೆ ಅನೇಕ ಚಿತ್ರಗಳು ಈಗ ಪ್ರಮುಖ ಚಿತ್ರಮಂದಿರಗಳಲ್ಲಿಲ್ಲ. ಈ ನಡುವೆಯೇ ಎರಡು ವಾರಗಳ ಹಿಂದೆ ತೆರೆಕಂಡಿದ್ದ “ಒಂದು ಮೊಟ್ಟೆಯ ಕಥೆ’ ಚಿತ್ರಕ್ಕೆ ಈಗ ಕೆ.ಜಿ.ರಸ್ತೆಯಲ್ಲಿ ಚಿತ್ರಮಂದಿರ ಸಿಕ್ಕಿದ್ದು, ಅನುಪಮ ಚಿತ್ರಮಂದಿರದಲ್ಲಿ ಪ್ರದರ್ಶನ ಕಾಣುತ್ತಿದೆ. 

ಟಾಪ್ ನ್ಯೂಸ್

ಚೊಂಬಿನ ಮೂಲಕ ಮೋದಿ ಸ್ವಾಗತಕ್ಕೆ ಕಾಂಗ್ರೆಸ್‌ ಸಿದ್ಧತೆ

ಚೊಂಬಿನ ಮೂಲಕ ಮೋದಿ ಸ್ವಾಗತಕ್ಕೆ ಕಾಂಗ್ರೆಸ್‌ ಸಿದ್ಧತೆ

Congresss ಚೊಂಬು ಜಾಹೀರಾತು ವಿರುದ್ಧ ಬಿಜೆಪಿ ಚಾರ್ಜ್‌ಶೀಟ್‌

Congresss ಚೊಂಬು ಜಾಹೀರಾತು ವಿರುದ್ಧ ಬಿಜೆಪಿ ಚಾರ್ಜ್‌ಶೀಟ್‌

Lok Sabha Elections ಕೆಲಸ ಮಾಡದಿದ್ದರೆ ಮನೆಗೆ: ಸುರ್ಜೇವಾಲ

Lok Sabha Elections ಕೆಲಸ ಮಾಡದಿದ್ದರೆ ಮನೆಗೆ: ಸುರ್ಜೇವಾಲ

Shobha, Bharathi Shetty  ಹೊರತು ಬಿಎಸ್‌ವೈ ಬೇರೆ ಯಾರನ್ನೂ ಬೆಳೆಸುತ್ತಿಲ್ಲ: ಈಶ್ವರಪ್ಪ

Shobha, Bharathi Shetty ಹೊರತು ಬಿಎಸ್‌ವೈ ಬೇರೆ ಯಾರನ್ನೂ ಬೆಳೆಸುತ್ತಿಲ್ಲ: ಈಶ್ವರಪ್ಪ

Lok Sabha Elections; ಮುಗಿದ ವೀಣಾ ಮುನಿಸು; ಕಾಂಗ್ರೆಸ್‌ ಈಗ “ಸಂಯುಕ್ತ’

Lok Sabha Elections; ಮುಗಿದ ವೀಣಾ ಮುನಿಸು; ಕಾಂಗ್ರೆಸ್‌ ಈಗ “ಸಂಯುಕ್ತ’

High Court ಎಚ್‌ಡಿಕೆಗೆ ಮಹಿಳಾ ಆಯೋಗ ನೀಡಿದ್ದ ನೋಟಿಸ್‌ಗೆ ಹೈಕೋರ್ಟ್‌ ತಡೆ

High Court ಎಚ್‌ಡಿಕೆಗೆ ಮಹಿಳಾ ಆಯೋಗ ನೀಡಿದ್ದ ನೋಟಿಸ್‌ಗೆ ಹೈಕೋರ್ಟ್‌ ತಡೆ

banMysuru: ಮೋದಿ ಕುರಿತು ಹಾಡು ಬರೆದ ಯೂಟ್ಯೂಬರ್‌ಗೆ ಹಲ್ಲೆ

Mysuru: ಮೋದಿ ಕುರಿತು ಹಾಡು ಬರೆದ ಯೂಟ್ಯೂಬರ್‌ಗೆ ಹಲ್ಲೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Usire Usire: ಕೈ ಕೊಟ್ಟ ನಿರ್ದೇಶಕ; ನಿರ್ಮಾಪಕ ಕಂಗಾಲು

Usire Usire: ಕೈ ಕೊಟ್ಟ ನಿರ್ದೇಶಕ; ನಿರ್ಮಾಪಕ ಕಂಗಾಲು

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

O2

O2: ತೆರೆಗೆ ಬಂತು ಓ2; ಚಿತ್ರದ ಮೇಲೆ ಆಶಿಕಾ ನಿರೀಕ್ಷೆ

nalkane ayama kannada movie

Sandalwood; ‘ನಾಲ್ಕನೇ ಆಯಾಮ’ ಮೇಲೆ ಗೌತಮ್‌ ಕನಸು: ಇಂದು ತೆರೆಗೆ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

ಚೊಂಬಿನ ಮೂಲಕ ಮೋದಿ ಸ್ವಾಗತಕ್ಕೆ ಕಾಂಗ್ರೆಸ್‌ ಸಿದ್ಧತೆ

ಚೊಂಬಿನ ಮೂಲಕ ಮೋದಿ ಸ್ವಾಗತಕ್ಕೆ ಕಾಂಗ್ರೆಸ್‌ ಸಿದ್ಧತೆ

Congresss ಚೊಂಬು ಜಾಹೀರಾತು ವಿರುದ್ಧ ಬಿಜೆಪಿ ಚಾರ್ಜ್‌ಶೀಟ್‌

Congresss ಚೊಂಬು ಜಾಹೀರಾತು ವಿರುದ್ಧ ಬಿಜೆಪಿ ಚಾರ್ಜ್‌ಶೀಟ್‌

Lok Sabha Elections ಕೆಲಸ ಮಾಡದಿದ್ದರೆ ಮನೆಗೆ: ಸುರ್ಜೇವಾಲ

Lok Sabha Elections ಕೆಲಸ ಮಾಡದಿದ್ದರೆ ಮನೆಗೆ: ಸುರ್ಜೇವಾಲ

Shobha, Bharathi Shetty  ಹೊರತು ಬಿಎಸ್‌ವೈ ಬೇರೆ ಯಾರನ್ನೂ ಬೆಳೆಸುತ್ತಿಲ್ಲ: ಈಶ್ವರಪ್ಪ

Shobha, Bharathi Shetty ಹೊರತು ಬಿಎಸ್‌ವೈ ಬೇರೆ ಯಾರನ್ನೂ ಬೆಳೆಸುತ್ತಿಲ್ಲ: ಈಶ್ವರಪ್ಪ

Lok Sabha Elections; ಮುಗಿದ ವೀಣಾ ಮುನಿಸು; ಕಾಂಗ್ರೆಸ್‌ ಈಗ “ಸಂಯುಕ್ತ’

Lok Sabha Elections; ಮುಗಿದ ವೀಣಾ ಮುನಿಸು; ಕಾಂಗ್ರೆಸ್‌ ಈಗ “ಸಂಯುಕ್ತ’

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.