ಚಂದ್ರು-ವಿಜಿ ಮತ್ತೂಂದು ಸಿನಿಮಾ
Team Udayavani, Aug 14, 2017, 10:59 AM IST
ದುನಿಯಾ ವಿಜಯ್ ಹಾಗೂ ನಿರ್ದೇಶಕ ಆರ್.ಚಂದ್ರು ಕಾಂಬಿನೇಶನ್ನಲ್ಲಿ “ಕನಕ’ ಚಿತ್ರ ಬರುತ್ತಿರುವ ವಿಚಾರ ನಿಮಗೆ ಗೊತ್ತೇ ಇದೆ. ಬಹುತೇಕ ಚಿತ್ರೀಕರಣ ಪೂರ್ಣಗೊಂಡಿದ್ದು, ಇನ್ನು ಚಿತ್ರದ ಕ್ಲೈಮ್ಯಾಕ್ಸ್ ಚಿತ್ರೀಕರಣವಷ್ಟೇ ಬಾಕಿ ಇದೆ. ಹೀಗಿರುವಾಗಲೇ ಚಿತ್ರತಂಡದಿಂದ ಮತ್ತೂಂದು ಸುದ್ದಿ ಬಂದಿದೆ. ಅದು ಹೊಸ ಸಿನಿಮಾದ ಸುದ್ದಿ. ಹೌದು, ಚಂದ್ರು ಹಾಗೂ ವಿಜಯ್ ಕಾಂಬಿನೇಶನ್ನಲ್ಲಿ ಮತ್ತೂಂದು ಸಿನಿಮಾ ಬರುತ್ತಿದೆ. ಅದು ಕುಸ್ತಿ ಕುರಿತಾಗಿ.
ಹಾಗಂತ ಯಾವಾಗ ಬರುತ್ತದೆ ಎಂದು ಕೇಳಿದರೆ ಅದಕ್ಕೆ ಇನ್ನೂ ಸಾಕಷ್ಟು ಸಮಯವಿದೆ. ಏಕೆಂದರೆ ಈಗಾಗಲೇ ವಿಜಯ್ ಒಪ್ಪಿಕೊಂಡಿರುವ ಸಾಕಷ್ಟು ಸಿನಿಮಾಗಳು ಕ್ಯೂನಲ್ಲಿವೆ. ಆ ಎಲ್ಲಾ ಸಿನಿಮಾಗಳನ್ನು ಮುಗಿಸಿಕೊಳ್ಳಬೇಕು. ಅಲ್ಲಿವರೆಗೆ ಅಂದುಕೊಂಡಿದ್ದು, ಅಂದುಕೊಂಡಂತೆ ನಡೆದರೆ ವಿಜಿ ಹಾಗೂ ಚಂದ್ರು ಕಾಂಬಿನೇಶನ್ನ ಚಿತ್ರ ಸೆಟ್ಟೇರಬಹುದು. ಈ ಬಗ್ಗೆ ಮಾತನಾಡುವ ವಿಜಯ್, “ಕುಸ್ತಿ, ಪೈಲ್ವಾ®ಕಿ…ಗಳ ಕುರಿತು ಬೇರೆ ಬೇರೆ ಭಾಷೆಗಳಲ್ಲಿ ಸಾಕಷ್ಟು ಸಿನಿಮಾಗಳು ಬಂದಿವೆ.
ನಮ್ಮಲ್ಲಿ ಬಂದಿಲ್ಲ. ನಾನು, ಚಂದ್ರು ಹೀಗೆ ಮಾತನಾಡುತ್ತಿರುವಾಗ ಆ ಸಬೆಕ್ಟ್ ಬಂತು. ಅದನ್ನಿಟ್ಟುಕೊಂಡು ಸಿನಿಮಾ ಮಾಡಿದರೆ ಹೇಗೆ ಎಂದು ಮಾತನಾಡಿಕೊಂಡೆವು. ಮತ್ತೆ ಒಟ್ಟಿಗೆ ಸಿನಿಮಾ ಮಾಡುವ ಯೋಚನೆ ಬಂದಿದ್ದು ನಿಜ. ಹಾಗಂತ ಆ ಸಿನಿಮಾ ಯಾವಾಗ ಆಗುತ್ತದೋ ಗೊತ್ತಿಲ್ಲ. ಮುಖ್ಯವಾಗಿ ಈ ಸಿನಿಮಾಕ್ಕಾಗಿ ನಾನು ನನ್ನ ತೂಕ ಹೆಚ್ಚಿಸಿಕೊಳ್ಳಬೇಕು. ಪಾತ್ರಕ್ಕಾಗಿ ತುಂಬಾ ತಯಾರಿ ಮಾಡಿಕೊಳ್ಳಬೇಕು. ಇವಕ್ಕೆಲ್ಲಾ ಸಾಕಷ್ಟು ಸಮಯ ಬೇಕು.
ಕಡಿಮೆ ಎಂದರೂ ಒಂದು ವರ್ಷ ಆ ಸಿನಿಮಾಕ್ಕಾಗಿ ನಾನು ತಯಾರಾಗಬೇಕು’ ಎನ್ನುತ್ತಾರೆ ವಿಜಯ್. ಚಂದ್ರು ಕೂಡಾ ವಿಜಯ್ ಜೊತೆ ಮತ್ತೆ ಸಿನಿಮಾ ಮಾಡುತ್ತಿರುವ ಬಗ್ಗೆ ಖುಷಿಯಾಗಿದ್ದಾರೆ. “ಕುಸ್ತಿ ಬಗ್ಗೆ ಸಿನಿಮಾ ಮಾಡಬೇಕೆಂಬುದು ನಮ್ಮಿಬ್ಬರ ಆಸೆ. ಆ ಪಾತ್ರಕ್ಕೆ ವಿಜಯ್ ತುಂಬಾ ಚೆನ್ನಾಗಿ ಹೊಂದಿಕೊಳ್ಳುತ್ತಾರೆ. ಮುಂದೆ ಜೊತೆಗೆ ಸಿನಿಮಾ ಮಾಡುತ್ತೇವೆ’ ಎನ್ನುವುದು ಚಂದ್ರು ಮಾತು. ಅಂದಹಾಗೆ, ಈ ಚಿತ್ರಕ್ಕೆ “ಕುಸ್ತಿ’ ಎಂದು ಹೆಸರಿಡುವ ಯೋಚನೆ ಕೂಡಾ ಚಂದ್ರು ಅವರಿಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bajpe: ಹೆದ್ದಾರಿಯಲ್ಲಿ ಬ್ರೇಕ್ ಫೇಲ್ ಆಗಿ ಅಂಗಡಿಗಳು, ಹಲವು ವಾಹನಗಳಿಗೆ ಗುದ್ದಿದ ಲಾರಿ!
ಧರ್ಮ ಮಾರ್ಗದಲ್ಲಿ ನಡೆದರಷ್ಟೇ ಜೀವನ ಸಾರ್ಥಕ: ಶ್ರೀ ವಿಧುಶೇಖರಶ್ರೀ
CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ
Karkala: ಕಾಂಗ್ರೆಸ್ಸಿನಿಂದ ಬೃಹತ್ ಪರಿವರ್ತನಾ ರ್ಯಾಲಿ
Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ