ದರ್ಶನ್‌ ಡೇಟ್ಸ್‌ 65 ದಿನ!

Team Udayavani, Aug 18, 2017, 4:23 PM IST

_tarak.jpg

ಸಾಮಾನ್ಯವಾಗಿ ಸ್ಟಾರ್‌ಗಳ ಸಿನಿಮಾ ಅಂದ್ರೆ ದೊಡ್ಡ ಶೆಡ್ನೂಲ್‌. ಹೀರೋ ಡೇಟ್ಸ್‌ ನೂರು ದಿನ ಬೇಕು. ಉದ್ದಕ್ಕೆ ಚಿತ್ರೀಕರಣ ಮಾಡುತ್ತಲೇ ಇರಬೇಕೆಂಬ ಮೈಂಡ್‌ಸೆಟ್‌ನಿಂದಲೇ ಬರುವ ನಿರ್ಮಾಪಕ, ನಿರ್ದೇಶಕರಿದ್ದಾರೆ. ನಿರ್ಮಾಪಕ, ನಿರ್ದೇಶಕರ ಒತ್ತಾಯಕ್ಕೆ ಮಣಿದು ಸ್ಟಾರ್‌ಗಳು ಕೂಡಾ ನೂರು ದಿನ ಚಿತ್ರೀಕರಣ ಮಾಡಿದ ಉದಾಹರಣೆಗಳು ಸಾಕಷ್ಟಿವೆ.

ಒಂದು ವೇಳೆ ಸಿನಿಮಾ ಚೆನ್ನಾಗಿ ಓಡಿಲ್ಲದಿದ್ದರೆ ನೆಗೆಟಿವ್‌ ಅಂಶಗಳನ್ನೆಲ್ಲಾ  ಹೀರೋ ಮೇಲೆ ಹಾಕುವ ಮೂಲಕ ಜವಾಬ್ದಾರಿಯಿಂದ ಜಾರಿ ಕೊಳ್ಳುವ ನಿರ್ಮಾಪಕ, ನಿರ್ದೇಶಕರನ್ನು ಗಾಂಧಿನಗರದಲ್ಲಿ ಸಿಗುತ್ತಾರೆ. ಈಗ ದರ್ಶನ್‌ ಒಂದು ತೀರ್ಮಾನಕ್ಕೆ ಬಂದಿದ್ದಾರೆ. ಏನದು ಪ್ಲಾನ್‌ ಎಂಬ ಕುತೂಹಲವಿದ್ದರೆ ಇಲ್ಲಿ ಕೇಳಿ. ಅದು ಯಾವುದೇ ಸಿನಿಮಾಕ್ಕಾದರೂ 65 ದಿನಕ್ಕಿಂತ ಹೆಚ್ಚು ಡೇಟ್ಸ್‌ ಕೊಡಲ್ಲ ಎಂದು. ಒಂದು ವೇಳೆ ಏನೋ ಹೆಚ್ಚು ಕಮ್ಮಿಯಾದರೆ 5 ದಿನ ಎಕ್ಸಟ್ರಾ. ಅಲ್ಲಿಗೆ 70 ದಿನ.

70 ದಿನದಲ್ಲಿ ಸಂಪೂರ್ಣ ಚಿತ್ರೀಕರಣ ಮುಗಿಸಬೇಕು. ಆ ನಂತರವೂ ಡೇಟ್ಸ್‌ ಬೇಕು ಎಂದು ಕೇಳಿದರೆ ಅದನ್ನು ಯಾವ ತರಹ ಸಂಭಾಳಿಸಬೇಕೆಂಬ ಐಡಿಯಾವೂ ದರ್ಶನ್‌ ಅವರಲ್ಲಿದೆ. ದರ್ಶನ್‌ ಅವರ ಈ ಡೇಟ್ಸ್‌ ಪ್ಲ್ರಾನ್‌ “ತಾರಕ್‌’ ಮೂಲಕವೇ ಜಾರಿಯಾಗಿದೆ.ದರ್ಶನ್‌ ಕೊಟ್ಟ ಡೇಟ್ಸ್‌ ಅನ್ನು ನಿರ್ದೇಶಕ ಪ್ರಕಾಶ್‌ ಚೆನ್ನಾಗಿ ಬಳಸಿಕೊಂಡಿದ್ದಾರೆ. ಹಾಗಾಗಿ, “ತಾರಕ್‌’ ಕೇವಲ 64 ದಿನದಲ್ಲಿ ಶೂಟಿಂಗ್‌ ಮುಗಿಸಿದೆ. ಇದು ದರ್ಶನ್‌ಗೂ ಖುಷಿ ಕೊಟ್ಟಿದೆ. 

“ನಿರ್ದೇಶಕ ಪ್ರಕಾಶ್‌ ಅವರು ಮಾಡಿಕೊಂಡ ಸಿದ್ಧತೆಯನ್ನು ಮೆಚ್ಚಲೇಬೇಕು. ಪಕ್ಕಾ ಪೂರ್ವತಯಾರಿಯೊಂದಿಗೆ ಅಂದುಕೊಂಡಂತೆ ಚಿತ್ರೀಕರಣ ಮಾಡಿದ್ದಾರೆ. 23 ದಿನ ಯುರೋಪ್‌ನಲ್ಲಿ ಶೂಟಿಂಗ್‌ ಮಾಡಿದೆವು. ಮೂರೂವರೆ ಸಾವಿರ ಕಿಲೋಮೀಟರ್‌ನ ಸುತ್ತಾಡಿ, ಹಾಡು, ಫೈಟು ಹಾಗೂ ಕೆಲವು ಪ್ರಮುಖ ದೃಶ್ಯಗಳನ್ನು ಚಿತ್ರೀಕರಿಸಿಕೊಂಡೆವು. ಪ್ರಕಾಶ್‌ ಅಷ್ಟೊಂದು ಸಿದ್ಧತೆ ಮಾಡಿಕೊಂಡಿದ್ದರು’ ಎನ್ನುವ ಮೂಲಕ ಪ್ರಕಾಶ್‌ ಮಾಡಿಕೊಂಡಿರುವ ತಯಾರಿ ಬಗ್ಗೆ ಖುಷಿ ವ್ಯಕ್ತಪಡಿಸುತ್ತಾರೆ ದರ್ಶನ್‌. 

ಅಂದಹಾಗೆ, “ತಾರಕ್‌’ ತಾತ ಹಾಗೂ ಮೊಮ್ಮಗನ ನಡುವಿನ ಬಾಂಧವ್ಯದ ಒಂದು ಕಥೆ. ಪಕ್ಕಾ ಫ್ಯಾಮಿಲಿ ಎಂಟರ್‌ಟೈನರ್‌ ಸಿನಿಮಾ.”ಪ್ರಕಾಶ್‌ ಸಿನಿಮಾ ಮಾಡುತ್ತೇನೆ ಎಂದು ನನ್ನ ಬಳಿಗೆ ಬಂದಾಗ, ನಿಮ್ಮ ಶೈಲಿ ಏನಿದೆ ಅದಕ್ಕೆ ತಕ್ಕಂತೆ ನೀವು ಸಿನಿಮಾ ಮಾಡಿ. ನಾನು ಅದರಲ್ಲಿ ನಟಿಸುತ್ತೇನೆ. ನನ್ನ ಶೈಲಿಗೆ, ನನ್ನನ್ನು ಗಮನದಲ್ಲಿಟ್ಟುಕೊಂಡು ಸಿನಿಮಾ ಮಾಡಬೇಡಿ. ಈ ಬಾರಿ ನಿಮ್ಮ ಕೋರ್ಟ್‌ಗೆ ನಾನು ಬರುತ್ತೇನೆ. ನನಗಾಗಿ ಯಾವ ಅಂಶವನ್ನು ಸೇರಿಸಬೇಡಿ ಅಂದೆ.

ಅದರಂತೆ ಸಿನಿಮಾ ಮಾಡಿದ್ದಾರೆ. ಇಲ್ಲಿ ನೀವು ತಾತ ಹಾಗೂ ಮೊಮ್ಮಗನ ನಡುವಿನ ಪ್ರೀತಿ, ತಮಾಷೆ ಎಲ್ಲವನ್ನು ನೋಡಬಹುದು. ಸಿನಿಮಾ ನೋಡಿದವರಿಗೆ ನಮಗೆ ಈ ತರಹದ ತಾತ ಇದ್ದಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು ಎಂಬ ಆಸೆಯಾಗುತ್ತದೆ. ಆ ತರಹದ ಒಂದು ಪಾತ್ರವನ್ನು ದೇವರಾಜ್‌ ಅವರು ಮಾಡಿದ್ದಾರೆ. ಸಿನಿಮಾದ ನಿಜವಾದ ಹೀರೋ ಎಂದರೆ ನಿರ್ದೇಶಕ ಪ್ರಕಾಶ್‌ ಹಾಗೂ ದೇವರಾಜ್‌. ನಾನು ಇಡೀ ಸಿನಿಮಾದಲ್ಲಿ ಅಲ್ಲಲ್ಲಿ ಬಂದು ಹೋಗುತ್ತೇನೆ’ ಎನ್ನುವ ಮೂಲಕ ಇದೊಂದು ಫ್ಯಾಮಿಲಿ ಎಂಟರ್‌ಟೈನರ್‌ ಸಿನಿಮಾ ಎನ್ನುತ್ತಾರೆ ದರ್ಶನ್‌. 

ಟಾಪ್ ನ್ಯೂಸ್

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Tour: 9 ದಿನ 4,800 ಕಿ.ಮೀ ಪ್ರಯಾಣ-ಅಡ್ವೆಂಚರ್‌ ಬೈಕ್‌ನಲ್ಲಿ 64ರ ಹಿರಿಯರ ಸಾಹಸ ಯಾನ

Tour: 9 ದಿನ 4,800 ಕಿ.ಮೀ ಪ್ರಯಾಣ-ಅಡ್ವೆಂಚರ್‌ ಬೈಕ್‌ನಲ್ಲಿ 64ರ ಹಿರಿಯರ ಸಾಹಸ ಯಾನ

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…

Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ

Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

O2

O2: ತೆರೆಗೆ ಬಂತು ಓ2; ಚಿತ್ರದ ಮೇಲೆ ಆಶಿಕಾ ನಿರೀಕ್ಷೆ

ಸೂಪರ್ ಸ್ಟಾರ್‌ ಮೋಹನ್‌ ಲಾಲ್‌ ಭೇಟಿಯಾದ ರಿಷಬ್‌: ʼಕಾಂತಾರʼ ಕ್ಕೆ ಸ್ವಾಗತ ಎಂದ ನೆಟ್ಟಿಗರು.!

ಸೂಪರ್ ಸ್ಟಾರ್‌ ಮೋಹನ್‌ ಲಾಲ್‌ ಭೇಟಿಯಾದ ರಿಷಬ್‌: ʼಕಾಂತಾರʼ ಕ್ಕೆ ಸ್ವಾಗತ ಎಂದ ನೆಟ್ಟಿಗರು.!

Actor Dwarakish: ಸಕಲ ಗೌರವಗಳೊಂದಿಗೆ ನಟ ದ್ವಾರಕೀಶ್‌ ಅಂತ್ಯಕ್ರಿಯೆ

Actor Dwarakish: ಸಕಲ ಗೌರವಗಳೊಂದಿಗೆ ನಟ ದ್ವಾರಕೀಶ್‌ ಅಂತ್ಯಕ್ರಿಯೆ

choo mantar kannada movie

Sharan; ಮೇ 10ಕ್ಕೆ ‘ಛೂ ಮಂತರ್‌’ ತೆರೆಗೆ ಸಿದ್ಧ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

15-uv-fusion

Time management: ತಂತ್ರಜ್ಞಾನ ಯುಗದಲ್ಲಿ ಸಮಯ ನಿರ್ವಹಣೆ ಮುಖ್ಯ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

14-fusion

Women: ಸ್ತ್ರೀ ಎಂದರೆ ಅಷ್ಟೇ ಸಾಕೇ

13-

Woman: ಸದಾಕಾಲ ಸಾಧಕಿ ಹೆಣ್ಣು

12-

Sirsi Festival: ನಾವು ಬಂದೇವ ಶಿರಸಿ ಜಾತ್ರೆ ನೋಡಲಿಕ್ಕೆ !

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.