ಬ್ರಿಟಿಷ್ ಪಾರ್ಲಿಮೆಂಟ್ನ ಗೌರವಕ್ಕೆ ಭಾಜನರಾದ ನಟ ದರ್ಶನ್
Team Udayavani, Oct 20, 2017, 10:35 AM IST
ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗದೀಪ ಅವರಿಗೆ ಗುರುವಾರ ಬ್ರಿಟಿಷ್ ಪಾರ್ಲಿಮೆಂಟ್ನಲ್ಲಿ ಸಿನಿಮಾ ರಂಗದ ಸಾಧನೆ ಪರಿಗಣಿಸಿ, ಪ್ರಶಸ್ತಿ ಪ್ರದಾನ ಮಾಡಿ ಪುರಸ್ಕರಿಸಲಾಯಿತು. ಈ ವೇಳೆ ದರ್ಶನ್ ಪುತ್ರ ವಿನೀಶ್ ಕೂಡ ಹಾಜರಿದ್ದರು.
ದರ್ಶನ್ ಈ ಪ್ರಶಸ್ತಿಗೆ ಆಯ್ಕೆಯಾದ ಸ್ಯಾಂಡಲ್ ವುಡ್ ಎರಡನೇ ನಟ. ಮೊದಲಿಗೆ ಹ್ಯಾಟ್ರಿಕ್ ಹಿರೋ ಶಿವರಾಜಕುಮಾರ್ ಈ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಬ್ರಿಟಿಷ್ ಪಾರ್ಲಿಮೆಂಟ್ ಸದಸ್ಯ ವೀರೇಂದ್ರ ಶರ್ಮ ಅವರ ಆಹ್ವಾನದ ಮೇರೆಗೆ ದರ್ಶನ್ ಲಂಡನ್ ಗೆ ತೆರಳಿದ್ದರು.