ಆಗಸದಿಂದ ಧುಮುಕಿದ ಸೇನಾ ಪಡೆ


Team Udayavani, Feb 17, 2017, 11:56 AM IST

air-show.jpg

ಬೆಂಗಳೂರು: ಶತ್ರುಗಳನ್ನು ಸದೆ ಬಡಿಯುವ ವೇಳೆ ಸಮಸ್ಯೆಗೆ ಸಿಲುಕಿಕೊಂಡ ಸೈನಿಕರ ರಕ್ಷಣೆಗೆಂದು ಯುದ್ಧ ವಿಮಾನದಲ್ಲಿ ಬಂದ ಯೋಧರು, ವಿಮಾನದಿಂದಲೇ 10 ಸಾವಿರ ಅಡಿ ಎತ್ತರದಿಂದ ನೆಲಕ್ಕೆ ಧುಮುಕಿದರು!

ಹೌದು ಈ ರೀತಿಯ ಅಣಕು ಪ್ರದರ್ಶನ­ವೊಂದನ್ನು ಯಲಹಂಕ ಏರ್‌ ಶೋನಲ್ಲಿ ಪ್ರಸ್ತುತ ಪಡಿಸಲಾಯಿತು. ಯೋಧರು ಶತ್ರುನೆಲೆಯಲ್ಲಿ ಸಿಲುಕಿಕೊಂಡಾಗ ಅವರನ್ನು ರಕ್ಷಿಸಲೆಂದು ನಡೆಸುವ ಕಾರ್ಯಾಚರಣೆ ಕುರಿತು ಅಮೆರಿಕ-ಭಾರತೀಯ ಯೋಧರು ಸಾದರ ಪಡಿಸಿದ ಈ ಅಣಕು ಪ್ರದರ್ಶನ ನೋಡುಗರ ಎದೆ ಝಲ್ಲೆನಿಸಿತು. 

ಭಾರತದ ಆರು ಯೋಧರು ಮತ್ತು ಅಮೆರಿಕದ ಆರು ಯೋಧರು ಸೇರಿ 12 ಯೋಧರು ತಮ್ಮ ಕಸರತ್ತು ತೋರಿದರು. ಆಗಸದಲ್ಲಿ ಯುದ್ಧ ವಿಮಾನ ಹಾರಾಟ ನಡೆಸುತ್ತಿದ್ದ ವೇಳೆ ಒಬ್ಬೊಬ್ಬರಾಗಿ ಸೈನಿಕರು ವಿಮಾನದಿಂದ 10 ಸಾವಿರ ಅಡಿಯಿಂದ ಹಾರಿದರು. ಇದನ್ನು ಕಂಡ ಪ್ರೇಕ್ಷಕರ ಮೈ ಜುಮ್‌ ಎನಿಸಿತು.  ವಿಮಾನದಿಂದ ಧುಮುಕಿ ಕೆಲ ಹೊತ್ತಿನ ಬಳಿಕ ಯೋಧರು ಪ್ಯಾರ್‌ಚೂಟ್‌ ಮೂಲಕ ನೆಲವನ್ನು ಸ್ಪರ್ಶಿಸಿದಾಗ ನಿಟ್ಟಿಸಿರು ಬಿಟ್ಟರು. 

ಪ್ರದರ್ಶನ ಬಳಿಕ “ಉದಯವಾಣಿ’ ಜತೆ ಮಾತನಾಡಿದ ಅಮೆರಿಕ ಸಿಪಾಯಿಗಳು ಪ್ರದರ್ಶನದ ಬಗ್ಗೆ ಸಂತಸ ವ್ಯಕ್ತಪಡಿಸಿದರು. “”ಭಾರ­ತೀಯ ಏರ್‌ಫೋರ್ಸ್‌ ಮತ್ತು ಅಮೆರಿಕ ಏರ್‌ಫೋರ್ಸ್‌ನ ಕಾರ್ಯಾ­ಚರಣೆಯಲ್ಲಿ ಹೆಚ್ಚಿನ ವ್ಯತ್ಯಾಸ ಇಲ್ಲ. ಹೆಚ್ಚು ಕಡಿಮೆ ಒಂದೇ ಮಾದರಿ­ಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಹೀಗಾಗಿ ಭಾರತೀಯ ಸಿಪಾಯಿಗಳ ಜತೆ ಜಂಪ್‌ ಮಾಡಲು ಕಷ್ಟವಾಗಲಿಲ್ಲ,” ಎಂದು ಹೇಳಿದರು. 

“ಇಂತಹ ಶಕ್ತಿ ಪ್ರದರ್ಶನಕ್ಕಾಗಿ ಎರಡು ವರ್ಷಗಳ ಕಾಲ ತರಬೇತಿ ನೀಡಲಾಗುತ್ತದೆ. ಯೋಧರು ಶತ್ರುಗಳ ನಡುವೆ ಸಿಲುಕಿ­ಕೊಂಡಾಗ ಅವರನ್ನು ರಕ್ಷಿಸಲು ತಕ್ಷಣ ಕಾರ್ಯಾಚರಣೆ ನಡೆಸಬೇಕಾಗುತ್ತದೆ. ಹೀಗಾಗಿ ವಿಶೇಷ ತರಬೇತಿ ನೀಡಿ ಯೋಧರನ್ನು ಸಜ್ಜುಗೊಳಿಸ­ಲಾಗುತ್ತದೆ. ಯೋಧರನ್ನು ರಕ್ಷಿಸಿ ಅವರಿಗೆ ಚಿಕಿತ್ಸೆ ನೀಡಿ ಕರೆತರುವುದು ಸಹ ನಮ್ಮ ಕರ್ತವ್ಯವಾಗಿರುತ್ತದೆ,” ಎಂದು ವಿವರಿಸಿದರು. 

“ಇದಲ್ಲದೇ, ಪಾಕೃತಿಕ ವಿಕೋಪಗಳಂತಹ ಸಮಯದಲ್ಲಿಯೂ ರಕ್ಷಣಾ ಕಾರ್ಯಾಚರಣೆ ಕೈಗೊಳ್ಳಲಾಗುತ್ತದೆ. ಭಾರತದಲ್ಲಿ ಮೊದಲ ಬಾರಿಗೆ ಪ್ರದರ್ಶನ ನೀಡಿರುವುದು ಹರ್ಷ ತಂದಿದೆ. ಪ್ರದರ್ಶನದಲ್ಲಿ ಭಾರತೀಯ ಯೋಧರ ಸಹಕಾರ ಅದ್ಬುತ ಅನುಭವವನ್ನು ನೀಡಿದೆ,” ಎಂದು ಹೇಳಿದರು.

ಬಾಹ್ಯಾಕಾಶಕ್ಕೆ ಹಾರಿದೆ ವಿದ್ಯಾರ್ಥಿ ಉಪಗ್ರಹ 
ಬೆಂಗಳೂರು:
ಬಾಹ್ಯಾಕಾಶದಲ್ಲಿ ಭಾರತದ 104 ಉಪಗ್ರಹಗಳು ಕಾರ್ಯ ನಿರ್ವಹಿಸುತ್ತಿದ್ದು ಈ ಪೈಕಿ ವಿದ್ಯಾರ್ಥಿಗಳಿಗಾಗಿಯೇ ರೂಪಿಸಿದ ಅತಿ ಚಿಕ್ಕ ಉಪಗ್ರಹವೂ ಒಂದಿದೆ. 
ಹೌದು, ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಅಧ್ಯಯನಕ್ಕಾಗಿ ಡಾಟಾ ಪ್ಯಾಟರ್ನ್ಸ್ ಎಂಬ ಸಂಸ್ಥೆ ಅತಿ ಚಿಕ್ಕ ಉಪಗ್ರಹವೊಂದನ್ನು ರೂಪಿಸಿದೆ. ಇಸ್ರೋ ಈಚೆಗೆ ಈ ಉಪಗ್ರಹವನ್ನು ಬಾಹ್ಯಾಕಾಶಕ್ಕೆ ಉಡಾವಣೆ ಕೂಡ ಮಾಡಿದೆ. ವೈಮಾನಿಕ ಪ್ರದರ್ಶನದಲ್ಲಿ ಈ ಅತಿ ಚಿಕ್ಕ ಉಪಗ್ರಹದ ಮಾದರಿಯನ್ನು ಕಾಣಬಹುದಾಗಿದೆ.

ಮೂರೂ ಆಯಾಮಗಳಲ್ಲಿ (ಉದ್ದ, ಅಗಲ ಮತ್ತು ಎತ್ತರ ) ನಿಯಂತ್ರಿಸಬಹುದಾದ ಉಪಗ್ರಹ ಇದಾಗಿದ್ದು, ಖಾಸಗಿಯಾಗಿ ಈ ಬಗೆಯ ಉಪಗ್ರಹ ನಿರ್ಮಾಣ ಭಾರತದಲ್ಲಿ ಮೊದಲು. ಇದನ್ನು ಮೂಲ ಮಾದರಿಯಾಗಿಸಿಕೊಂಡು ಪೂರ್ಣ ಪ್ರಮಾಣದಲ್ಲಿ ಕಾರ್ಯ ನಿರ್ವಹಿಸುವ ಉಪಗ್ರಹಗಳನ್ನು ನಿರ್ಮಿಸಲು ಅನುಕೂಲ ಆಗಲಿದೆ. 

ಇದರ ಉದ್ದೇಶ ಬಾಹ್ಯಾಕಾಶದಲ್ಲಿ ಉಪಗ್ರಹಗಳು ಹೇಗೆ ಕಾರ್ಯ ನಿರ್ವಹಿಸುತ್ತವೆ? ಮಾಹಿತಿಗಳ ರವಾನೆ ಹೇಗೆ ಆಗುತ್ತದೆ? ಎಂಬುದು ಸೇರಿದಂತೆ ಉಪಗ್ರಹಕ್ಕೆ ಸಂಬಂಧಿಸಿದ ಪ್ರಾಯೋಗಿಕ ಶಿಕ್ಷಣ ಇದರಿಂದ ವಿದ್ಯಾರ್ಥಿಗಳಿಗೆ ದೊರೆಯಲಿದೆ. ಎಲ್ಲ ಉಪಗ್ರಹಗಳಂತೆಯೇ ಈ ಸಣ್ಣ ಉಪಗ್ರಹವೂ ಮಾಹಿತಿ, ಚಿತ್ರಗಳನ್ನು ಸೆರೆಹಿಡಿದು ರವಾನಿಸುತ್ತದೆ ಎಂದು ಡಾಟಾ ಪ್ಯಾಟರ್ನ್ಸ್ ಪ್ರಧಾನ ವ್ಯವಸ್ಥಾಪಕ (ಮಾರುಕಟ್ಟೆ ವಿಭಾಗ) ಜಿ. ಕುಪ್ಪುಸ್ವಾಮಿ ತಿಳಿಸಿದರು. 

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಸೂಚನೆಯಂತೆ ನಾವು ಈ ವಿನ್ಯಾಸ ರೂಪಿಸಿದ್ದೇವೆ. ಇದು ವಿಶೇಷವಾಗಿ ವಿದ್ಯಾರ್ಥಿಗಳಿಗೆ ಇರುವಂತಹದ್ದು. ಇಸ್ರೋ ಕಳುಹಿಸಿದ 104 ಉಪಗ್ರಹಗಳಲ್ಲಿ ಡಾಟಾ ಪ್ಯಾಟರ್ನ್ಸ್ನ ಎರಡು ಉಪಗ್ರಹಗಳೂ ಕೂಡ ಇವೆ ಎಂದು ಮಾಹಿತಿ ನೀಡಿದರು. 

ಏರ್‌ಶೋನಲ್ಲಿ ಸರ್ಜಿಕಲ್‌ ಸ್ಟ್ರೈಕ್‌ ಪ್ರಾತ್ಯಕ್ಷಿಕೆ ಪ್ರದರ್ಶನ 
ಭಾರತೀಯ ಸೇನಾ ಯೋಧರು  ವೈಮಾನಿಕ ಪ್ರದರ್ಶನದಲ್ಲಿ ಸರ್ಜಿಕಲ್‌ ದಾಳಿ ನಡೆಸುವ ಮೂಲಕ ನೋಡುಗನ್ನು ರೋಮಾಂಚನಗೊಳಿಸಿದರು. ರುದ್ರ, ಧ್ರುವ ಹೆಲಿಕಾಪ್ಟರ್‌ಗಳಲ್ಲಿ ಬಂದ ಯೋಧರು ಸರ್ಜಿಕಲ್‌ ದಾಳಿ ನಡೆಸುವ ಕೌಶಲ್ಯವನ್ನು ಪ್ರದರ್ಶಿಸಿದರು. ಆಗಸದ ಮಧ್ಯೆ ನಿಂತಿದ್ದ ಹೆಲಿಕಾಪ್ಟರ್‌ಗಳಿಂದ 16 ಯೋಧರು ಚಕಚಕನೆ ಇಳಿಯುವ ಮೂಲಕ ಶತ್ರು ನೆಲೆಯ ಮೇಲೆ ದಾಳಿ ನಡೆಸಿ ಅವರನ್ನು ಹೊಡೆದುರುಳಿಸುವ ಕಲೆಯ ಪ್ರದರ್ಶನಕ್ಕೆ ಪ್ರೇಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದರು. ಮಾತ್ರವಲ್ಲ, ಸಾವಿರ ಕೆಜಿ ತೂಕದ ವಸ್ತುಗಳನ್ನು ಕೊಂಡೊಯ್ಯುವ ಸಾಹಸ ಕಲೆಯನ್ನು ಅರೆಸೇನಾ ಪಡೆಯ ಯೋಧರು ಪ್ರದರ್ಶಿಸಿದರು.

ವೀಕ್ಷಕರು ಪ್ರದರ್ಶನದ ಬಗ್ಗೆ ಏನೆಂದರು? 
ಹೊಸಬರಿಗೆ ವಿಮಾನಗಳನ್ನು ಹತ್ತಿರದಿಂದ ಕಣ್ತುಂಬಿಕೊಂಡಿದ್ದೇ ಖುಷಿ. ಆದರೆ, ಈ ಹಿಂದಿನ ಪ್ರದರ್ಶನಗಳಲ್ಲಿ ದೈತ್ಯ ವಿಮಾನಗಳನ್ನು ನೋಡಿದ ಹಳಬರಿಗೆ ಕೊಂಚ ನಿರಾಸೆ. ವಿದೇಶಿ ವಿಮಾನಗಳ ಅಬ್ಬರ ಇಲ್ಲದಿದ್ದರೂ ಕೆಲವರಿಗೆ ದೇಶೀಯ ವಿಮಾನಗಳ ಸಾಮರ್ಥ್ಯ ನೋಡಿದ ತೃಪ್ತಿ. ದೂರದ ಊರಿನಿಂದ ಧಾವಿಸಿದವರಿಗೆ ಇನ್ನಷ್ಟು ವಿಮಾನಗಳ ಕಸರತ್ತು ಇರಬೇಕಿತ್ತು ಎಂಬ ಅಭಿಲಾಷೆ.  “ಉದಯವಾಣಿ’ಯೊಂದಿಗೆ ಮಾತನಾಡಿದ ಪ್ರೇಕ್ಷಕರು ವೈಮಾನಿಕ ಪ್ರದರ್ಶನ ಕುರಿತು ಏನೆಂದರು? ಇಲ್ಲಿದೆ ನೋಡಿ 

ಅತ್ಯುತ್ತಮ ಪ್ರದರ್ಶನ. ಇದಕ್ಕಾಗಿ ಈ ಬಾರಿ ಜಮ್ಮುವಿನಿಂದ ನನ್ನ ತಂದೆ-ತಾಯಿಯನ್ನೂ ಕರೆದುಕೊಂಡಿದ್ದೆ. ತುಂಬಾ ಖುಷಿ ಆಗುತ್ತಿದೆ. ಆದರೆ, ಹಿರಿಯ ನಾಗರಿಕರ ವೀಕ್ಷಣೆಗೆ ವಿಶೇಷ ವ್ಯವಸ್ಥೆ ಇದ್ದರೆ ಸೂಕ್ತ. 
– ಪೂಜಾ ಶರ್ಮಾ, ಖಾಸಗಿ ಉದ್ಯೋಗಿ

2005ರಿಂದ ಪ್ರತಿ ವರ್ಷ ತಪ್ಪದೇ ಬರುತ್ತಿ­ದ್ದೇನೆ. ಕಳೆದ ಪ್ರದರ್ಶನಗಳಿಗೆ ಹೋಲಿಸಿದರೆ, ಜನ ಕಡಿಮೆ ಹಾಗೂ ಪ್ರದರ್ಶನ ನೀಡುವ ಏರೋಬ್ಯಾಟಿಕ್‌ ತಂಡಗಳೂ ಕಡಿಮೆ. 
– ಅಶ್ವಿ‌ನಿಕುಮಾರ ಪಾಟೀಲ, ವಿಜ್ಞಾನಿ

ಏರೋಬ್ಯಾಟಿಕ್‌ ತಂಡಗಳು ಕಡಿಮೆ. ವಿದೇಶಿ ವಿಮಾನಗಳ ಹಾರಾಟವೂ ತುಂಬಾ ವಿರಳ. ಆದರೆ, ಹಾಕ್‌, ತೇಜಸ್‌, ಸೂರ್ಯಕಿರಣ್‌, ಸಾರಂಗ್‌ ಸೇರಿದಂತೆ ದೇಶಿಯ ತಂಡಗಳು ನೀಡಿದ ಪ್ರದರ್ಶನ ಮತ್ತು ಭಾರತೀಯ ವಾಯುಸೇನೆ ಸಾಮರ್ಥ್ಯ ನೋಡಿ ಹೆಮ್ಮೆ ಎನಿಸಿದೆ. 
– ಅಮೋಘ ಮತ್ತು ಚೇತನಾ ದಂಪತಿ

ಭಾರತದೊಂದಿಗೆ ವ್ಯಾಪಾರ-ವಹಿವಾಟು ನಡೆಸಿದವರಷ್ಟೇ ಪ್ರದರ್ಶನ ನೀಡಿದಂತಿದೆ. ವಿಮಾನಗಳ ಸಂಖ್ಯೆ ಕಡಿಮೆ. ಆದರೆ, ಒಟ್ಟಾರೆ ಪ್ರದರ್ಶನದಲ್ಲಿ ಮೇಕ್‌ ಇನ್‌ ಇಂಡಿಯಾ ಝಲಕ್‌ ಕಾಣುತ್ತಿರುವುದು ತೃಪ್ತಿ ತಂದಿದೆ. 
– ಡಾ.ವೈಥೀಶ್ವರಂ.

ನನ್ನ ಸಹೋದರ ಸು-30 ಪೈಲಟ್‌. ಆದಾಗ್ಯೂ ಪ್ರದರ್ಶನಕ್ಕೆ ಭೇಟಿ ನೀಡುತ್ತಿದ್ದೇನೆ. ವಿಮಾನಗಳು ನಡೆಸುವ ಚಮತ್ಕಾರಗಳನ್ನು ನೋಡಿದಾಗ ರೋಮಾಂಚನ ಆಗುತ್ತದೆ. ಪ್ರದರ್ಶನ ನೋಡಲಿಕ್ಕಾಗಿಯೇ ಪುಣೆಯಿಂದ ಬಂದಿದ್ದೇನೆ. 
– ವಿಕಾಸ್‌ಕುಮಾರ್‌, ಖಾಸಗಿ ಕಂಪೆನಿ ಉದ್ಯೋಗಿ.

ಟಾಪ್ ನ್ಯೂಸ್

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Tour: 9 ದಿನ 4,800 ಕಿ.ಮೀ ಪ್ರಯಾಣ-ಅಡ್ವೆಂಚರ್‌ ಬೈಕ್‌ನಲ್ಲಿ 64ರ ಹಿರಿಯರ ಸಾಹಸ ಯಾನ

Tour: 9 ದಿನ 4,800 ಕಿ.ಮೀ ಪ್ರಯಾಣ-ಅಡ್ವೆಂಚರ್‌ ಬೈಕ್‌ನಲ್ಲಿ 64ರ ಹಿರಿಯರ ಸಾಹಸ ಯಾನ

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

7-bng

Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್‌ ಆತ್ಮಹತ್ಯೆ

6-bng-crime

Bengaluru Crime: ಅಕ್ರಮ ಸಂಬಂಧ ಜೋಡಿ ಕೊಲೆಯಲ್ಲಿ ಅಂತ್ಯ

Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ

Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ

CN Ashwath Narayan: ಕಾಂಗ್ರೆಸ್‌ನಿಂದ ನಿತ್ಯ ತುಷ್ಟೀಕರಣ ರಾಜಕಾರಣ; ಅಶ್ವತ್ಥನಾರಾಯಣ

CN Ashwath Narayan: ಕಾಂಗ್ರೆಸ್‌ನಿಂದ ನಿತ್ಯ ತುಷ್ಟೀಕರಣ ರಾಜಕಾರಣ; ಅಶ್ವತ್ಥನಾರಾಯಣ

11-srrest

Bengaluru: ಅತಿಕ್ರಮಿಸಿ ಏರ್‌ಪೋರ್ಟ್‌ನಲ್ಲಿ ವಿಡಿಯೋ: ಯುಟ್ಯೂಬರ್‌ ಬಂಧನ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

18=

Festivals: ಹಬ್ಬಗಳು ಮರೆಯಾಗುತ್ತಿವೆಯೇ?

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

17-uv-fusion

Holi: ಹೋಳಿ ಹುಣ್ಣಿಮೆ ಹಿನ್ನೆಲೆ

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.