Updated at Wed,29th Mar, 2017 3:50AM IST
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಶಾಸಕ ವಿಶ್ವನಾಥ್‌ ಮೇಲೆ ಶ್ರೀನಿವಾಸ್‌ ನೇರ ಆರೋಪ

ಬೆಂಗಳೂರು: ದಾಸನಪುರ ಎಪಿಎಂಸಿ ಅಧ್ಯಕ್ಷ ಕಡಬಗೆರೆ ಶ್ರೀನಿವಾಸ್‌ ಮೇಲಿನ ಶೂಟೌಟ್‌ ಪ್ರಕರಣ ಹೊಸ ತಿರುವು ಪಡೆದಿದ್ದು, ಯಲಹಂಕ ಶಾಸಕ ಎಸ್‌.ಆರ್‌.ವಿಶ್ವನಾಥ್‌ ವಿರುದ್ಧ ಆರೋಪ ಕೇಳಿಬಂದಿದೆ. ಗುಂಡಿನ ದಾಳಿಯಿಂದ ಆಸ್ಪತ್ರೆಗೆ ಸೇರಿ ಚೇತರಿಸಿಕೊಳ್ಳುತ್ತಿರುವ ಶ್ರೀನಿವಾಸ್‌ ಖಾಸಗಿ ಸುದ್ದಿ ವಾಹಿನಿಯೊಂದಕ್ಕೆ ಹೇಳಿಕೆ ನೀಡಿ, ""ನನ್ನ ಮೇಲಿನ ಗುಂಡಿನ ದಾಳಿಗೆ ಯಲಹಂಕ ಶಾಸಕ ಎಸ್‌.ಆರ್‌.ವಿಶ್ವನಾಥ್‌ ಕಾರಣ,'' ಎಂದು ಹೇಳಿದ್ದಾರೆ. 

"ರೈತ ಸಂತೆಗೆ ಹೋಗಿ ವಾಪಸ್‌ ಆಗುವ ಸಂದರ್ಭದಲ್ಲಿ ನನಗೆ ಗೊತ್ತಿಲ್ಲದಂತೆ ಗನ್‌ನಿಂದ ಫೈರ್‌ ಮಾಡಿದ್ದಾರೆ. ಶೂಟೌಟ್‌ಗೆ ಎಂಎಲ್‌ಎ ವಿಶ್ವನಾಥ್‌, ಡಾನ್‌ ಸತೀಶ್‌ ಹಾಗೂ ಬೂನ್‌ ಬಾಬು ಕಾರಣ. ಈ ವಿಚಾರವನ್ನು ನಾನು ಎಲ್ಲಿಗೆ ಬೇಕಾದರು ಬಂದು ದೂರು ಕೊಡಲು ಸಿದ್ಧ. ಈ ಮಾಹಿತಿಯನ್ನು ಈಗಾಗಲೇ ಪೊಲೀಸರಿಗೆ ಮತ್ತು ನನ್ನ ಪರ ವಕೀಲರಿಗೆ ತಿಳಿಸಿದ್ದೇನೆ,'' ಎಂದು ಹೇಳಿರುವುದಾಗಿ ತಿಳಿದು ಬಂದಿದೆ.

"ಗನ್‌ನಿಂದ ಮೂರು ಬಾರಿ ನನಗೆ ಹೊಡೆಯಲಾಯಿತು. ಮೂರು ಭಾಗದಲ್ಲಿ ಗಾಯವಾಗಿದೆ. ಈಗಷ್ಟೇ ಸ್ವಲ್ಪ ಚೇತರಿಸಿಕೊಳ್ಳುತ್ತಿದ್ದೇನೆ. ಪೂರ್ತಿ ಆರೋಗ್ಯವಾದರೆ  ಈ ಬಗ್ಗೆ ದೂರು ಕೊಡುತ್ತೇನೆ,'' ಎಂದು ಹೇಳಿಕೆಯಲ್ಲಿ ತಿಳಿಸಿರುವುದಾಗಿ ತಿಳಿದು ಬಂದಿದೆ. ಫೆ.3ರಂದು ಬೆಳಗ್ಗೆ 11 ಗಂಟೆ ಸುಮಾರಿಗೆ ಯಲಹಂಕದ ಕೋಗಿಲು ಕ್ರಾಸ್‌ ಬಳಿ ಕಡಬಗೆರೆ ಶ್ರೀನಿವಾಸ್‌ ಮೇಲೆ ಗುಂಡಿನ ದಾಳಿ ನಡೆದಿತ್ತು. ದಾಳಿಯಿಂದ ಶ್ರೀನಿವಾಸ್‌ ದೇಹಕ್ಕೆ 3 ಗುಂಡು ಹೊಕ್ಕಿದ್ದವು. 

ಹೊಟ್ಟೆಯ ಭಾಗಕ್ಕೆ ಎರಡು ಮತ್ತು ಭುಜಕ್ಕೆ ಒಂದು ಗುಂಡು ತಗುಲಿತ್ತು. ತೀವ್ರವಾಗಿ ಗಾಯಗೊಂಡಿದ್ದ ಶ್ರೀನಿವಾಸ್‌ ಆಸ್ಪತ್ರೆಗೆ ದಾಖಲಾಗಿದ್ದರು. ಜೈಲಿನಲ್ಲಿರುವ ಆರೋಪಿಗಳು: ಕಡಬಗೆರೆ ಶ್ರೀನಿವಾಸ್‌ ಆರೋಪಿಸಿರುವಂತೆ ಡಾನ್‌ ಸತೀಶ್‌ ಅಲಿಯಾಸ್‌ ನಾಗಶೆಟ್ಟಿಹಳ್ಳಿ ಸತೀಶ್‌ ಹಾಗೂ ಬೂನ್‌ ಬಾಬು ಈಗಾಗಲೇ ಬಂಧಿತರಾಗಿದ್ದಾರೆ. 


More News of your Interest

Trending videos

Back to Top