Updated at Sun,28th May, 2017 12:28AM IST
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಟ್ವಿಸ್ಟ್‌: ಯುವಕನೇ ನಾಲಗೆ,ಮರ್ಮಾಂಗವನ್ನು ಕತ್ತರಿಸಿಕೊಂಡಿದ್ದೇಕೆ?

ಬೆಂಗಳೂರು: ವೈಟ್‌ಫೀಲ್ಡ್‌ನಲ್ಲಿ  ಒಡಿಶಾ ಮೂಲದ ಯುವಕ ಬಿಜು ನಾಯಕ್‌(20)  ನಾಲಿಗೆ ಮತ್ತು ಮರ್ಮಾಂಗ ಕತ್ತರಿಸಿರುವ ಪ್ರಕರಣಕ್ಕೆ ತಿರುವು ಬಂದಿದೆ. ದುಷ್ಕರ್ಮಿಗಳು ದಾಳಿ ನಡೆಸಿ ನಾಲಿಗೆ ಮತ್ತು ಮರ್ಮಾಂಗ ಕತ್ತರಿಸಿಲ್ಲ ಬದಲಾಗಿ ದೇವರನ್ನು ಒಲಿಸಿಕೊಳ್ಳುವ ಸಲುವಾಗಿ ಬಿಜುವೇ ಕೊಯ್ದು ಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. 

ಇಮ್ಮಡಿಹಳ್ಳಿ ಬಳಿಯಿರುವ ಕರಿಯಮ್ಮ ದೇವಾಲಯದ ಸಮೀಪದ ಕಾರ್ಮಿಕರ ಶೆಡ್‌ನ‌ಲ್ಲಿ ವಾಸವಿರುವ  ವೃತ್ತಿಯಲ್ಲಿ ಕಾಪೆìಂಟರ್‌ ಆಗಿರುವ ಬಿಜು ನಾಯಕ್‌ ಕಾಳಿಯನ್ನು ಒಲಿಸಿಕೊಳ್ಳಲು ಅಂಗಾಂಗಗಳನ್ನು ಬಲಿ ನೀಡಬೇಕು ಆಗ ನಾವು ಬಯಸಿದ್ದನ್ನು ಪಡೆಯಬಹುದು ಎಂಬ ಬಿಹಾರ ಮೂಲದ ಸ್ನೇಹಿತರ ಸಲಹೆಯಂತೆ ಗುಪ್ತಾಂಗ ಮತ್ತು ನಾಲಗೆಯನ್ನು  ಮಧ್ಯರಾತ್ರಿ ಕತ್ತರಿಸಿಕೊಂಡಿದ್ದಾನೆ. ಬಳಿಕ ನೋವಿನಿಂದ ಚೀರುತ್ತಾ ತನ್ನ ಮೇಲೆ ದಾಳಿ ನಡೆದಿದೆ ಎಂದು ಕತೆ ಕಟ್ಟಿದ್ದ. 

 ಶುಕ್ರವಾರ ತಡರಾತ್ರಿ 12 ಗಂಟೆ ಸುಮಾರಿಗೆ ಮೂತ್ರ ವಿಸರ್ಜನೆಗೆಂದು ಶೆಡ್‌ನಿಂದ ಹೊರಬಂದಾಗ ನಾಲ್ಕೈದು ಮಂದಿ ಮುಸುಕುಧಾರಿಗಳು ನಿರ್ಜನ ಪ್ರದೇಶಕ್ಕೆ ಎಳೆದೊಯ್ದು ನಾಲಿಗೆ ಮತ್ತು ಮರ್ಮಾಂಗವನ್ನು ಕತ್ತರಿಸಿ. ಬಳಿಕ ಶೆಡ್‌ ಬಳಿ ಬಿಟ್ಟು ಪರಾರಿಯಾಗಿದ್ದಾರೆ ಎಂದು ಹೇಳಿದ್ದ. 

ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿರುವ ವೈಟ್‌ಫೀಲ್ಡ್‌ ಠಾಣೆ ಪೊಲೀಸರು ವಿಚಾರಣೆ ವೇಳೆ ಬಿಜುವೇ ಕತ್ತರಿಸಿಕೊಂಡಿರುವುದನ್ನು ಪತ್ತೆ ಹಚ್ಚಿದ್ದಾರೆ. 

ಇದೀಗ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಿಜು  ಮಾತನಾಡಲು ಸಾಧ್ಯವಾಗದೆ ಮಾನಸಿಕ ಅಸ್ವಸ್ಥನಂತೆ ವರ್ತಿಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ. 


More News of your Interest

Trending videos

Back to Top