ಜೂ.1ಕ್ಕೆ ನಮ್ಮ ಕ್ಯಾಂಟೀನ್ ಆರಂಭ; ಜಾಗದ ಹುಡುಕಾಟ
Team Udayavani, Mar 22, 2017, 12:36 PM IST
ಬೆಂಗಳೂರು: ರಾಜ್ಯ ಸರ್ಕಾರದ ಜನಪ್ರಿಯ ಘೋಷಣೆಯಾದ “ನಮ್ಮ ಕ್ಯಾಂಟೀನ್’ ಯೋಜನೆಯನ್ನು ಜೂನ್.1 ರಿಂದ ಜಾರಿಗೊಳಿಸಲು ಬಿಬಿಎಂಪಿ ಸಿದ್ಧತೆ ನಡೆಸಿದ್ದು, ಪಾಲಿಕೆಯ ಪ್ರತಿ ವಾರ್ಡ್ನಲ್ಲಿ ಕ್ಯಾಂಟೀನ್ಗಾಗಿ ಸ್ಥಳ ಹುಡುಕಾಟ ಆರಂಭವಾಗಿದೆ. ಜತೆಗೆ ಕ್ಯಾಂಟೀನ್ಗಳಿಗೆ ಊಟ ಪೂರೈಕೆ ಮಾಡುವ ಜವಾಬ್ದಾರಿ ಇಸ್ಕಾನ್ಗೆ ನೀಡಿದೆ.
ಪ್ರತಿ ಕ್ಯಾಂಟೀನ್ನಲ್ಲಿ 150-200 ಮಂದಿ ಕುಳಿತು ಊಟ ಮಾಡಲು ವ್ಯವಸ್ಥೆ ಇರುವಂತೆ ಯೋಜನೆ ರೂಪಿಸ ಲಾಗಿದೆ. 200 ರಿಂದ 500 ಚದರ ಅಡಿ ಜಾಗ ಹುಡುಕಲು ವಲಯ ಜಂಟಿ ಆಯುಕ್ತರಿಗೆ ಬಿಬಿ ಎಂಪಿ ಆಯುಕ್ತರು ಸೂಚಿಸಿದ್ದಾರೆ. ಕ್ಯಾಂಟೀನ್ ಸ್ವತ್ಛತೆ, ನಿರ್ವಹಣೆಯನ್ನು ಬಿಬಿಎಂಪಿ ನೋಡಿಕೊಳ್ಳಲಿದೆ.
ಮಂಗಳವಾರ ಈ ಕುರಿತು ಅಧಿಕಾರಿಗಳು ಹಾಗೂ ಇಸ್ಕಾನ್ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿದ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಯು.ಟಿ.ಖಾದರ್, ಪ್ರತಿ ವಾರ್ಡ್ನಲ್ಲಿ ಕ್ಯಾಂಟೀನ್ಗೆ ಜಾಗವನ್ನು ಗುರುತಿಸಿ ಒಳಾಂಗಣವನ್ನು ವಿನ್ಯಾಸಗೊಳಿಸುವಂತೆ ಸೂಚಿಸಿದ್ದಾರೆ. ಇದರೊಂದಿಗೆ ಪ್ರತಿ ಕ್ಯಾಂಟೀನ್ನಲ್ಲಿ 150-200 ಮಂದಿ ಕುಳಿತುಕೊಳ್ಳುವ ವ್ಯವಸ್ಥೆಯಿರಬೇಕು ಎಂದು ಪಾಲಿಕೆ ಅಧಿಕಾರಿಗಳಿಗೆ ತಿಳಿಸಿದ್ದಾರೆ.
ವೈಫೈ ಸೇವೆಯೂ ಲಭ್ಯ
ನಮ್ಮ ಕ್ಯಾಂಟೀನ್ನಲ್ಲಿ 5 ರೂ. ಗಳಿಗೆ ಉಪಹಾರ, 10 ರೂ.ಗೆ ಊಟ ದೊರೆಯಲಿದೆ. ಕ್ಯಾಂಟೀನ್ನಲ್ಲಿ ಸಿಸಿಟಿವಿ ಕ್ಯಾಮೆರಾ, ವೈಫೈ ಸೌಲಭ್ಯ ಇರಲಿದೆ ಎಂದು ಮೇಯರ್ ಜಿ.ಪದ್ಮಾವತಿ ತಿಳಿಸಿದ್ದಾರೆ.
ಲೋಗೊ ನೀಡಿ ಲಕ್ಷ ಗೆಲ್ಲಿ
ನಮ್ಮ ಕ್ಯಾಂಟೀನ್ ಯೋಜನೆಗೆ ಉತ್ತಮ ಲಾಂಛನ ನೀಡಿದವರಿಗೆ 1 ಲಕ್ಷ ರೂ. ಮತ್ತು ಕ್ಯಾಂಟೀನ್ನ ಒಳಾಂಗಣ ವಿನ್ಯಾಸ ನೀಡಿದವರಿಗೆ 2 ಲಕ್ಷ ರೂ. ಬಹುಮಾನ ನೀಡುವುದಾಗಿ ಬಿಬಿಎಂಪಿ ಘೋಷಿಸಿದೆ. ಒಳಾಂಗಣ ವಿನ್ಯಾಸವನ್ನು ಪಾಲಿಕೆಗೆ ಯಾರೂ ಬೇಕಾದರೂ ನೀಡಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್ ಆತ್ಮಹತ್ಯೆ
Bengaluru Crime: ಅಕ್ರಮ ಸಂಬಂಧ ಜೋಡಿ ಕೊಲೆಯಲ್ಲಿ ಅಂತ್ಯ
Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ
CN Ashwath Narayan: ಕಾಂಗ್ರೆಸ್ನಿಂದ ನಿತ್ಯ ತುಷ್ಟೀಕರಣ ರಾಜಕಾರಣ; ಅಶ್ವತ್ಥನಾರಾಯಣ
Bengaluru: ಅತಿಕ್ರಮಿಸಿ ಏರ್ಪೋರ್ಟ್ನಲ್ಲಿ ವಿಡಿಯೋ: ಯುಟ್ಯೂಬರ್ ಬಂಧನ