ಅಪಾರ್ಟ್‌ಮೆಂಟ್‌ಗಳತ್ತ ಮಾವು

Team Udayavani, Mar 22, 2017, 1:00 PM IST

mango2.jpg

ಬೆಂಗಳೂರು: ನಗರದ ಪ್ರಮುಖ ಅಪಾರ್ಟ್‌ಧಿಮೆಂಧಿಟ್‌ಗಳ ಬಾಗಿಲಿಗೇ ಇನ್ಮುಂದೆ ಮಾವು ಮಾರುಕಟ್ಟೆ ಬರಲಿದೆ. ಹೌದು,ಮಧ್ಯವರ್ತಿಗಳ ಹಾವಳಿ, ಗುಣಮಟ್ಟದ ಕೊರತೆಯಂತಹ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಗ್ರಾಹಕರ ಮನೆ ಬಾಗಿಲಲ್ಲೇ ಮೊಬೈಲ್‌ ಮಾವು ಮಾರುಕಟ್ಟೆ ತೆರೆಯಲು ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ ಮುಂದಾಗಿದೆ.  

ಸುದ್ದಿಗೋಷ್ಠಿಯಲ್ಲಿ ಈ ವಿಚಾರ ತಿಳಿಸಿದ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮದ ಅಧ್ಯಕ್ಷ ಎಲ್‌. ಗೋಪಾಲಕೃಷ್ಣ , ಗ್ರಾಹಕರ ಮನೆ ಬಾಗಿಲಿಗೆ ಮಾವು ಕೊಂಡೊಯ್ಯಲು ನಿಗಮ ನಿರ್ಧರಿಸಿದೆ ಎಂದು ಹೇಳಿದರು. ಈ ಸಂಬಂಧ ನಿಗಮವು ನಗರದ ಪ್ರಮುಖ ಅಪಾರ್ಟ್‌ಮೆಂಟ್‌ಗಳ ಹುಡುಕಾಟ ನಡೆಸಿದ್ದು, 300ಕ್ಕಿಂತ ಹೆಚ್ಚು ಫ್ಲ್ಯಾಟ್‌ಗಳಿರುವ ಅಪಾರ್ಟ್‌ಮೆಂಟ್‌ಗಳನ್ನು ಗುರುತಿಸಿ, ಅಲ್ಲಿನ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳೊಂದಿಗೆ ಮಾತುಕತೆ ನಡೆಸಲಾಗುವುದು. ಮಾವು ಬೆಳೆಗಾರರೊಂದಿಗೂ ಚರ್ಚಿಸಲಾಗುವುದು.

ಇಬ್ಬರೂ ಮುಂದೆಬಂದರೆ, ಅಪಾರ್ಟ್‌ಮೆಂಟ್‌ಗಳಲ್ಲಿ ಸಂಚಾರಿ ಮಾವು ಮಾರುಕಟ್ಟೆ (ಮೊಬೈಲ್‌ ಮ್ಯಾಂಗೋ ಮಾರ್ಕೆಟ್‌) ಆರಂಭಿಸಲಾಗುವುದು ಎಂದು ತಿಳಿಸಿದರು.  ನಿಗಮದ ವ್ಯವಸ್ಥಾಪಕ ನಿರ್ದೇಶಕ ಕದಿರೇಗೌಡ ಮಾತನಾಡಿ, “”ಸ್ತುತ ಒರಾಯಿನ್‌ ಮಾಲ್‌, ಲೈಟ್‌ ಹೌಸ್‌ ಮಳಿಗೆಗಳು ಮೊಬೈಲ್‌ ಮ್ಯಾಂಗೋ ಮಾರ್ಕೆಟ್‌ಗೆ ಸಮ್ಮತಿಸಿವೆ. ಇದಲ್ಲದೆ, ಇನ್ನೂ ಐದಾರು ಅಪಾರ್ಟ್‌ಮೆಂಟ್‌ಗಳು ಈ ನಿಟ್ಟಿನಲ್ಲಿ ಆಸಕ್ತಿ ತೋರಿಸಿವೆ. ಈ ವ್ಯವಸ್ಥೆ ರೈತರು, ಗ್ರಾಹಕರು ಮತ್ತು ನಿಗಮಕ್ಕೆ ಹೊಸದು. ಸಾರಿಗೆ ವೆಚ್ಚವನ್ನು ನಿಗಮವೇ ಭರಿಸಲಿದೆ ಎಂದರು. 

ಬೆಂಗಳೂರಿನಾದ್ಯಂತ ಮಾವು ಮೇಳ
ಮೊದಲೆಲ್ಲ ಮಾವು ಮೇಳ ಲಾಲ್‌ಬಾಗ್‌ಗೆ ಮಾತ್ರ ಸೀಮಿತವಾಗಿತ್ತು. ಈ ಬಾರಿ ನಗರದಾದ್ಯಂತ ಮೇಳಗಳು ನಡೆಯಲಿವೆ ಎಂದು ಅಧ್ಯಕ್ಷ ಗೋಪಾಲಕೃಷ್ಣ ತಿಳಿಸಿದರು.  ಮೆಟ್ರೋ ನಿಲ್ದಾಣಗಳು, ಇನ್ಫೋಸಿಸ್‌ ಆವರಣ, ಇಸ್ರೋ ಲೇಔಟ್‌, ಗಂಗಾನಗರ, ಸಹಕಾರನಗರ, ಗೋವಿಂದರಾಜನಗರ, ಜೆ.ಪಿ.ನಗರ, ಜಯನಗರ, ಇಂದಿರಾನಗರ, ಬಿಟಿಎಂ ಲೇಔಟ್‌, ಯಲಹಂಕ ಉಪನಗರ, ಅರಮನೆನಗರ, ರಾಜಾಜಿನಗರ, ಕೋರಮಂಗಲ, ಉತ್ತರಹಳ್ಳಿ, ದೊಮ್ಮಲೂರು, ಮಲ್ಲೇಶ್ವರ ಸೇರಿದಂತೆ 46 ಸ್ಥಳಗಳನ್ನು ಗುರುತಿಸಲಾಗಿದೆ ಎಂದರು. ಈ ಬಾರಿ ಮೇ 1ರ ಆಸುಪಾಸು ಮೇಳ ಆಯೋಜನೆಗೆ ಉದ್ದೇಶಿಸಿದ್ದು, ಮಾರ್ಚ್‌ 24ರಂದು ಮಾವು ಬೆಳೆಗಾರರೊಂದಿಗೆ ಈ ಸಂಬಂಧ ಸಭೆ ನಡೆಯಲಿದೆ. ಅಲ್ಲಿ ಇದು ಅಂತಿಮ ಆಗಲಿದ್ದು, ಸುಮಾರು ಒಂದು ತಿಂಗಳು ಮೇಳ ನಡೆಯಲಿದೆ ಎಂದು ಹೇಳಿದರು. 

ರೈತರಿಂದಲೇ ದರ ನಿಗದಿ
ಈ-ಮೊಬೈಲ್‌ ಮ್ಯಾಂಗೋ ಮಾರ್ಕೆಟ್‌ ವ್ಯವಸ್ಥೆಯಲ್ಲಿ  ರೈತರೇ ಬೆಳೆಗಳಿಗೆ ದರ ನಿಗದಿಪಡಿಸಲು ಅವಕಾಶವಿದೆ. ಗ್ರಾಹಕರೊಂದಿಗೆ ನೇರ ವ್ಯಾಪಾರ ನಡೆಸುವುದರಿಂದ ಮಧ್ಯವರ್ತಿಗಳ ಹಾವಳಿಯೂ ಇರುವುದಿಲ್ಲ. ಗುಣಮಟ್ಟದಲ್ಲೂ ಮೋಸ ಆಗುವುದಿಲ್ಲ ಎಂದು ಮಾವು ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಹೇಳಿದರು. 

10000 ಮೆಟ್ರಿಕ್‌ ಟನ್‌ ರಫ್ತು ಗುರಿ
ಪ್ರಸಕ್ತ ಸಾಲಿನಲ್ಲಿ ಹತ್ತು ಸಾವಿರ ಮೆಟ್ರಿಕ್‌ ಟನ್‌ ಮಾವು ರಫ್ತು ಮಾಡುವ ಗುರಿ ಇದೆ ಎಂದು ಗೋಪಾಲಕೃಷ್ಣ ತಿಳಿಸಿದರು. ಕಳೆದ ಬಾರಿ 6,750 ಮೆಟ್ರಿಕ್‌ ಟನ್‌ ಮಾವು ಅಮೆರಿಕ ಸೇರಿದಂತೆ ಯೂರೋಪಿಯನ್‌ ದೇಶಗಳಿಗೆ ರಫ್ತಾಗಿದೆ. ಈ ಸಲ 10 ಸಾವಿರ ಮೆಟ್ರಿಕ್‌ ಟನ್‌ ರಫ್ತು ಮಾಡುವ ಗುರಿ ಇದೆ. ಈ ಬಾರಿ ದಕ್ಷಿಣ ಕೋರಿಯಾಕ್ಕೂ ಮಾವು ರಫ್ತಾಗಲಿದೆ. ಈ ಬಾರಿ ಚಂಡಮಾರುತಗಳಿಂದಾಗಿ ಇಳುವರಿ ಕುಸಿದಿದೆ. ಅದರಲ್ಲೂ ಹೆಚ್ಚು ರಫ್ತಾಗುವ ಅಲ್ಫಾನ್ಸೊ ಇಳುವರಿ ಕಡಿಮೆಯಾಗಿದೆ. ಅದರ ಜಾಗವನ್ನು “ಮಲ್ಲಿಕಾ’ ತುಂಬಲಿದೆ ಎಂದರು. 

ಟಾಪ್ ನ್ಯೂಸ್

Lok Sabha Elections; ಕುಮಾರಸ್ವಾಮಿ ಪರ ಕೊನೆಗೂ ಪ್ರಚಾರಕ್ಕೆ ಬಾರದ ಸುಮಲತಾ

Lok Sabha Elections; ಕುಮಾರಸ್ವಾಮಿ ಪರ ಕೊನೆಗೂ ಪ್ರಚಾರಕ್ಕೆ ಬಾರದ ಸುಮಲತಾ

ಮಹಿಳೆಯರಿಗೆ 2 ಸಾವಿರ ಕೊಟ್ಟು ಗಂಡಸರ ಜೇಬಿಗೆ ಕತ್ತರಿ: ಕುಮಾರಸ್ವಾಮಿ

ಮಹಿಳೆಯರಿಗೆ 2 ಸಾವಿರ ಕೊಟ್ಟು ಗಂಡಸರ ಜೇಬಿಗೆ ಕತ್ತರಿ: ಕುಮಾರಸ್ವಾಮಿ

OBC ವರ್ಗಕ್ಕೆ ಕಾಂಗ್ರೆಸ್‌ನಿಂದ ಅನ್ಯಾಯ: ಸುನಿಲ್‌ ಕುಮಾರ್‌

OBC ವರ್ಗಕ್ಕೆ ಕಾಂಗ್ರೆಸ್‌ನಿಂದ ಅನ್ಯಾಯ: ಸುನಿಲ್‌ ಕುಮಾರ್‌

ಸರಕಾರದ ಖಜಾನೆ ಖಾಲಿ, ರೈತರಿಗೆ ಪರಿಹಾರ ನೀಡಲು ಹಣವಿಲ್ಲ: ವಿಜಯೇಂದ್ರ

ಸರಕಾರದ ಖಜಾನೆ ಖಾಲಿ, ರೈತರಿಗೆ ಪರಿಹಾರ ನೀಡಲು ಹಣವಿಲ್ಲ: ವಿಜಯೇಂದ್ರ

ಬಿಜೆಪಿಗೆ ಅಭ್ಯರ್ಥಿ ಇರಲಿಲ್ಲ, ಎಚ್‌ಡಿಕೆಗೆ ಧೈರ್ಯ ಇರಲಿಲ್ಲ: ಡಿಕೆಶಿ

Bangalore Rural; ಬಿಜೆಪಿಗೆ ಅಭ್ಯರ್ಥಿ ಇರಲಿಲ್ಲ, ಎಚ್‌ಡಿಕೆಗೆ ಧೈರ್ಯ ಇರಲಿಲ್ಲ: ಡಿಕೆಶಿ

Mekedatu Dam ನಿರ್ಮಾಣಕ್ಕೆ ಕೇಂದ್ರMekedatu Dam ನಿರ್ಮಾಣಕ್ಕೆ ಕೇಂದ್ರದ ಅನುಮತಿ ಪಡೆಯುವೆ: ದೇವೇಗೌಡಯುವೆ: ದೇವೇಗೌಡ

Mekedatu Dam ನಿರ್ಮಾಣಕ್ಕೆ ಕೇಂದ್ರದ ಅನುಮತಿ ಪಡೆಯುವೆ: ದೇವೇಗೌಡ

Lok Sabha Election; ಕಾಂಗ್ರೆಸ್‌ ಗೆದ್ದರೆ ಸಿದ್ದರಾಮಯ್ಯ ಸ್ಥಾನ ಭದ್ರ

Lok Sabha Election; ಕಾಂಗ್ರೆಸ್‌ ಗೆದ್ದರೆ ಸಿದ್ದರಾಮಯ್ಯ ಸ್ಥಾನ ಭದ್ರ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್‌ ಸುಲಿಗೆ; ಮೂವರ ಬಂಧನ

Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್‌ ಸುಲಿಗೆ; ಮೂವರ ಬಂಧನ

Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ

Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ

Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್‌ ಬಾತ್ಮೀದಾರ ಸೆರೆ

Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್‌ ಬಾತ್ಮೀದಾರ ಸೆರೆ

Arrested: ಸುಲಿಗೆ ಸೇರಿ 42 ಕೇಸ್‌ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ

Arrested: ಸುಲಿಗೆ ಸೇರಿ 42 ಕೇಸ್‌ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ

Arrested: 17 ಕೇಸ್‌ನಲ್ಲಿ ಭಾಗಿಯಾಗಿದ್ದ ರೌಡಿಶೀಟರ್‌ ಬಂಧನ

Arrested: 17 ಕೇಸ್‌ನಲ್ಲಿ ಭಾಗಿಯಾಗಿದ್ದ ರೌಡಿಶೀಟರ್‌ ಬಂಧನ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Lok Sabha Elections; ಕುಮಾರಸ್ವಾಮಿ ಪರ ಕೊನೆಗೂ ಪ್ರಚಾರಕ್ಕೆ ಬಾರದ ಸುಮಲತಾ

Lok Sabha Elections; ಕುಮಾರಸ್ವಾಮಿ ಪರ ಕೊನೆಗೂ ಪ್ರಚಾರಕ್ಕೆ ಬಾರದ ಸುಮಲತಾ

ಮಹಿಳೆಯರಿಗೆ 2 ಸಾವಿರ ಕೊಟ್ಟು ಗಂಡಸರ ಜೇಬಿಗೆ ಕತ್ತರಿ: ಕುಮಾರಸ್ವಾಮಿ

ಮಹಿಳೆಯರಿಗೆ 2 ಸಾವಿರ ಕೊಟ್ಟು ಗಂಡಸರ ಜೇಬಿಗೆ ಕತ್ತರಿ: ಕುಮಾರಸ್ವಾಮಿ

OBC ವರ್ಗಕ್ಕೆ ಕಾಂಗ್ರೆಸ್‌ನಿಂದ ಅನ್ಯಾಯ: ಸುನಿಲ್‌ ಕುಮಾರ್‌

OBC ವರ್ಗಕ್ಕೆ ಕಾಂಗ್ರೆಸ್‌ನಿಂದ ಅನ್ಯಾಯ: ಸುನಿಲ್‌ ಕುಮಾರ್‌

ಸರಕಾರದ ಖಜಾನೆ ಖಾಲಿ, ರೈತರಿಗೆ ಪರಿಹಾರ ನೀಡಲು ಹಣವಿಲ್ಲ: ವಿಜಯೇಂದ್ರ

ಸರಕಾರದ ಖಜಾನೆ ಖಾಲಿ, ರೈತರಿಗೆ ಪರಿಹಾರ ನೀಡಲು ಹಣವಿಲ್ಲ: ವಿಜಯೇಂದ್ರ

ಬಿಜೆಪಿಗೆ ಅಭ್ಯರ್ಥಿ ಇರಲಿಲ್ಲ, ಎಚ್‌ಡಿಕೆಗೆ ಧೈರ್ಯ ಇರಲಿಲ್ಲ: ಡಿಕೆಶಿ

Bangalore Rural; ಬಿಜೆಪಿಗೆ ಅಭ್ಯರ್ಥಿ ಇರಲಿಲ್ಲ, ಎಚ್‌ಡಿಕೆಗೆ ಧೈರ್ಯ ಇರಲಿಲ್ಲ: ಡಿಕೆಶಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.