Updated at Mon,24th Jul, 2017 9:14PM IST
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಬೆಂಗಳೂರಲ್ಲಿ ಐಫೋನ್‌ ಪ್ರಾಯೋಗಿಕ ಜೋಡಣೆ ಮುಂದಿನ ತಿಂಗಳಿಂದ

ಬೆಂಗಳೂರು: ಪ್ರಸಿದ್ಧ ಗ್ಯಾಜೆಟ್‌ ತಯಾರಿಕಾ ಕಂಪನಿ, ಅಮೆರಿಕದ ಆ್ಯಪಲ್‌ ಬೆಂಗಳೂರಲ್ಲಿ ಐಫೋನ್‌ಗಳ ಪ್ರಾಯೋಗಿಕ ಜೋಡಣೆಯನ್ನು ಮುಂದಿನ ತಿಂಗಳಿಂದ ಆರಂಭಿಸಲಿದೆ.  ಬೆಂಗಳೂರಿನ ಪೀಣ್ಯದ ಘಟಕದಲ್ಲಿ ಆ್ಯಪಲ್‌ ಐಫೋನ್‌ಗಳ ಜೋಡಣೆ ಕಾರ್ಯ ಆರಂಭವಾಲಿದ್ದು, ಆ್ಯಪಲ್‌ ಫೋನ್‌ಗಳ ತಯಾರಿಕೆ ಗುತ್ತಿಗೆ ಪಡೆದಿರುವ ತೈವಾನಿನ ವಿಸ್ಟೋರ್ನ್ ಆ್ಯಪಲ್‌ ಫೋನ್‌ಗಳ ಜೋಡಣೆ ಮಾಡಲಿದೆ.  

ಇದರೊಂದಿಗೆ ಕೆಲವೊಂದು ಬಿಡಿಭಾಗಗಳ ಆಮದು, ತೆರಿಗೆ ವಿಚಾರದಲ್ಲಿ ಕೆಲವೊಂದು ರಿಯಾಯಿತಿ ನೀಡುವಂತೆ ಆ್ಯಪಲ್‌ ಕೇಂದ್ರ ಸರ್ಕಾರಕ್ಕೆ ಕೇಳಿಕೊಂಡಿದೆ. ಆದರೆ ಜಿಎಸ್‌ಟಿ ಜು.1ರಿಂದ ಜಾರಿಗೆ ಬರುತ್ತಿರುವ ಹಿನ್ನೆಲೆಯಲ್ಲಿ ಆ್ಯಪಲ್‌ನ ಎಲ್ಲ ಕೇಳಿಕೆಗಳನ್ನು ಕೇಂದ್ರ ಪುರಸ್ಕರಿಸುವ ಸಾಧ್ಯತೆ ಕಡಿಮೆ ಎನ್ನಲಾಗಿದೆ. ಆ್ಯಪಲ್‌ ತನ್ನ ಫೋನ್‌ ತಯಾರಿಕೆಯ ಎಲ್ಲಾ ಘಟಕಗಳನ್ನು ಬೆಂಗಳೂರಲ್ಲೇ ಆರಂಭಿಸುವುದನ್ನು ಎದುರು ನೋಡುತ್ತಿದ್ದೇವೆ.

ಇಲ್ಲಿಂದಲೇ ರಫ್ತು ಕೂಡ ಆಗಲಿದ್ದು, ದೇಶೀಯ ಮಾರುಕಟ್ಟೆಗೂ ಪೂರೈಕೆಯಾಗಲಿದೆ ಎಂದು ರಾಜ್ಯದ ಅಧಿಕಾರಿಗಳು ಹೇಳಿದ್ದಾರೆ. ಇದರೊಂದಿಗೆ ಆ್ಯಪಲ್‌ ಘಟಕದ ಕುರಿತಂತೆ ಕೇಂದ್ರ ಸಚಿವರಾದ ಅರುಣ್‌ ಜೇಟಿ ಮತ್ತು ನಿರ್ಮಲಾ ಸೀತಾರಾಮನ್‌ ಬಳಿ ಈಗಾಗಲೇ ಮಾತುಕತೆ ನಡೆಸಿದ್ದಾಗಿ ಮತ್ತು ಹೆಚ್ಚಿನ ಪೂರಕ ವಾತಾವರಣ ಕಲ್ಪಿಸುವಂತೆ ರಾಜ್ಯದ ಕೈಗಾರಿಕಾ ಸಚಿವ ಆರ್‌.ವಿ.ದೇಶಪಾಂಡೆ ಹೇಳಿದ್ದಾರೆ. 


Back to Top