ನಾಗನ ವಿರುದ್ಧ ಒಂದೇ ಠಾಣೆಯಲ್ಲಿ 3 ದೂರು


Team Udayavani, May 22, 2017, 12:42 PM IST

bomb-naga.jpg

ಬೆಂಗಳೂರು: ಬ್ಲ್ಯಾಕ್‌ ಆ್ಯಂಡ್‌ ವೈಟ್‌ ದಂಧೆ ಪ್ರಕರಣದಲ್ಲಿ ಬಂಧಿಯಾಗಿರುವ ನಾಗರಾಜ್‌, ನೋಟು ಬದಲಾವಣೆ ಹೆಸರಿನಲ್ಲಿ ಕೋಟ್ಯಂತರ ರೂ. ವಂಚಿಸಿಧಿದ್ದಾನೆ ಎಂದು ಆರೋಪಿಸಿ ಉಲ್ಲಾಳದ ಮುನಿರಾಜು, ವಿಜಯನಗರದ ಕಲ್ಯಾಣ ಮತ್ತು ನಾಗರಬಾವಿ ನಿವಾಸಿ ಚಂದ್ರಕುಮಾರ್‌ ಎಂಬ ಮೂವರು ರಿಯಲ್‌ ಎಸ್ಟೇಟ್‌ ಉದ್ಯಮಿಗಳು ಕೆಂಗೇರಿ ಠಾಣೆಗೆ ದೂರು ನೀಡಿದ್ದು, ಎಫ್ಐಆರ್‌ ಕೂಡ ದಾಖಲಾಗಿದೆ.

2016ರ ಡಿಸೆಂಬರ್‌ನಲ್ಲಿ ಆರೋಪಿ ನಾಗರಾಜ್‌ ಅಪಮೌಲ್ಯಗೊಂಡ 500 ಮತ್ತು 1000 ರೂ. ಮುಖಬೆಲೆಯ ನೋಟುಗಳ ಬದಲಾವಣೆ ನಡೆಸುತ್ತಿದ್ದ. ಆರೋಪಿಯ ಬೆಂಬಲಿಗರಿಂದ ಈ ಮಾಹಿತಿ ಪಡೆದ ಉದ್ಯಮಿಗಳು ನಾಗರಾಜ್‌ನನ್ನು ಸಂಪರ್ಕಿಸಿ ನೋಟು ಬದಲಾವಣೆಗೆ ಶೇ.20ರಷ್ಟು ಕಮಿಷನ್‌ ಆಧಾರದ ಮೇಲೆ ಮಾತುಕತೆ ನಡೆಸಿದ್ದರು.

ಬಳಿಕ ಆರೋಪಿಯ ಬೆಂಬಲಿಗರ ಮಾತು ನಂಬಿದ ಮೂವರು ಉದ್ಯಮಿಗಳು ಒಟ್ಟು 8.05 ಕೋಟಿ ರೂಪಾಯಿ ಹಳೇ ನೋಟುಗಳನ್ನು ಸಂಗ್ರಹಿಸಿಕೊಂಡು ನಿಗದಿತ ಸ್ಥಳಗಳಿಗೆ ಹೋಗಿದ್ದರು. ಒಮ್ಮೆಲೇ ಕೋಟ್ಯಂತರ ರುಪಾಯಿ ಕಂಡ ನಾಗರಾಜ್‌ ಆರೋಪಿಗಳಿಗೆ ನೋಟುಗಳ ಬದಲಾವಣೆಗೆ ಗಡುವು ನೀಡಿದ್ದ. ಇದಕ್ಕೆ ಒಪ್ಪದ ಉದ್ಯಮಿಗಳಿಗೆ ಬೆಂಬಲಿಗರಿಂದ ಬೆದರಿಕೆ ಹಾಕಿ ಹಣ ದರೋಡೆ ಮಾಡಿದ್ದಾನೆ ಎಂದು ದೂರಿನಲ್ಲಿ ತಿಳಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ನಾಗರಬಾವಿಯ ಚಂದ್ರಕುಮಾರ್‌ ಅವರನ್ನು ವ್ಯವಹಾರದ ಸಂಬಂಧ ಪರಿಚಯಿಸಿಕೊಂಡಿದ್ದ ನಾಗರಾಜ್‌ನ ಅಳಿಯ ಬಯಪ್ಪ, ಶೇ.20 ರಷ್ಟು ಕಮಿಷನ್‌ ಆಧಾರದ ಮೇಲೆ ನೋಟುಗಳ ಬದಲಾವಣೆ ಮಾಡಿಕೊಡುವುದಾಗಿ ಹೇಳಿದ್ದ. ಅದರಂತೆ 2.5 ಕೋಟಿ ರೂ. ಹಣವನ್ನು 2016ರ ಡಿಸೆಂಬರ್‌ 10 ರಂದು ಕೆಂಗೇರಿ ಬಳಿಯ ರೈಲ್ವೆ ಪ್ಯಾರಲಲ್‌ ರಸ್ತೆಗೆ ತರಿಸಿಕೊಂಡು, ನಂತರ ಹಲ್ಲೆ ನಡೆಸಿ ಹಣ ಕಸಿದುಕೊಂಡಿದ್ದರು.

ಅದೇ ರೀತಿಯಲ್ಲಿ ಉಲ್ಲಾಳ ನಿವಾಸಿ ಮುನಿರಾಜು 1.75 ಕೋಟಿ ರೂ. ಹಳೇ ನೊಟುಗಳನ್ನು 2016ರ ಡಿಸೆಂಬರ್‌ 25 ರಂದು ಉತ್ತರಹಳ್ಳಿ-ಕೆಂಗೇರಿ ಮುಖ್ಯರಸ್ತೆಯ ನಿರ್ಜನ ಪ್ರದೇಶಕ್ಕೆ ಕರೆಸಿಕೊಂಡು ದರೋಡೆ ಮಾಡಿದ್ದರು. ಇನ್ನು ವಿಜಯನಗರ ನಿವಾಸಿ ಕಲ್ಯಾಣ್‌, ನಾಗರಾಜನ ಆಪ್ತ ಶರವಣ ಹೇಳಿದಂತೆ 3.80 ಕೋಟಿ ರೂ ಹಳೇ ನೋಟುಗಳನ್ನು ಡಿಸೆಂಬರ್‌ 28 ರಂದು ಕೆಂಗೇರಿ ಉಪನಗರ ಬಳಿಯ ಅಡಿಗಾಸ್‌ ಹೊಟೆಲ್‌ ಹಿಂಭಾಗ ಹೋಗಿ ಹಣದೊಂದಿಗೆ ಕಾಯುತ್ತಿದ್ದರು. ಆಗ ನಾಗರಾಜ, ತನ್ನ ಮಕ್ಕಳು ಮತ್ತು ಸಹಚರರ ಜತೆ ಹೋಗಿ ಮಾರಕಾಸ್ತ್ರ ತೋರಿಸಿ ಬೆದರಿಸಿ ಹಣ ಸುಲಿಗೆ ಮಾಡಿದ್ದ ಎಂದು ದೂರು ನೀಡಿದ್ದಾರೆ.

ನಾಗರಾಜ್‌ ಮತ್ತೆ ವಶಕ್ಕೆ
ಹೆಣ್ಣೂರು ಪೊಲೀಸರ ವಶದಲ್ಲಿರುವ ನಾಗರಾಜನ್‌ನ್ನು ಮೂರು ದರೋಡೆ ಪ್ರಕರಣಗಳ ಸಂಬಂಧ ವಶಕ್ಕೆ ಪಡೆಯಲು ಕೆಂಗೇರಿ ಠಾಣೆ ಪೊಲೀಸರು ಸಿದ್ಧತೆ ನಡೆಸಿದ್ದಾರೆ. ಸೋಮವಾರ ಆರೋಪಿಯ ಪೊಲೀಸ್‌ ಕಸ್ಟಡಿ ಅಂತ್ಯವಾಗುತ್ತಿರುವ ಹಿನ್ನೆಲೆಯಲ್ಲಿ ಕೆಂಗೇರಿ ಪೊಲೀಸರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿ, ಬಾಡಿ ವಾರೆಂಟ್‌ ಮೇಲೆ ನಾಗರಾಜನನ್ನು ವಶಕ್ಕೆ ಪಡೆದು ವಿಚಾರಣೆ ಮಾಡಲಾಗುವುದು ಎಂದು ಕೆಂಗೇರಿ ಪೊಲೀಸರು ತಿಳಿಸಿದರು.

ಪತ್ನಿಯರ ವಿಚಾರಣೆ
ನಾಗರಾಜ್‌ ಬಂಧನದ ಬಳಿಕ ತಮಿಳುನಾಡಿನಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯ ಇಬ್ಬರು ಪತ್ನಿಯರಾದ ಪುಷ್ಪ ಮತ್ತು ಮಾಜಿ ಕಾರ್ಪೊರೇಟರ್‌ ಲಕ್ಷಿ$¾à ಅವರನ್ನು ಮಲ್ಲೇಶ್ವರ ಎಸಿಪಿ ನೇತೃತ್ವದಲ್ಲಿ ವಶಕ್ಕೆ ಪಡೆದು, ಹೆಣ್ಣೂರು ಠಾಣೆ ಪೊಲೀಸರಿಗೆ ಹಸ್ತಾಂತರಿಸಿದ್ದರು. ಬಳಿಕ ಪ್ರಕರಣ ಸಂಬಂಧ ಇಬ್ಬರು ಪತ್ನಿಯರ ಹೇಳಿಕೆಗಳನ್ನು ದಾಖಲಿಸಿಕೊಂಡು, ಸೋಮವಾರ ಮತ್ತೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್‌ ಕೊಟ್ಟು ಕಳುಹಿಸಲಾಗಿದೆ ಎಂದು ತನಿಖಾಧಿಕಾರಿ ಶ್ರೀನಿವಾಸ್‌ “ಉದಯವಾಣಿ’ಗೆ ತಿಳಿಸಿದ್ದಾರೆ.

ಟಾಪ್ ನ್ಯೂಸ್

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

7-bng

Bengaluru: ಸಾಲ ವಸೂಲಿ ಹೆಸರಲ್ಲಿ ಆಟೋ ವಶ, ಧರ್ಮ ನಿಂದನೆ: ಬಂಧನ

6-bng

Bengaluru: ಪೇಂಟರ್‌ ಕೊಂದು ಪೊಲೀಸ್‌ ಠಾಣೆಗೆ ಬಂದು ಸಿಕ್ಕಿಬಿದ್ದ ಸ್ನೇಹಿತರು

5-bng

Bengaluru: ಪ್ರೀತಿಸಿ ಮದುವೆ ಆಗುವುದಾಗಿ ಅಂಗವಿಕಲ ಯುವತಿಗೆ ವಂಚನೆ

4-bng

Bengaluru: 290 ರೌಡಿಶೀಟರ್‌ಮನೆಗಳ ಮೇಲೆ ದಾಳಿ 

3-crime

Bengaluru: ಸ್ನೇಹಿತರಿಂದಲೇ ಸುಪಾರಿ ಕಿಲ್ಲರ್‌ನ ಹತ್ಯೆ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-eewqeeeqwewqewq

Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್‌, ಸ್ಟೋಯಿನಿಸ್‌, ಅಗರ್‌ ಹೊರಕ್ಕೆ

1-hanuma

ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್‌

1-wewqqewqe

Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್‌

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.