ಸೆಲೆಸ್ ಟೈಲ್ಸ್ ಜತೆ ನಟಿ ಸಂಜನಾ ಪಾಲುದಾರಿಕೆ
Team Udayavani, May 23, 2017, 12:34 PM IST
ಬೆಂಗಳೂರು: ಚಿತ್ರನಟಿ ಸಂಜನಾ ಗರ್ಲಾನಿ ಅವರು ಸೆಲೆಸ್ ಟೈಲ್ಸ್ ಕಂಪನಿಯ ಜೊತೆ ಪಾಲುದಾರಿಕೆ ವ್ಯವಹಾರ ಆರಂಭಿಸಿದ್ದಾರೆ. ಇತೀಚೆಗೆ ಜಯನಗರದ ಶೋರೂಮ್ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸೆಲೆಸ್ ಟೈಲ್ಸ್ ಕಂಪನಿಯ ಉದ್ಯಮಿ ವಿನಯ್ ಅಗರ್ವಾಲ್ ಅವರ ಜೊತೆ ಒಡಂಬಡಿಕೆ ಮಾಡಿಕೊಂಡರು.
“ಸಾಮಾನ್ಯವಾಗಿ ಸಿನಿಮಾ ನಟ, ನಟಿಯರು ಹೋಟೆಲ್ ಬಿಸಿನೆಸ್, ಇಂಟಿರಿಯರ್ ಡಿಸೈನ್, ಫ್ಯಾಷನ್ ಕ್ಷೇತ್ರ, ಜಾಹೀರಾತು ಜಗತ್ತಿನಲ್ಲಿ ಹೆಚ್ಚಾಗಿ ತೊಡಗಿಸಿಕೊಳ್ಳುತ್ತಾರೆ. ಆದರೆ, ನಾನು ವಿಭಿನ್ನವಾಗಿ ಯೋಚಿಸಿದ್ದೇನೆ. ಕಳೆದ 20 ವರ್ಷಗಳಿಂದ ಟೈಲ್ಸ್ ಉದ್ಯಮದಲ್ಲಿ ಹೆಸರು ಮಾಡಿರುವ ವಿನಯ್ ಅವರ ಜತೆ ಸೇರಿ ಟೈಲ್ಸ್ ಕಂಪನಿಯಲ್ಲಿ ಪಾಲುದಾರಿಕೆ ಹಂಚಿಕೊಂಡಿದ್ದೇನೆ,’ ಎಂದರು.
ಬೆಂಗಳೂರು ಸೇರಿದಂತೆ ಹೈದರಾಬಾದ್, ವಿಜಯವಾಡ ದಲ್ಲಿ ಸಾಕಷ್ಟು ಹೆಸರು ಮಾಡಿರುವ ಕಂಪನಿ ಈಗ ಕೇರಳ ಹಾಗೂ ತಮಿಳುನಾಡಿನಲ್ಲೂ ಪ್ರಾರಂಭವಾಗುತ್ತಿದೆ. ಸೆಲೆಸ್ ಟೈಲ್ಸ್ನ ವಿನಯ್ ಅಗರ್ವಾಲ್, ಸಂಗೀತ ನಿರ್ದೇಶಕ ಗುರುಕಿರಣ್, ಶ್ರೀಮತಿ ಶಿಲ್ಪಾ ಗಣೇಶ್, ಡಾ. ಅಜೀಜ್ ಪಾಶ, ಗಾಯತ್ರಿ, ಶ್ಯಾಮಲ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್ ಸುಲಿಗೆ; ಮೂವರ ಬಂಧನ
Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ
Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್ ಬಾತ್ಮೀದಾರ ಸೆರೆ
Arrested: ಸುಲಿಗೆ ಸೇರಿ 42 ಕೇಸ್ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ
Arrested: 17 ಕೇಸ್ನಲ್ಲಿ ಭಾಗಿಯಾಗಿದ್ದ ರೌಡಿಶೀಟರ್ ಬಂಧನ