ಕ್ಯಾಬ್‌ ಲಿಂಕ್‌ಗೆ ಹಿಂದಿ ಪರೀಕ್ಷೆ! 

Team Udayavani, Jun 25, 2017, 11:15 AM IST

uber-viji-pack.jpg

ಬೆಂಗಳೂರು: “ನಮ್ಮ ಮೆಟ್ರೋ’ದಲ್ಲಿ ಹಿಂದಿ ಬಳಕೆ ಕುರಿತು ವಿರೋಧ ವ್ಯಕ್ತವಾಗುತ್ತಿರುವ ಬೆನ್ನಲ್ಲೇ ನಗರದಲ್ಲಿರುವ ಆ್ಯಪ್‌ ಆಧಾರಿತ ಟ್ಯಾಕ್ಸಿ ಕಂಪೆನಿಗಳೂ ಹಿಂದಿಗೆ ಪ್ರಾಶಸ್ತ್ಯ ನೀಡುತ್ತಿದ್ದು, ಈ ಬಗ್ಗೆ ಅಪಸ್ವರ ಕೇಳಿಬರುತ್ತಿದೆ. 

ಆ್ಯಪ್‌ ಆಧಾರಿತ ಟ್ಯಾಕ್ಸಿ ಸೇವಾ ಕಂಪೆನಿಗಳೊಂದಿಗೆ ಚಾಲಕರು ಈ ಮೊದಲು ಯಾವುದೇ ಅಡತಡೆಗಳಿಲ್ಲದೆ ಸುಲಭವಾಗಿ ತಮ್ಮ ವಾಹನಗಳನ್ನು ಜೋಡಣೆ ಮಾಡಿಕೊಳ್ಳುತ್ತಿದ್ದರು. ಆದರೆ, ಇತ್ತೀಚೆಗೆ ಜೋಡಣೆ ಮಾಡಿಕೊಳ್ಳುವ ಮುನ್ನ ಚಾಲಕರಿಗೆ “ಹಿಂದಿ ಮೌಖೀಕ ಪರೀಕ್ಷೆ’ ನಡೆಸಲಾಗುತ್ತಿದೆ. ಈ ಮೂಲಕ ನಿಧಾನವಾಗಿ ಹಿಂದಿಯನ್ನು ಹೇರಲಾಗುತ್ತಿದೆ ಎಂದು ಕೆಲ ಟ್ಯಾಕ್ಸಿ ಚಾಲಕರು ಆರೋಪಿಸಿದ್ದಾರೆ. 

ಮುರುಗೇಶಪಾಳ್ಯ, ನಾಗವಾರ, ಎಚ್‌ಎಸ್‌ಆರ್‌ ಲೇಔಟ್‌ ಸೇರಿದಂತೆ ನಗರದ ಅಲ್ಲಲ್ಲಿ ಇರುವ ಆ್ಯಪ್‌ ಆಧಾರಿತ ಟ್ಯಾಕ್ಸಿ ಕಂಪೆನಿಗಳ ಕಚೇರಿಗಳಲ್ಲಿ ವಾಹನಗಳನ್ನು “ಲಿಂಕ್‌’ ಮಾಡಿಕೊಳ್ಳಲು ಮುಂದಾದ ಅನೇಕ ಚಾಲಕರಿಗೆ ಈ “ಹಿಂದಿ ಪರೀಕ್ಷೆ’ ಎದುರಾಗಿದೆ. ಹಿಂದಿ ಬಾರದಿದ್ದರೆ, ಇಂಗ್ಲಿಷ್‌ ಭಾಷೆಯಾದರೂ ತಕ್ಕಮಟ್ಟಿಗೆ ನಿರ್ವಹಣೆ ಮಾಡಲು ಬರುತ್ತದೆಯೇ ಎಂಬ ಪರೀಕ್ಷೆ ಮಾಡಲಾಗುತ್ತದೆ. 

ಹಿಂದಿ ಬರದಿದ್ದರೆ ಇನ್ನೋವಾಗೆ ಇಂಡಿಕಾ ವ್ಯಾಲ್ಯು: ಆ್ಯಪ್‌ ಆಧಾರಿತ ಟ್ಯಾಕ್ಸಿ ಕಂಪೆನಿಗಳು ಚಾಲಕರ ಬಳಿ ಕನ್ನಡವನ್ನು ಕೇಳುವುದೇ ಇಲ್ಲ. ಹಿಂದಿ ಅಥವಾ ಇಂಗ್ಲಿಷ್‌ ಇವೆರಡರಲ್ಲಿ ಒಂದು ಮಾತ್ರ ಬರಲೇಬೇಕು. ಅದರಲ್ಲೂ ಹಿಂದಿಗೆ ಮೊದಲ ಆದ್ಯತೆ ಕೊಡಲಾಗುತ್ತಿದೆ.  “ಕೆಲ ದಿನಗಳ ಹಿಂದೆ ಮುರಗೇಶಪಾಳ್ಯದಲ್ಲಿರುವ ಓಲಾ ಕಚೇರಿಗೆ ನನ್ನ ಇನ್ನೊವಾ ಕಾರನ್ನು ಅಟ್ಯಾಚ್‌ ಮಾಡಲು ಹೋಗಿದ್ದೆ. ಚಾಲನಾ ಪರವಾನಗಿ ಹಾಗೂ ವಾಹನದ ದಾಖಲೆಗಳನ್ನು ಸಲ್ಲಿಸಿದೆ.

ನಂತರ ಒಂದು ಟೋಕನ್‌ ಕೊಟ್ಟರು. ಅದನ್ನು ತೆಗೆದುಕೊಂಡು ಮತ್ತೂಂದು ಕೌಂಟರ್‌ಗೆ ಕಳುಹಿಸಿದರು. ಅಲ್ಲಿ ಹಿಂದಿ ಬರುತ್ತದೆಯೇ? ಗ್ರಾಹಕರ ಜತೆ ಹಿಂದಿಯಲ್ಲಿ ಹೇಗೆ ವ್ಯವಹಾರ ಮಾಡುತ್ತೀರಾ ಎಂದು ಕೇಳಿದರು. “ಹಿಂದಿ ಬರುವುದಿಲ್ಲ’ ಎಂದಾಗ, ಇಂಗ್ಲಿಷ್‌ ಬರುತ್ತದೆಯೇ ಎಂದು ಕೇಳಿದರು. ಅದಕ್ಕೂ ಇಲ್ಲ ಎಂದಾಗ, “ಸರಿ ಹಾಗಿದ್ದರೆ ತಿಂಗಳಮಟ್ಟಿಗೆ ಇಂಡಿಕಾ ಪಟ್ಟಿಯಲ್ಲಿ ಓಡಿಸಿ. ಆಮೇಲೆ ನೋಡೋಣ ಎಂದು ಸೂಚಿಸಿದರು’ ಎಂದು ಆಡುಗೋಡಿಯ ಎಸ್‌. ಗುರು ಅಸಹಾಯಕತೆ ತೋಡಿಕೊಂಡರು.  

ಒತ್ತಾಯ ಎಷ್ಟು ಸರಿ?: “ನನ್ನದು ಸ್ವಿಫ್ಟ್ ಡಿಝೈರ್‌ ಕಾರು ಇದೆ. ಆರು ತಿಂಗಳ ಹಿಂದೆ ಓಲಾ ಮತ್ತು ಉಬರ್‌ಗೆ ಅಟ್ಯಾಚ್‌ ಮಾಡಲು ಹೋದಾಗ, ಬೆಂಗಳೂರಿಗೆ ಹೊರಗಿನ ಜನ ನಿತ್ಯ ಸಾಕಷ್ಟು ಸಂಖ್ಯೆಯಲ್ಲಿ ಬರುತ್ತಾರೆ. ಅವರೊಂದಿಗೆ ವ್ಯವಹರಿಸಲು ಹಿಂದಿ ಸ್ವಲ್ಪವಾದರೂ ಬರಲೇಬೇಕು,’ ಎಂದು ಹೇಳಿದರು. ಆಗ, ಹೇಗೋ ಹಿಂದಿ ಮ್ಯಾನೇಜ್‌ ಮಾಡಿದೆ. ಆದರೆ, ಹೀಗೆ ಬಲವಂತವಾಗಿ ಹಿಂದಿ ಹೇರುತ್ತಿರುವುದು ಎಷ್ಟು ಸರಿ ಸರ್‌?’ ಎಂದು ಕುಮಾರಸ್ವಾಮಿ ಲೇಔಟ್‌ ನಿವಾಸಿ ರವಿಕುಮಾರ್‌ ಆಕ್ರೋಶ ವ್ಯಕ್ತಪಡಿಸುತ್ತಾರೆ. 

“ನನಗೆ ಮಾತ್ರವಲ್ಲ, ಕೆ.ಆರ್‌. ಪುರದಲ್ಲಿರುವ ನನ್ನ ಸ್ನೇಹಿತ ವೆಂಕಟಾಚಲಪತಿಗೂ ಇದೇ ಅನುಭವ ಆಗಿದೆ. ಹಿಂದಿ ಬಾರದಿದ್ದರೆ ಕೆಲಸ ಕೊಡುವುದಿಲ್ಲ ಎಂದಲ್ಲ; ಕೊಡಬಹುದು. ಆದರೆ, ಈ ಧೋರಣೆಗಳು ಹಿಂದಿ ಕಲಿಕೆಯ ಅನಿವಾರ್ಯತೆಯನ್ನು ಸೃಷ್ಟಿಸುವಂತಿದೆ,’ ಎಂದೂ ಅವರು ಹೇಳುತ್ತಾರೆ. 

ಉತ್ತರ ಪ್ರದೇಶದ ಡ್ರೈವರ್‌ಗಳ ನಿಯೋಜನೆ: ಆ್ಯಪ್‌ ಆಧಾರಿತ ಟ್ಯಾಕ್ಸಿ ಕಂಪೆನಿಗಳು ಇತ್ತೀಚೆಗೆ ತಮ್ಮಲ್ಲಿರುವ ಟ್ಯಾಕ್ಸಿಗಳಿಗೆ ಚಾಲಕರನ್ನು ನೇಮಿಸುವಾಗಲೂ ಹಿಂದಿ ಬಲ್ಲವರಿಗೆ ಅದರಲ್ಲೂ ಉತ್ತರ ಭಾರತದವರಿಗೇ ಆದ್ಯತೆ ನೀಡಿವೆ ಎಂಬ ಆರೋಪವೂ ಕೇಳಿಬಂದಿದೆ. ನಗರದಾದ್ಯಂತ ಸಾವಿರಾರು ಟ್ಯಾಕ್ಸಿಗಳು ಆ್ಯಪ್‌ ಆಧಾರಿತ ಕಂಪೆನಿಗಳ ಬಳಿ ಇವೆ. ಅವುಗಳಿಗೆ ತಿಂಗಳಿಗೆ 15ರಿಂದ 20 ಸಾವಿರ ರೂ. ಮಾಸಿಕ ವೇತನ ಅಥವಾ ಇಂತಿಷ್ಟು ಗಂಟೆಗಳು ಡ್ಯುಟಿ ನಿಗದಿಪಡಿಸಿ ಚಾಲಕರನ್ನು ನಿಯೋಜಿಸಲಾಗಿದೆ. ಅವರಲ್ಲಿ ಬಹುತೇಕರು ಅನ್ಯರಾಜ್ಯದವರು ಎಂದು ಚಾಲಕರು ಆರೋಪಿಸುತ್ತಾರೆ. 

ನಿಯಮ ವಿಧಿಸಿಲ್ಲ; ಉಬರ್‌: ಈ ಬಗ್ಗೆ ಟ್ಯಾಕ್ಸಿ ಕಂಪೆನಿ ಉಬರ್‌ ಅನ್ನು ಸಂಪರ್ಕಿಸಿದರೆ ಅಲ್ಲಿನ ಅಧಿಕಾರಿಗಳು ಹೇಳುವುದೇ ಬೇರೆ. ಹಿಂದಿ ಬರಲೇಬೇಕು ಎಂದು ಯಾವ ಚಾಲಕರಿಗೂ ನಾವ ನಿಯಮ ವಿಧಿಸಿಲ್ಲ. ಅಟ್ಯಾಚ್‌ ಮಾಡಿಕೊಳ್ಳುವಾಗ ಅದನ್ನು ಕೇಳಿದ ಉದಾಹರಣೆಯೂ ಇಲ್ಲ ಎಂದು ಹೇಳಿದ್ದಾರೆ. 

ಆ್ಯಪ್‌ ಆಧಾರಿತ ಟ್ಯಾಕ್ಸಿ ಕಂಪೆನಿಗಳು ಹಿಂದಿ ಬರುವುದಿಲ್ಲ ಎಂಬ ಕಾರಣಕ್ಕಾಗಿಯೇ ಅಟ್ಯಾಚ್‌ ಮಾಡಿಕೊಳ್ಳುವುದನ್ನು ನಿರಾಕರಿಸಿದ್ದು ಕಂಡುಬಂದರೆ ಹಾಗೂ ಅಂತಹ ವಂಚನೆಗೆ ಒಳಗಾದವರು ಪ್ರಾಧಿಕಾರಕ್ಕೆ ನೇರವಾಗಿ ದೂರು ನೀಡಿದರೆ, ಕಂಪೆನಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸರ್ಕಾರಕ್ಕೆ ಶಿಫಾರಸು ಮಾಡುತ್ತೇನೆ. ಆದರೆ, ವ್ಯವಹಾರದ ದೃಷ್ಟಿಯಿಂದ ಸ್ವಲ್ಪ ಹಿಂದಿ ಕಲಿಯಬೇಕಾಗುತ್ತದೆ ಎಂದಾಗ, ಅಂತಹವರ ವಿರುದ್ಧ ಕ್ರಮ ಕೈಗೊಳ್ಳಲು ಬರುವುದಿಲ್ಲ. ಯಾಕೆಂದರೆ, ಅದು ವ್ಯವಹಾರದ ದೃಷ್ಟಿಯಿಂದ ಆತನದ್ದು ಸರಿ ಇರಬಹುದು. ಕನ್ನಡ ಬಿಡಿ ಎಂದು ಅವನು ಎಲ್ಲಿಯೂ ಹೇಳುತ್ತಿಲ್ಲವಲ್ಲ.
– ಪ್ರೊ.ಎಸ್‌.ಜಿ. ಸಿದ್ದರಾಮಯ್ಯ, ಅಧ್ಯಕ್ಷರು, ಕನ್ನಡ ಅಭಿವೃದ್ಧಿ ಪ್ರಾಧಿಕಾರ. 

* ವಿಜಯಕುಮಾರ್‌ ಚಂದರಗಿ

ಟಾಪ್ ನ್ಯೂಸ್

Gadag; ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಕೊಲೆಗಡುಕರೇ ಪ್ರಥಮ ಪ್ರಜೆಗಳು: ಬಸವರಾಜ ಬೊಮ್ಮಾಯಿ

Gadag; ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಕೊಲೆಗಡುಕರೇ ಪ್ರಥಮ ಪ್ರಜೆಗಳು: ಬಸವರಾಜ ಬೊಮ್ಮಾಯಿ

10-

Lok Sabha Election 2024: ಝಾರ್ಖಂಡ್‌, ಛತ್ತೀಸ್‌ಗಢದಲ್ಲಿ ಗೆಲುವು ಯಾರಿಗೆ?

ಗ್ಯಾಂಗ್‌ ಸ್ಟರ್‌ ಬಿಷ್ಣೋಯಿ ಹೆಸರಿನಿಂದ ಸಲ್ಮಾನ್‌ ಮನೆಯಿಂದ ಕ್ಯಾಬ್‌ ಬುಕ್: ಯುವಕ ಅರೆಸ್ಟ್

ಗ್ಯಾಂಗ್‌ ಸ್ಟರ್‌ ಬಿಷ್ಣೋಯಿ ಹೆಸರಿನಿಂದ ಸಲ್ಮಾನ್‌ ಮನೆಯಿಂದ ಕ್ಯಾಬ್‌ ಬುಕ್: ಯುವಕ ಅರೆಸ್ಟ್

Mother Geetha hiremath statement on daughter Neha incident

Hubli; ನನ್ನ ಮಗಳು ಹೊಲಸು ಕೆಲಸ ಮಾಡಿಲ್ಲ…: ನೇಹಾ ತಾಯಿ ಗೀತಾ ಹಿರೇಮಠ ಹೇಳಿಕೆ

8

Mollywood: ಈ ದಿನ ‘ಮಂಜುಮ್ಮೆಲ್ ಬಾಯ್ಸ್’ ಓಟಿಟಿಗೆ ಬರುವುದು ಖಚಿತ; ಯಾವುದರಲ್ಲಿ ಸ್ಟ್ರೀಮ್?

kl rahul breaks ms dhoni record in ipl

IPL 2024; ಎಂ.ಎಸ್ ಧೋನಿ ದಾಖಲೆ ಮುರಿದ ಕೆ.ಎಲ್ ರಾಹುಲ್

7-snake

Snake: 50 ಅಡಿ ಉದ್ದದ ದೈತ್ಯ ಹಾವು “ವಾಸುಕಿ’!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Fraud: ರೈಸ್‌ ಪುಲ್ಲಿಂಗ್‌ ಹೆಸರಿನಲ್ಲಿ ವಂಚನೆಗೆ ಯತ್ನ; 3 ಸೆರೆ, 69.79 ಲಕ್ಷ ವಶ

Fraud: ರೈಸ್‌ ಪುಲ್ಲಿಂಗ್‌ ಹೆಸರಿನಲ್ಲಿ ವಂಚನೆಗೆ ಯತ್ನ; 3 ಸೆರೆ, 69.79 ಲಕ್ಷ ವಶ

Crime: ಸ್ನೇಹಿತನನ್ನೇ ಕೊಲೆ ಮಾಡಿದ್ದ ನಾಲ್ವರು ಆರೋಪಿಗಳ ಸೆರೆ

Crime: ಸ್ನೇಹಿತನನ್ನೇ ಕೊಲೆ ಮಾಡಿದ್ದ ನಾಲ್ವರು ಆರೋಪಿಗಳ ಸೆರೆ

Bengaluru: ನಕಲಿ ಭೂ ದಾಖಲೆಗಳ ಸಲ್ಲಿಸಿ 22 ಬ್ಯಾಂಕಲ್ಲಿ 10 ಕೋಟಿ ಸಾಲ!

Bengaluru: ನಕಲಿ ಭೂ ದಾಖಲೆಗಳ ಸಲ್ಲಿಸಿ 22 ಬ್ಯಾಂಕಲ್ಲಿ 10 ಕೋಟಿ ಸಾಲ!

Glanders infection: ಗ್ಲ್ಯಾಂಡರ್ಸ್‌ ಸೋಂಕು; ಬೆಂಗಳೂರು ತೊರೆದ ಕುದುರೆ ಮಾಲೀಕ, ಸವಾರ

Glanders infection: ಗ್ಲ್ಯಾಂಡರ್ಸ್‌ ಸೋಂಕು; ಬೆಂಗಳೂರು ತೊರೆದ ಕುದುರೆ ಮಾಲೀಕ, ಸವಾರ

Chain theft: ಒಂಟಿ ಮಹಿಳೆಯರ ಸರ ಕದಿಯುತ್ತಿದ್ದ 5 ಬಂಧನ; 10.82 ಲಕ್ಷದ ವಸ್ತು ಜಪ್ತಿ

Chain theft: ಒಂಟಿ ಮಹಿಳೆಯರ ಸರ ಕದಿಯುತ್ತಿದ್ದ 5 ಬಂಧನ; 10.82 ಲಕ್ಷದ ವಸ್ತು ಜಪ್ತಿ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Gadag; ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಕೊಲೆಗಡುಕರೇ ಪ್ರಥಮ ಪ್ರಜೆಗಳು: ಬಸವರಾಜ ಬೊಮ್ಮಾಯಿ

Gadag; ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಕೊಲೆಗಡುಕರೇ ಪ್ರಥಮ ಪ್ರಜೆಗಳು: ಬಸವರಾಜ ಬೊಮ್ಮಾಯಿ

B. Y. Raghavendra: “ಕಾಂಗ್ರೆಸ್‌ ನಾಯಕರ ಮನಸ್ಥಿತಿಗೆ ತಕ್ಕಂತೆ “ಚೊಂಬು’ ಜಾಹೀರಾತು’

B. Y. Raghavendra: “ಕಾಂಗ್ರೆಸ್‌ ನಾಯಕರ ಮನಸ್ಥಿತಿಗೆ ತಕ್ಕಂತೆ “ಚೊಂಬು’ ಜಾಹೀರಾತು’

10-

Lok Sabha Election 2024: ಝಾರ್ಖಂಡ್‌, ಛತ್ತೀಸ್‌ಗಢದಲ್ಲಿ ಗೆಲುವು ಯಾರಿಗೆ?

ಗ್ಯಾಂಗ್‌ ಸ್ಟರ್‌ ಬಿಷ್ಣೋಯಿ ಹೆಸರಿನಿಂದ ಸಲ್ಮಾನ್‌ ಮನೆಯಿಂದ ಕ್ಯಾಬ್‌ ಬುಕ್: ಯುವಕ ಅರೆಸ್ಟ್

ಗ್ಯಾಂಗ್‌ ಸ್ಟರ್‌ ಬಿಷ್ಣೋಯಿ ಹೆಸರಿನಿಂದ ಸಲ್ಮಾನ್‌ ಮನೆಯಿಂದ ಕ್ಯಾಬ್‌ ಬುಕ್: ಯುವಕ ಅರೆಸ್ಟ್

Hubli; ಆಡಳಿತ ಪಕ್ಷದಿಂದಲೇ ತನಿಖೆ ದಾರಿ ತಪ್ಪಿಸುವ ಕೆಲಸ: ನೇಹಾ ತಂದೆ ನಿರಂಜನಯ್ಯ ಆರೋಪ

Hubli; ಆಡಳಿತ ಪಕ್ಷದಿಂದಲೇ ತನಿಖೆ ದಾರಿ ತಪ್ಪಿಸುವ ಕೆಲಸ: ನೇಹಾ ತಂದೆ ನಿರಂಜನಯ್ಯ ಆರೋಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.