ಸಾಹಿತ್ಯ ಹಾಗೂ ವೈದ್ಯ ವೃತ್ತಿ ಬದುಕಿನ ಎರಡು ಕಣ್ಣುಗಳು

Team Udayavani, Aug 20, 2017, 11:18 AM IST

girijamma.jpg

ಬೆಂಗಳೂರು: “ಸಾಹಿತ್ಯ ಮತ್ತು ವೈದ್ಯ ವೃತ್ತಿ ನನ್ನ ಬದುಕಿನ ಎರಡು ಕಣ್ಣುಗಳಿದ್ದಂತೆ. ಇವರೆಡನ್ನು ಜೀವನದ ಭಾಗವಾಗಿ ಸ್ವೀಕರಿಸಿಕೊಂಡಿದ್ದಕ್ಕೆ ಎರಡನ್ನೂ ಮುಂದುವರಿಸಿಕೊಂಡು ಬಂದಿದ್ದೇನೆ,’ ಎಂದು ವೈದ್ಯ ಹಾಗೂ ಸಾಹಿತಿ ಡಾ. ಎಚ್‌. ಗಿರಿಜಮ್ಮ ಅಬಿಪ್ರಾಯಪಟ್ಟರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಶನಿವಾರ ನಯನ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ “ಮನೆಯಂಗಳದಲ್ಲಿ ಮಾತುಕತೆ’ ಸಂವಾದ ಕಾರ್ಯಕ್ರಮದಲ್ಲಿ, ವೈದ್ಯ ವೃತ್ತಿಯ ಒತ್ತಡಗಳು ಮತ್ತು ಸಾಹಿತ್ಯದ ಭಾವನೆಗಳನ್ನು ಒಟ್ಟೊಟ್ಟಿಗೆ ಹೇಗೆ ನಿಭಾಯಿಸಿದಿರಿ ಎಂದು ಕೇಳಿದ್ದಕ್ಕೆ ಇದರಲ್ಲಿ ನಿಭಾಯಿಸುವ ಪ್ರಶ್ನೆ ಬರುವುದಿಲ್ಲ. ಒತ್ತಡಗಳ ಮಧ್ಯೆಯೇ ಏನನ್ನಾದರೂ ಸಾಧಿಸಲು ಸಾಧ್ಯ ಎಂದರು.

ನಾನು ಡಾಕ್ಟರ್‌ ಆಗಬೇಕು ಎಂದು ಅಮ್ಮನ ಆಸೆ ಆಗಿತ್ತು. ಅದರಂತೆ ಡಾಕ್ಟರ್‌ ಆದೆ. ಅಮ್ಮನಿಗೆ ಓದುವ ಆಸಕ್ತಿ ಹೆಚ್ಚಾಗಿತ್ತು, ನನ್ನನ್ನೂ ಓದಿಸುತ್ತಿದ್ದಳು, ಅಮ್ಮನಿಂದಲೇ ಸಾಹಿತ್ಯದ ಆಸಕ್ತಿ ಹುಟ್ಟಿಕೊಂಡಿತು. ಸಾಹಿತ್ಯ ಮತ್ತು ವೈದ್ಯ ವೃತ್ತಿ ನನ್ನ ಬದುಕಿನ ಎರಡು ಕಣ್ಣುಗಳಿದ್ದಂತೆ. ಇವರೆಡನ್ನು ಜೀವನದ ಭಾಗವಾಗಿ ಸ್ವೀಕರಿಸಿಕೊಂಡು ಬಂದಿದ್ದೇನೆ. ವೈದ್ಯೆ ಆಗಿದ್ದಕ್ಕೆ ನಾನು ಸಾಹಿತಿಯೂ ಆದೆ. ಡಾಕ್ಟರ್‌ ಆಗಿ ನಾನು ಯಾರಿಂದಲೂ ಹಣ ಪಡೆದಿಲ್ಲ.

ಹಣ ಕೇಳುವ ಮನಸ್ಸೂ ಬರುವುದಿಲ್ಲ. ಆದರೆ, ಒಂದು ಹೊತ್ತಿನ ಊಟಕ್ಕೂ ಪರದಾಡಿದ ಕುಟುಂಬ ನಮ್ಮದು. ಹಾಗಾಗಿ ನಾನು ಹಣ ಪಡೆಯದಿರುವ ಬಗ್ಗೆ ಅಮ್ಮನಿಗೆ ಬೇಸರ ತರುತ್ತಿತ್ತು. ನಾಳೆಯ ಚಿಂತೆ ಯಾಕೆ ಎಂದು ನಾನು ಅಮ್ಮನಿಗೆ ಸಂತೈಸುತ್ತಿದೆ. ನನ್ನ ಬಗ್ಗೆ ಕೀಳು ಅಪಪ್ರಚಾರ ಮಾಡಿದವರೇ ಇಂದು ಸತ್ಯದ ಅರಿವಾಗಿ ಪಶ್ಚತ್ತಾಪಡುತ್ತಿದ್ದಾರೆ ಎಂದು ಗಿರಿಜಮ್ಮ ತಮ್ಮ ಜೀವನದ ಗತವನ್ನು ಮೆಲಕು ಹಾಕಿದರು. 

ಯುವಕರು ಮೊಬೈಲ್‌ ಬಿಡಲಿ: ಮೊಬೈಲ್‌ ಇಂದು ಸೃಜನಶೀಲತೆಯನ್ನು ಕೊಂದು ಹಾಕುತ್ತಿದೆ. ಹಾಗಾಗಿ ಸಾಹಿತ್ಯದಲ್ಲಿ ಆಸಕ್ತಿ ಇರುವ ಯುವಕರು ಮೊದಲು ಮೊಬೈಲ್‌ ಬಿಡಬೇಕು. ವಾಟ್ಸ್‌ಪ್‌, ಟ್ವೀಟರ್‌ ಇತ್ಯಾದಿ ನಮ್ಮಲ್ಲಿನ ಸಾಹಿತ್ಯದ ಕ್ರೀಯಾಶೀಲತೆಯನ್ನು ನಾಶ ಮಾಡಿ ಬಿಡುತ್ತಿವೆ. ಹಾಗಾಗಿ ಯುವಕರು ಮೊಬೈಲ್‌ನಿಂದ ದೂರ ಇರಬೇಕು ಎಂದು ಇದೇ ವೇಳೆ ಗಿರಿಜಮ್ಮ ಕಿವಿಮಾತು ಹೇಳಿದರು.

ಟಾಪ್ ನ್ಯೂಸ್

Surjewala

BJP ಎಂದರೆ ಹೊಸ ಈಸ್ಟ್ ಇಂಡಿಯಾ ಕಂಪೆನಿ: ಸುರ್ಜೇವಾಲಾ ಕಿಡಿ

Kharge (2)

Kalaburagi; ಸತ್ತಾಗ ಮಣ್ಣಿಗಾದರೂ ಬನ್ನಿ: ಭಾವನಾತ್ಮಕವಾಗಿ ಮತಯಾಚಿಸಿದ ಖರ್ಗೆ

voter

Vote ಚಲಾಯಿಸಲು ಭಾರೀ ಸಂಖ್ಯೆಯಲ್ಲಿ ಬರುತ್ತಿರುವ ಕೇರಳ ಎನ್‌ಆರ್‌ಐಗಳು

ತಂಗಿಯ ಸಮಾಧಿ ಸ್ಥಳಕ್ಕೆ  ಭೇಟಿ ನೀಡುವುದನ್ನು ವ್ಲಾಗ್‌ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ

ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್‌ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ

ಹಳದಿ ಶಾಸ್ತ್ರದ ವೇಳೆ ವರನಿಗೆ ವಿದ್ಯುತ್ ಸ್ಪರ್ಶ… ಆಸ್ಪತ್ರೆ ದಾರಿಯಲ್ಲಿ ಕೊನೆಯುಸಿರು

ಹಳದಿ ಶಾಸ್ತ್ರದ ವೇಳೆ ವಿದ್ಯುತ್ ಸ್ಪರ್ಶ… ಆಸ್ಪತ್ರೆ ದಾರಿ ಮಧ್ಯೆ ಕೊನೆಯುಸಿರೆಳೆದ ವರ

Inheritance Tax:  ಸ್ಯಾಮ್‌ ಪಿತ್ರೋಡಾ ಹೇಳಿದ್ದೇನು-ಏನಿದು ಪಿತ್ರಾರ್ಜಿತ ತೆರಿಗೆ ಜಟಾಪಟಿ!

Inheritance Tax:  ಸ್ಯಾಮ್‌ ಪಿತ್ರೋಡಾ ಹೇಳಿದ್ದೇನು-ಏನಿದು ಪಿತ್ರಾರ್ಜಿತ ತೆರಿಗೆ ಜಟಾಪಟಿ!

Rahul Gandhi 3

U-turn ಹೊಡೆದ ರಾಹುಲ್: ಸಂಪತ್ತು ಹಂಚಿಕೆ ಬಗ್ಗೆ ಹೇಳಿಲ್ಲ,ಅನ್ಯಾಯ…

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್‌ ಸುಲಿಗೆ; ಮೂವರ ಬಂಧನ

Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್‌ ಸುಲಿಗೆ; ಮೂವರ ಬಂಧನ

Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ

Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ

Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್‌ ಬಾತ್ಮೀದಾರ ಸೆರೆ

Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್‌ ಬಾತ್ಮೀದಾರ ಸೆರೆ

Arrested: ಸುಲಿಗೆ ಸೇರಿ 42 ಕೇಸ್‌ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ

Arrested: ಸುಲಿಗೆ ಸೇರಿ 42 ಕೇಸ್‌ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ

Arrested: 17 ಕೇಸ್‌ನಲ್ಲಿ ಭಾಗಿಯಾಗಿದ್ದ ರೌಡಿಶೀಟರ್‌ ಬಂಧನ

Arrested: 17 ಕೇಸ್‌ನಲ್ಲಿ ಭಾಗಿಯಾಗಿದ್ದ ರೌಡಿಶೀಟರ್‌ ಬಂಧನ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

12-uv-fusion

UV Fusion: ಮಕ್ಕಳ ಆಸಕ್ತಿ ಹುಡುಕುವ ಕೆಲಸವಾಗಲಿ

Surjewala

BJP ಎಂದರೆ ಹೊಸ ಈಸ್ಟ್ ಇಂಡಿಯಾ ಕಂಪೆನಿ: ಸುರ್ಜೇವಾಲಾ ಕಿಡಿ

ಗದಗ: ಸೈಕ್ಲಿಂಗ್‌ ರಾಷ್ಟ್ರೀಯ ತರಬೇತಿ ಶಿಬಿರಕ್ಕೆ ಪವಿತ್ರಾ ಆಯ್ಕೆ

ಗದಗ: ಸೈಕ್ಲಿಂಗ್‌ ರಾಷ್ಟ್ರೀಯ ತರಬೇತಿ ಶಿಬಿರಕ್ಕೆ ಪವಿತ್ರಾ ಆಯ್ಕೆ

11-mallige

Bappanadu Durgaparameshwari: ಮಲ್ಲಿಗೆ ಪ್ರಿಯೆ ದೇವಿಗೆ ಲಕ್ಷ ಮಲ್ಲಿಗೆ ಶಯನೋತ್ಸವ

Kharge (2)

Kalaburagi; ಸತ್ತಾಗ ಮಣ್ಣಿಗಾದರೂ ಬನ್ನಿ: ಭಾವನಾತ್ಮಕವಾಗಿ ಮತಯಾಚಿಸಿದ ಖರ್ಗೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.