5 ನದಿ ಹುಟ್ಟುವ ಪಂಚಗಿರಿ ರಕ್ಷಿಸೋಣ ಬನ್ನಿ


Team Udayavani, Jan 14, 2017, 2:42 PM IST

Town-Hall-vijaykumar.jpg

ದೊಡ್ಡಬಳ್ಳಾಪುರ: ಪಂಚನದಿಗಳ ಉಗಮ ಸ್ಥಾನವಾದ ಪಂಚಗಿರಿ ಶ್ರೇಣಿ, ಕಾಡು, ನದಿಗಳನ್ನು ಸಂರಕ್ಷಿಸೋಣ ಎಂಬ ಘೋಷಣೆಯೊಂದಿಗೆ ನಂದಿಬೆಟ್ಟದ ಸಾಲಿನ ಚನ್ನಗಿರಿವರೆಗೆ ಬೆಂಗಳೂರಿನ ನಾಗಾರ್ಜುನ ಕಾಲೇಜಿನ ಎನ್‌ಎಸ್‌ಎಸ್‌ ವಿದ್ಯಾರ್ಥಿಗಳು ಸೈಕಲ್‌ ಜಾಥಾ ನಡೆಸಿ, ದಾರಿಯುದ್ದಕ್ಕೂ ಜಲ-ಜಾಗೃತಿ ಭಿತ್ತಿ ಫ‌ಲಕಗಳನ್ನು ಪ್ರದರ್ಶಿಸಿದರು. 

ಜಾಥಾದಲ್ಲಿ ಮಾತನಾಡಿದ ವಿದ್ಯಾರ್ಥಿಗಳು, ವಿಧಾನ ಸೌಧದ ಸ್ತಂಭಗಳಿಗೆ ಕಲ್ಲುಗಳನ್ನು ಕೊಟ್ಟ ಕೊಯಿರಾ ಬೆಟ್ಟ ಮತ್ತು ಅದರ ಸುತ್ತಲೂ ನಡೆಯುತ್ತಿರುವ ಅಕ್ರಮ ಮತ್ತು ಅವೈಜಾnನಿಕ ಗಣಿಗಾರಿಕೆಯಿಂದಾಗಿ ಸುತ್ತಲಿನ ಜನರ ಜೀವನ ನರಕವಾಗಿದೆ. ಈ ಅಕ್ರಮ ಚಟುವಟಿಕೆಗಳನ್ನು ಸರ್ಕಾರ ಈ ಕೂಡಲೇ ನಿಲ್ಲಿಸಲೇ ಬೇಕು.

ಪರಿಸರ ಪ್ರೇಮಿಗಳ ಹೋರಾಟಗಳಲ್ಲಿ ಸಕ್ರಿಯವಾಗಿ ಭಾಗವಹಿಸುವುದಾಗಿ ಹೇಳಿದರು. ಸೈಕಲ್‌ ಜಾಥಾ ಸಮಾರೋಪ ಕಾರ್ಯಕ್ರಮದಲ್ಲಿ  ಮಾತನಾಡಿದ ಗ್ರಾಮ ಪಂಚಾಯಿತಿ ಸದಸ್ಯ ರಾಜಣ್ಣ, ಪಂಚಗಿರಿ ಶ್ರೇಣಿಗಳಲ್ಲಿ ಅರ್ಕಾವತಿ ಉತ್ತರಪಿನಾಕಿನಿ, ದಕ್ಷಿಣ ಪಿನಾಕಿನಿ, ಚಿತ್ರಾವತಿ, ಪಾಪಾಗ್ನಿ ಐದು ನದಿಗಳ ಉಗಮ ಸ್ಥಾನವಾಗಿದೆ.

ಈ ಬೆಟ್ಟಗಳ ಮೂಲದಲ್ಲಿಯೇ ಅಕ್ರಮ ಮತ್ತು ಅವೈಜಾnನಿಕ ಗಣಿಗಾರಿಕೆ ನಡೆಯುತ್ತಿದ್ದು, ಇದನ್ನು ಸರ್ಕಾರ ಈ ಕೂಡಲೇ ನಿಲ್ಲಿಸಬೇಕು ಎಂದು ಆಗ್ರಹಿಸಿದರು. ಪಂಚಗಿರಿ ಭಾಗದಲ್ಲಿ ಅಲ್ಪ-ಸ್ವಲ್ಪ ಕಾಡು ಇನ್ನೂ ಇರುವುದರಿಂದಲೇ ನಾವು ನೆಮ್ಮದಿಯಾಗಿ ಉಸಿರಾಡಲು ಸಾಧ್ಯವಾಗುತ್ತಿದೆ.

ಕಾಡು, ಬೆಟ್ಟ, ನದಿ ಸಂರಕ್ಷಣೆ ಬರೀ ಇಲಾಖೆಗಳ ಜವಾಬ್ದಾರಿಯಷ್ಟೇ ಅಲ್ಲ ಅದು ನಮ್ಮ ಜವಾಬ್ದಾರಿಯೂ ಆಗಿದೆ, ಈ ಭಾಗದಲ್ಲಿ ಬೆಟ್ಟ-ಕಾಡು ಸಂರಕ್ಷಿತ ವಾಗಿರುವುದರಿಂದ ನವಿಲು, ಮೊಲ, ಕಾಡುಹಂದಿ ಸೇರಿದಂತೆ ಪ್ರಾಣಿ ಪಕ್ಷಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿರುವುದು ಸಂತಸದ ವಿಷಯ.

ಯುವಜನರು ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು ಎಂದು ಕರೆ ನೀಡಿದರು. ನಾಗಾರ್ಜುನ ಕಾಲೇಜಿನ ಉಪನ್ಯಾಸಕ ಪ್ರತಾಪ ಲಿಂಗಯ್ಯ ಮಾತನಾಡಿ, ವಿದ್ಯಾರ್ಥಿಗಳು ನಂದಿಬೆಟ್ಟ, ಚನ್ನಗಿರಿ ಹಾಗೂ ಬ್ರಹ್ಮಗಿರಿ ಬೆಟ್ಟಗಳ ನಡುವೆ ಸಂಚರಿಸುವ ಮೂಲಕ ಇಲ್ಲಿನ ಪರಿಸರವನ್ನು ಸೂಕ್ಷ್ಮವಾಗಿ ಗಮನಿಸಿದ್ದಾರೆ.

ಬೆಟ್ಟದ ತಪ್ಪಲಿನಲ್ಲಿ ಕೆಲವು ಕಡೆ ಅರಣ್ಯ ಒತ್ತುವರಿ ಮತ್ತು ಕೆರೆ ಕಾಲುವೆಗಳ ಒತ್ತುವರಿಯಾಗಿರುವುದು ಮೇಲ್ನೋಟಕ್ಕೆ ಕಂಡುಬರುತ್ತದೆ. ಸೂಕ್ತ ರೀತಿಯಲ್ಲಿ ಸರ್ವೇ ನಡೆಸಿ ಒತ್ತುವರಿ ತೆರವುಗೊಳಿಸಬೇಕಾಗಿದೆ ಎಂದರು.

ಜೊತೆಗೆ ಇಡೀ ಬೆಟ್ಟಗಳಲ್ಲಿ ಯಥೇತ್ಛವಾಗಿರುವನೀಲಗಿರಿಯನ್ನು ತೆಗೆದು ವನ್ಯ ಪ್ರಾಣಿಗಳಿಗೆ ಆಹಾರ ನೀಡುವ ಸ್ಥಳೀಯ ಜಾತಿಯ ಮರಗಳ ಅರಣ್ಯೀಕರಣ ಮತ್ತು ವನ್ಯ ಜೀವಿಗಳಿಗೆ ನೀರು ಸಿಗಲು ಸಾಧ್ಯವಾಗುವಂತೆ ಜಲಸಂರಕ್ಷಣಾ ಚಟುವಟಿಕೆಗಳನ್ನು ಕೈಗೊಳ್ಳಬೇಕೆಂದು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಕಾಲೇಜಿನ ವತಿಯಿಂದ ಮನವಿ ಸಲ್ಲಿಸಲಾಗುವುದು ಎಂದರು.

ಯುವ ಸಂಚಲನ ಬಳಗದ ಚಿದಾನಂದಮೂರ್ತಿ ಮಾತನಾಡಿ, ನಂದಿಗಿರಿ ಶ್ರೇಣಿಯ ಚನ್ನಗಿರಿಬೆಟ್ಟದಲ್ಲಿ ಹಿಂದೆ ನಡೆಯುತ್ತಿದ್ದ ಅಕ್ರಮ  ಗಣಿಗಾರಿಕೆ ನಿಂತುಹೋಗಿ ಬೆಟ್ಟ ರಕ್ಷಣೆಯಾದ ಪರಿಣಾಮ ಕೇವಲ 10 ವರ್ಷಗಳಲ್ಲೇ ಚನ್ನಗಿರಿ ಬೆಟ್ಟದಲ್ಲಿ ಮಳೆಗಾಲದ ಸಮಯದಲ್ಲಿ ನಮಗೆ ಇಲ್ಲೆ ಮಲೆನಾಡಿನಂತಾ ಸೊಬಗನ್ನು ನೋಡಲು ಸಾಧ್ಯವಾಗಿದೆ.

ಇಲ್ಲಿಗೆ ಪ್ರಕೃತಿ ಪ್ರೇಮಿಗಳು ಬರುವುದರ ಜೊತೆಗೆ ಇಲ್ಲಿನ ಪರಿಸರ ಹಾಳು ಮಾಡುವ ಕುಡುಕರ ಹಾವಳಿಯು ಹೆಚ್ಚಾಗಿದೆ. ಇದಕ್ಕೆ ಇಲಾಖೆ ಸೂಕ್ತ ಕ್ರಮ ಕೈಗೊಂಡು ಬೆಟ್ಟವನ್ನು ಉಳಿಸಬೇಕೆಂದರು. ಪರಿಸರ ಉಳಿಸುವ ಜವಾಬ್ದಾರಿ ಬರೀ ಯುವಜನರ ಮೇಲಿದೆ ಅಂತ ಮಾತನಾಡುವ ಹಿರಿಯರೇ ಪರಿಸರವನ್ನು ಹಾಳು ಮಾಡಿದ್ದಾರೆ.

ಹಾಗಾಗಿ ಇದರ ಉಳಿಸುವ ಜವಾಬ್ದಾರಿಯೂ ಅವರ ಮೇಲೆಯೂ ಇದೆ. ಈ ಬೆಟ್ಟ, ಕಾಡುಗಳು ಉಳಿಯದಿದ್ದರೆ ಇತ್ತೀಚೆಗೆ ವಾಯು ಮಾಲಿನ್ಯದಿಂದಾಗಿ ದೆಹಲಿಯಲ್ಲಿ ವಾರಗಟ್ಟಲೇ ಶಾಲೆಗಳಿಗೆ ರಜಾ ಕೊಟ್ಟ ಹಾಗೇ ನಮ್ಮಲ್ಲೂ ಆಗುವ ಕಾಲ ದೂರವಿಲ್ಲ ಎಂದರು. ಅರ್ಕಾವತಿ ನದಿ ಪುನಶ್ಚೇತನ ಆಂದೋಲನದ ಕಾರ್ಯಕರ್ತರಾದ ಜಿ.ಮಂಜುನಾಥ, ಮಡಕುಹೊಸಹಳ್ಳಿ ಗ್ರಾಮಸ್ಥರು ಭಾಗವಹಿಸಿದ್ದರು.   

ಟಾಪ್ ನ್ಯೂಸ್

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

MONEY (2)

Mysuru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89 ಲಕ್ಷ ರೂ. ವಶಕ್ಕೆ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೇಸಿಗೆ ಬಿಸಿಯೂಟ: 32,173 ಮಕ್ಕಳ ನೋಂದಣಿ

ಬೇಸಿಗೆ ಬಿಸಿಯೂಟ: 32,173 ಮಕ್ಕಳ ನೋಂದಣಿ

Devanahalli: ಬೇಸಿಗೆ ತಾಪಮಾನ ಹೆಚ್ಚಳ, ಇರಲಿ ಎಚ್ಚರ

Devanahalli: ಬೇಸಿಗೆ ತಾಪಮಾನ ಹೆಚ್ಚಳ, ಇರಲಿ ಎಚ್ಚರ

Doddaballapur: ಜಾತೀಯತೆಗೆ ಮಣೆ ಹಾಕದ ಕ್ಷೇತ್ರದ ‌ಮತದಾರರು

Doddaballapur: ಜಾತೀಯತೆಗೆ ಮಣೆ ಹಾಕದ ಕ್ಷೇತ್ರದ ‌ಮತದಾರರು

Lok Sabha polls: ಲೋಕಸಭೆ ಚುನಾವಣೆಯಲ್ಲಿ ಇಂದಿರಾಗಾಂಧಿ ನೆನಪು

Lok Sabha polls: ಲೋಕಸಭೆ ಚುನಾವಣೆಯಲ್ಲಿ ಇಂದಿರಾಗಾಂಧಿ ನೆನಪು

10

Electricity problem: ಬೇಸಿಗೆ ಬೆನ್ನಲ್ಲೇ ಕಾಡುತ್ತಿದೆ ವಿದ್ಯುತ್‌ ಸಮಸ್ಯೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

1-MB

Note Ban ವೇಳೆ ಮಹಿಳೆಯರು ಮಂಗಳಸೂತ್ರ ಅಡವಿಟ್ಟಾಗ ಮೋದಿ ಮೌನ: ಭಂಡಾರಿ

Exam

Udupi; ಪಿಯುಸಿ ಪರೀಕ್ಷೆ-2 : ನಿಷೇಧಾಜ್ಞೆ ಜಾರಿ

IMD

Dakshina Kannada ಜಿಲ್ಲೆಯಲ್ಲಿ ಮುಂದುವರಿದ ಉರಿಬಿಸಿಲು:ಮಳೆಯ ಮುನ್ಸೂಚನೆ ಇಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.