ವಿಜಯಪುರ: ಮಹಿಳೆಯೊಂದಿಗೆ ಸೆಕ್ಸ್; ಫೇಸ್ಬುಕ್ ಲೈವ್ ಮಾಡಿದ್ರು!!
Team Udayavani, Jul 22, 2017, 2:47 PM IST
ವಿಜಯಪುರ: ಎಲ್ಲೋ ವಿದೇಶದಲ್ಲಿ ನಡೆಯುವಂತಹ ಹೇಯ ಘಟನೆ ನಮ್ಮ ಕರ್ನಾಟಕದಲ್ಲೂ ನಡೆದಿದ್ದು, ಕಾಮುಕರಿಬ್ಬರು ಮಾಡಬಾರದನ್ನು ಮಾಡಿ ಜೈಲು ಪಾಲಾಗಿದ್ದಾರೆ. ಹಾಡಹಗಲೇ ಮಹಿಳೆಯೊಬ್ಬಳೊಂದಿಗೆ ಸೆಕ್ಸ್ನಡೆಸಿ ಫೇಸ್ ಬುಕ್ ಲೈವ್ ಮಾಡಿ ಕಾಮುಕರಿಬ್ಬರು ಪೊಲೀಸರ ಅತಿಥಿಗಳಾಗಿದ್ದಾರೆ.
ಇಂಡಿಯ ಹೊರ್ತಿ ಎಂಬಲ್ಲಿ ಬಸವರಾಜ ನಾಗರಾಜ ಗಡೆದ ಎಂಬಾತ ಹಾಡಹಗಲೇ ಮಹಿಳೆಯೊಬ್ಬಳೊಂದಿಗೆ ಲೈಂಗಿಕ ಕ್ರಿಯೆ ನಡೆಸಿದ್ದು, ಆತನ ಸ್ನೇಹಿತ ರೇವಪ್ಪ ಬಸಪ್ಪ ಭೋಸಿ ಎಂಬಾತ ಫೇಸ್ಬುಕ್ನಲ್ಲಿ ಲೈವ್ ಮಾಡಿದ್ದಾನೆ. ಈ ವಿಡಿಯೋವನ್ನು ಸಾವಿರಾರು ಜನ ವೀಕ್ಷಿಸಿದ್ದು ವೈರಲ್ ಆಗಿದೆ.
ಈ ವಿಚಾರ ಗಮನಕ್ಕೆ ಬರುತ್ತಿದ್ದಂತೆ ಹೊರ್ತಿ ಪೊಲೀಸರು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡು ಕಾಮುಕರಿಬ್ಬರನ್ನು ವಶಕ್ಕೆ ಪಡೆದಿದ್ದಾರೆ.