ಅಂಗಲಿಂಗದ ನುಡಿಗಳು ಮನ ಅರಳಿಸುವಂತಿರಲಿ


Team Udayavani, Aug 21, 2017, 1:17 PM IST

vij 7.jpg

ತಾಳಿಕೋಟೆ: ಸ್ಥಳೀಯ ಬಸವ ಸಮಿತಿಯ ವತಿಯಿಂದ ಶ್ರಾವಣ ಮಾಸದ ಪ್ರಯುಕ್ತ ಕಳೆದ 17 ದಿನಗಳಿಂದ ನಡೆಸಿಕೊಂಡು ಬರಲಾಗುತ್ತಿದ್ದ ಮನೆಯಂಗಳದಿಂದ ಮನದಂಗಳಕ್ಕೆ ವಚನ ಸಂದೇಶ ಕಾರ್ಯಕ್ರಮ ಮಹಾಮಂಗಲಗೊಂಡಿತು. ಬಸವ ಸಮಿತಿಯ ಅನುಭವ ಮಂಟಪದಲ್ಲಿ ಏರ್ಪಡಿಸಲಾದ ಈ ಮಹಾಮಂಗಲ
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಹಣಮಸಾಗರದ ಡಾ|ರಾಜಶೇಖರ ಚಿರಚನಕಲ್ಲ ಮಾತನಾಡಿ, ಹಿಂದಿನ ಕಾಲದಲ್ಲಿ ಶರಣರು ಮುಟ್ಟಿದರೆ ಲಿಂಗವೆಂಬ ಗೊಂಚಲಗಳು ಕಾಣುತ್ತಿದ್ದವು. ಮಾನವ ಅಂಗವಿಕಾರಗಳನ್ನು ಅಳೆದುಕೊಂಡಿದ್ದಾನೆ. ಕಾರಣ ಮಾನವ ನಿರ್ವಚನವಾಗಬೇಕು ಅಂದರೆ ಮಹಾಮನಿಯಾಗುತ್ತದೆ ಎಂದರು. ಜನ್ಮಾಂತರದಿಂದಲೂ ಅನೇಕ ವಿಷಯಗಳು ಮಾನವನಲ್ಲಿ ತುಂಬಿಕೊಂಡಿವೆ. ಜ್ಞಾನವೆಂಬ ವಚನಗಳನ್ನು ಅಳವಡಿಸಿಕೊಂಡರೆ ಮನವೆಂಬುದು ಅರಳುತ್ತದೆ ಎಂದರು. ಮನುಷ್ಯರಾದ ನಮ್ಮಲ್ಲಿ ಕೈಯಲ್ಲಿ, ಕಣ್ಣಲ್ಲಿ ಹಾಗೂ ಕಿವಿಯಲ್ಲಿ ಇಡೀ ಅಂಗದಲ್ಲಿ ಕೆಲಸ ತುಂಬಿಕೊಂಡರೆ ಹೂವಿನಂತೆ ಮನಸ್ಸು ಅರಳುತ್ತದೆ ಎಂದರು. ಮಾತನಾಡುವಲ್ಲಿ
ಬೆಳಕು ಆಗಬೇಕು. ಮಾತನಾಡಿದಲ್ಲಿ ಹೊಟ್ಟೆತುಂಬುವಂತಾಗಬೇಕು ಎಂದರು. ಶರಣರು ಮಾತನಾಡಿದರೆ ಮನಸ್ಸು ಬಿಚ್ಚಿ ಮಾತನಾಡುತ್ತಿದ್ದರು. ಹೃದಯ ಬಿಚ್ಚಿ ಮಾತನಾಡಬೇಕು ಅಂಗಲಿಂಗದ ನುಡಿಗಳು ಮನವನ್ನು ಅರಳಿಸುವಂತಿರಬೇಕು. ಸತ್ಯವಂತರ ಮಹಾತ್ಮರ ಸಂಘ ಸತ್ಸಂಗ ನಡೆಯುತ್ತಿದುದ್ದನ್ನು ಅರಿತರೆ ಮಾಡಿದ ಪಾಪ ನಾಶವಾಗುತ್ತದೆ ಎಂದು ಹೇಳಿದರು. ಅಧ್ಯಕ್ಷತೆ ವಹಿಸಿದ ಗಡಿಸೋಮನಾಳ ಹಿರೇಮಠದ ಶ್ರೀ ಇಂದುದರ ಸ್ವಾಮೀಜಿ
ಮಾತನಾಡಿ, 17 ದಿನಗಳಲ್ಲಿ ಬಸವಸಮಿತಿಯ ವತಿಯಿಂದ ನಡೆಸಿಕೊಂಡು ಬಂದ ವಚನಶ್ರಾವಣ ಕಾರ್ಯಕ್ರಮವು ಮಹತ್ವದ ಕಾರ್ಯಕ್ರಮವಾಗಿದೆ. ಕಾರ್ಯಕ್ರಮದಲ್ಲಿ ಅನೇಕ ಶರಣರು ಅನುಭಾವಿಗಳು ತಮ್ಮ ವಿಚಾರವನ್ನು ಮಂಡಿಸಿ ಸನ್ಮಾರ್ಗ ತೋರಿಸಿದ್ದಾರೆ ಎಂದರು. ಪ್ರಸಾದ ವ್ಯವಸ್ಥೆ ಮಾಡಿದ ಉಮಾ ಘೀವಾರಿ ಅವರಿಗೆ ಶಾಂತಾಬಾಯಿ ಸರನಾಡಗೌಡ ಅವರು ಗ್ರಂಥ ಸಮರ್ಪಣೆ ಮಾಡಿದರು. ಇದೇ ಸಮಯದಲ್ಲಿ ಸಂಗೀತ ಸೇವೆ ಸಲ್ಲಿಸಿದ ಕಲಾಶ್ರೀ ಪ್ರಶಸ್ತಿ ಪುರಸ್ಕೃತ ಎ.ಎಸ್‌. ವಠಾರ ಅವರಿಗೆ ಹಾಗೂ ಶ್ರೀನಿವಾಸ ಬಸಂತಪುರ, ಮಲ್ಲಿಕಾರ್ಜುನ ನಾವಿ ಅವರನ್ನು ಸನ್ಮಾನಿಸಲಾಯಿತು.ದೀಪಕಸಿಂಗ್‌ ಹಜೇರಿ ಸಂಗೀತ ಸೇವೆ ಸಲ್ಲಿಸಿದರು. ಬಸವ ಸಮಿತಿಯ ಅಧ್ಯಕ್ಷ ಪ್ರಕಾಶ ಕಶೆಟ್ಟಿ,
ಬಸವರಾಜ ಬಾಗೇವಾಡಿ, ಕಾಶಿನಾಥ ಮುರಾಳ, ಮಲ್ಲಿಕಾರ್ಜುನ ಹಿಪ್ಪರಗಿ, ಎಸ್‌.ಎಸ್‌. ಅಲೇಗಾವಿ, ಜಿ.ಎಸ್‌.ಜಂಬಲದಿನ್ನಿ, ಜಿ.ಎಂ.ಘೀವಾರಿ ಉಪಸ್ಥಿತರಿದ್ದರು.

ಟಾಪ್ ನ್ಯೂಸ್

1-qqwqe

Janardhana Poojary; ನನ್ನ ಜೀವಿತಾವಧಿಯಲ್ಲಿಯೇ ಶಿಷ್ಯ ಪದ್ಮರಾಜ್‌ ಗೆಲುವು ಕಾಣುವಾಸೆ..

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

IPL 2024; Chahal’s 200-wicket haul; First bowler to achieve this feat

IPL 2024; ಚಹಲ್‌ 200 ವಿಕೆಟ್‌ಗಳ ಕಮಾಲ್‌; ಈ ಸಾಧನೆಗೈದ ಮೊದಲ ಬೌಲರ್‌

Mangalore University; ಪದವಿಗೆ ಸೇರಲು 4 ತಿಂಗಳು ಕಾಯಬೇಕು!

Mangalore University; ಪದವಿಗೆ ಸೇರಲು 4 ತಿಂಗಳು ಕಾಯಬೇಕು!

Andhra ಟಿಡಿಪಿ ಅಭ್ಯರ್ಥಿ ಆಸ್ತಿ ಬರೋಬ್ಬರಿ 5,785 ಕೋ.ರೂ.!

Andhra ಟಿಡಿಪಿ ಅಭ್ಯರ್ಥಿ ಆಸ್ತಿ ಬರೋಬ್ಬರಿ 5,785 ಕೋ.ರೂ.!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

13-

Muddebihal: ಅಪರಿಚಿತ ವಾಹನ ಡಿಕ್ಕಿ: ಯುವಕ ಸಾವು

Vijayapura; Complaint to Election Commission against Yatnal: Shivananda Patil

Vijayapura; ಯತ್ನಾಳ್ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು: ಶಿವಾನಂದ ಪಾಟೀಲ

Vijayapura; ಚುನಾವಣಾ ಬಾಂಡ್ ತನಿಖೆಯಾದರೆ ಮೋದಿ ಜೈಲಿಗೆ: ಎಂ.ಬಿ. ಪಾಟೀಲ್

Vijayapura; ಚುನಾವಣಾ ಬಾಂಡ್ ತನಿಖೆಯಾದರೆ ಮೋದಿ ಜೈಲಿಗೆ: ಎಂ.ಬಿ. ಪಾಟೀಲ್

1-wqqw

Vijayapura: ಬಿರುಗಾಳಿ-ಸಿಡಿಲ ಅಬ್ಬರದ ಮಳೆಯ ಅವಾಂತರ

Lok Sabha Polls; ಎ. 26: ವಿಜಯಪುರಕ್ಕೆ ರಾಹುಲ್‌ ಗಾಂಧಿ 

Lok Sabha Polls; ಎ. 26: ವಿಜಯಪುರಕ್ಕೆ ರಾಹುಲ್‌ ಗಾಂಧಿ 

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

1-C-brijesh

Dakshina Kannada; ಕ್ಯಾಪ್ಟನ್‌ ಬ್ರಿಜೇಶ್‌ ಚೌಟರ ‘ನವಯುಗ-ನವಪಥ’ ಕಾರ್ಯಸೂಚಿ

1-qqwqe

Janardhana Poojary; ನನ್ನ ಜೀವಿತಾವಧಿಯಲ್ಲಿಯೇ ಶಿಷ್ಯ ಪದ್ಮರಾಜ್‌ ಗೆಲುವು ಕಾಣುವಾಸೆ..

1-JP-H

Jayaprakash Hegde: ಎಲ್ಲ ವರ್ಗದ ಜನರ ಆಶೋತ್ತರಗಳಿಗೆ ಸ್ಪಂದಿಸುವ ಸಾಮರ್ಥ್ಯ ಇನ್ನೂ ಇದೆ

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.