ಐಸಿಸ್ ನಂಟು: ಬಾಲಕ ಸೇರಿ 9 ಮಂದಿ ಸೆರೆ
Team Udayavani, Jan 24, 2019, 12:30 AM IST
ಹೊಸದಿಲ್ಲಿ: ಕುಖ್ಯಾತ ಅಂತಾರಾಷ್ಟ್ರೀಯ ಭಯೋತ್ಪಾದಕ ಸಂಘಟನೆಯಾದ ಐಸಿಸ್ ಜತೆಗೆ ನಂಟು ಹೊಂದಿರುವ ಆರೋಪದಡಿ ಮಹಾರಾಷ್ಟ್ರದ ಭಯೋತ್ಪಾದಕ ನಿಗ್ರಹ ದಳ (ಎಟಿಎಸ್), ಬುಧವಾರ, 17 ವರ್ಷದ ಬಾಲಕ ಸೇರಿದಂತೆ ಶಂಕಿತ ಒಂಭತ್ತು ವ್ಯಕ್ತಿಗಳನ್ನು ಬಂಧಿಸಲಾಗಿದೆ. ಹಲವಾರು ದಿನಗಳಿಂದ ಇವರ ಮೇಲೆ ನಿಗಾ ವಹಿಸಿದ್ದ ಎಟಿಎಸ್, ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಇವರನ್ನು ಬಂಧಿಸಿದೆ. ಮುಂಬಾ, ಥಾಣೆ ಮತ್ತು ಔರಂಗಾಬಾದ್ ಸೇರಿದಂತೆ ಒಟ್ಟು 5 ಸ್ಥಳಗಳಲ್ಲಿ ದಾಳಿ ನಡೆಸಲಾಗಿತ್ತು. ಔರಂಗಾ ಬಾದ್ನಲ್ಲಿ ನಾಲ್ವರನ್ನು ಬಂಧಿಸಲಾಗಿದ್ದರೆ, ಮುಂಬ್ರಾದಲ್ಲಿ ಐವರನ್ನು ಸೆರೆ ಹಿಡಿಯಲಾಗಿದೆ. ಬಂಧಿತರ ಗುಂಪು, ಐಎಸಿಸ್ ಸಂಘಟನೆಯ ಸ್ಲಿಪರ್ ಸೆಲ್ಗಳಂತೆ ಕೆಲಸ ಮಾಡುತ್ತಿತ್ತೇ ಎಂಬುದರ ಬಗ್ಗೆ ವಿಚಾರಣೆ ನಡೆಸಲಾಗುವುದು ಎಂದು ಎಟಿಎಸ್ ತಿಳಿಸಿದೆ. ಬಂಧಿತರಲ್ಲಿ ಇಬ್ಬರು ಸಹೋದರರೂ ಇದ್ದು, ಇವರು ಬೆಂಗಳೂರಿನಲ್ಲಿ ಮದುವೆಯೊಂದರಲ್ಲಿ ಪಾಲ್ಗೊಂಡು ಭಾನುವಾರವಷ್ಟೇ ಮಹಾರಾಷ್ಟ್ರಕ್ಕೆ ಹಿಂದಿರುಗಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!
Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು
Lok Sabha 1 Phase: ನಿತಿನ್ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…
Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ
Stones Pelted: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ