ರಮಿಸಲು ಹೋಗಿ ಮಾಡಿಕೊಂಡ ಎಡವಟ್ಟು
Team Udayavani, Jan 29, 2017, 4:58 AM IST
ಗಂಡಸರ ಕಚ್ಚೆ ಗಟ್ಟಿಯಿರಬೇಕೆನ್ನುವುದು ಹಳ್ಳಿ ಕಡೆಯಲ್ಲಿ ಚಾಲ್ತಿಯಿರುವ ಮಾತು. ಅದು ಗಟ್ಟಿಯಿರದಿದ್ದರೆ ಏನಾಗುತ್ತದೆ ಎನ್ನುವುದಕ್ಕೆ ಇಲ್ಲಿದೆ ಉದಾಹರಣೆ.
ಈ ಘಟನೆ ನಡೆದಿದ್ದು ಅಮೆರಿಕದ ಮಿಯಾಮಿಯಲ್ಲಿ. ಬಾರೊಂದರಲ್ಲಿ ಪಾರ್ಟಿ ಮುಗಿಸಿ ಹೋಟೆಲ್ಗೆ ಹೊರಟಿದ್ದ ಕೆನಡಾ ದೇಶದ ಮಾಲಿ ಎಂಬಾತ ಟ್ಯಾಕ್ಸಿಗಾಗಿ ಕಾಯುತ್ತಾ ನಿಂತಿದ್ದರು. ಆಗಷ್ಟೇ ಭೇಟಿಯಾದ ಚೆಲುವೆ ವನೆಗಾಸ್, ನಿನ್ನ ಹೋಟೆಲ್ ಕೊಠಡಿಯಲ್ಲಿ “ಎಣ್ಣೆ’ ಸಿಗುತ್ತಾ ಎಂದು ಕೇಳಿದ್ದಾಳೆ. ಅಷ್ಟಕ್ಕೇ ಖುಷಿಯಾದ ಆತ ಹಬ್ಬ ಮಾಡುವ ಉತ್ಸಾಹದಲ್ಲಿ ಕೊಲಂಬಿಯಾದ ಚೆಲುವೆಯನ್ನು ಹೋಟೆಲ್ನಲ್ಲಿ ಕರೆದೊಯ್ದಿದ್ದಾನೆ. ಅಲ್ಲಿ ನಡೆದಿದ್ದೇ ಬೇರೆ.
ಆಕೆ ಅವನನ್ನು ಮುಟ್ಟಲಿಕ್ಕೂ ಬಿಡಲಿಲ್ಲ. ಬದಲಿಗೆ ಅವನ ಬೆಲೆ ಬಾಳುವ ರೋಲೆಕ್ಸ್ ವಾಚು ಎತ್ತಿಕೊಂಡು ಪರಾರಿಯಾಗಿದ್ದಾಳೆ.ಹುಡುಗಿ ಕೈತಪ್ಪಿದ್ದು, ವಾಚೂ ಹೋಗಿದ್ದು ಎರಡೆರಡು ಸಿಟ್ಟು ಇದ್ದಿದ್ದರಿಂದ ಮಾಲಿØ ಆಕೆಯನ್ನು ಓಡಿಸಿ ಹಿಡಿದು ಪೊಲೀಸರಿಗೊಪ್ಪಿಸಿದ್ದಾನೆ. ತನಿಖೆಯಲ್ಲಿ ಆಕೆ ಇಂತಹ ಹಲವು ಕಳವು ಮಾಡಿದ ಕಲಾವಿದೆ ಎಂದು ಗೊತ್ತಾಗಿದೆ.