Updated at Wed,23rd Aug, 2017 7:45PM IST
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಪರಾಗಸ್ಪರ್ಶಕ್ಕೂ ಬಂತು ರೊಬೋಟ್‌

ಹೂವಿನ ಪರಾಗಸ್ಪರ್ಶ ಪ್ರಕೃತಿ ಸಹಜ ಕ್ರಿಯೆ. ಮಾನವ ತಲೆಹಾಕುವಂಥಾದ್ದೇನೂ ಇಲ್ಲ. ಜೇನುನೊಣ, ಚಿಟ್ಟೆಗಳು ಇತರ ಸಣ್ಣ ಪತಂಗ ಜಾತಿ ಜೀವಿಗಳೇ ಇವುಗಳನ್ನು ಮಾಡಿ ಮುಗಿಸುತ್ತುವೆ. ಈ ಮೂಲಕ ಆಹಾರ ಸರಪಳಿ ವೃದ್ಧಿಯಲ್ಲಿ ನೆರವಾಗುತ್ತದೆ.

ಇದೀಗ ನೊಣ-ಪತಂಗ ರೀತಿ ಪರಾಗಸ್ಪರ್ಶ ಮಾಡುವ ಹೊಸ ಮಾದರಿಯ ರೊಬೋಟ್‌ ಒಂದನ್ನು ಆವಿಷ್ಕರಿಸಲಾಗಿದೆ. ಇದನ್ನು ಅಮೆರಿಕದ ವಿದ್ಯಾರ್ಥಿಯೊಬ್ಬ ಆವಿಷ್ಕರಿಸಿದ್ದು, ಭವಿಷ್ಯದಲ್ಲಿ ಹೂವಿನ ಪರಾಗಸ್ಪರ್ಶಕ್ಕೆ ನೆರವು ಕೊಡುವ ಯೋಜನೆಯೂ ಇದೆ.

ಅಮೆರಿಕವೊಂದನ್ನೇ ತೆಗೆದುಕೊಂಡರೆ ಸುಮಾರು 15 ಲಕ್ಷ ಕೋಟಿ ಬೆಲೆಯ ಆಹಾರ ಸರಪಳಿಗೆ ಜೇನ್ನೊಣಗಳೇ ಪರಾಗಸ್ಪರ್ಶ ಮಾಡುತ್ತವಂತೆ. ಆದರೆ ಬದಲಾದ ಸಂದರ್ಭ, ಹಿಂದಿನಂತೆ ಈಗೀಗ ಪರಾಗಸ್ಪರ್ಶ ಕೆಲಸಗಳು ಆಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಜೇನ್ನೊಣಗಳು ಹೇಗೆ ಪರಾಗಸ್ಪರ್ಶ ಮಾಡುತ್ತವೆ. ಹೇಗೆ ಹೂವಿನಲ್ಲಿನ ಜೇನಿನ ಬಗ್ಗೆ ಸಂದೇಶ ರವಾನಿಸುತ್ತದೆ ಎಂಬ ಕುರಿತ ಕುತೂಹಲದ ಶೋಧ ವಿದ್ಯಾರ್ಥಿಯನ್ನು "ಪ್ಲಾನ್‌ ಬೀ' ಹೆಸರಿನ ರೊಬೋಟ್‌ ಮಾಡಲು ಪ್ರೇರೇಪಿಸಿದೆ.

ಪರಿಣಾಮ ಎರಡು ಪುಟ್ಟ ರೆಕ್ಕೆಗಳುಳ್ಳ, ಕೆಳಭಾಗದಲ್ಲಿ ಸ್ಪಾಂಜ್‌ರೀತಿಯ ವಸ್ತು ಅಳವಡಿಸಿ ಪರಾಗ ಹೀರುವಂತೆ ರೊಬೋಟ್‌ ಅನ್ನು ರೂಪಿಸಲಾಗಿದೆ. ಇದು ಹೂವಿಂದ ಹೂವಿಗೆ ಹಾರುತ್ತಾ ಪರಾಗಸ್ಪರ್ಶಕ್ರಿಯೆ ಮಾಡಬಲ್ಲದು.

ಅಧ್ಯಯನಕ್ಕೆಂದು ರೂಪಿಸಿದ ಈ ರೊಬೋಟ್‌ ಮುಂದಿನ ದಿನಗಳಲ್ಲಿ ಜೇನ್ನೊಣಗಳೊಂದಿಗೆ ಪ್ರತ್ಯೇಕವಾಗಿ ಪರಾಗಸ್ಪರ್ಶ ಕ್ರಿಯೆಗೆ ಬರಸಬಹುದು ಎಂಬುದು ತಜ್ಞರ ಅಂಬೋಣ. ಇತ್ತೀಚಿನ ದಿನಗಳಲ್ಲಿ ವಿಶ್ವದಲ್ಲಿ ಸುಮಾರು ಶೇ.35ರಷ್ಟು ಪತಂಗ ಜಾತಿಯ ವಿವಿಧ ಪರಾಗಸ್ಪರ್ಶ ಕ್ರಿಯೆಗೆ ನೆರವಾಗುವ ಕೀಟಗಳ ಪ್ರಭೇದಗಳೇ ಅಳಿದು ಹೋಗಿವೆಯಂತೆ. ಇಂತಹ ಸಂದರ್ಭ ಈ ರೊಬೋಟ್‌ ನೆರವಾಗಬಹುದು ಎನ್ನಲಾಗಿದೆ. ಈ ಬಗ್ಗೆ ಹೆಚ್ಚಿನ ಸಂಶೋಧನೆ ಸಾಗಿದೆ.

Back to Top