ಪ್ರೇಯಸಿಗಾಗಿ ಎಂದೂ ಬಾಡದ ನೋಟಿನ ಗುಚ್ಛ!
Team Udayavani, Feb 25, 2017, 5:16 AM IST
ಪ್ರೇಯಸಿಗೆ ಪ್ರೀತಿಯಿಂದ ಗುಲಾಬಿ ಹೂಗುಚ್ಛ ಕೊಡುವುದು ಸಾಮಾನ್ಯ. ಆದರೆ ಹೂಗುತ್ಛವನ್ನು ಪ್ರೇಯಸಿ ಎಷ್ಟು ದಿನ ತನ್ನ ಬಳಿ ಇರಿಸಿಕೊಂಡಾಳು? 1 ದಿನ ಅಥವಾ 2 ದಿನ ಮಾತ್ರ. ಒಂದು ವೇಳೆ ಪ್ರೇಯಸಿ ದೂರ ಇದ್ದರೆ ಹೂ ಆಕೆಯು ಕೈಸೇರುವ ಒಳಗೆ ಬಾಡಿ ಹೋಗಿರುತ್ತದೆ. ಈ ಎಲ್ಲಾ ಸಮಸ್ಯೆಯೇ ಬೇಡ ಎಂದು ತೀರ್ಮಾನಿಸಿದ ಚೀನದ ಜಿಲಿನ್ ಪ್ರಾಂತ್ಯದ ಯುವಕನೊಬ್ಬ ಎಂದೂ ಬಾಡದ ದುಬಾರಿ ಹೂಗುತ್ಛವನ್ನು ಆತನ ಪ್ರೇಯಸಿಗೆ ಕಳಿಸಿದ್ದಾನೆ. ಅದು ಎಂಥ ಹೂಗುತ್ಛ ಎನ್ನುತ್ತೀರಾ? 10,000 ಯೆನ್ ಮುಖ ಬೆಲೆಯ ನೋಟುಗಳನ್ನು ಹೂವಿನಾಕಾರವಾಗಿ ಮಾಡಿ ತಯಾರಿಸಿದ ಹೂಗುಚ್ಛ. ಈ ಹೂಗುತ್ಛದಲ್ಲಿ 1,100 ಪೌಂಡ್(92,000 ರೂ.) ಬೆಲೆಯಷ್ಟು ನೋಟುಗಳಿವೆಯಂತೆ. ಚೀನದ ಚಂಗುcನ್ನ ಪ್ರಸಿದ್ಧ ಹೂವಿನಂಗಡಿಯವರು ಈ ಗುಚ್ಛ ತಯಾರಿಸಿದ್ದಾರೆ.
ಯುವತಿ ಈ ಗುತ್ಛವನ್ನು ಸ್ವೀಕರಿಸಿದ ಬಳಿಕ ಈ ಚಿತ್ರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದಾಳೆ. ಜಾಲತಾಣಿಗರು ಈ ದುಬಾರಿ ಹೂಗುಚ್ಛವನ್ನು ಇನ್ನಿಲ್ಲದಂತೆ ಟೀಕಿಸುತ್ತಿದ್ದಾರೆ.