ನೀನು ಫೇಲಾದರೆ ನನಗೆ ಬೇಸರವಿಲ್ಲ. ನೀನು ಅತ್ತರೆ ನನಗೆ ನೋವು
Team Udayavani, Mar 26, 2017, 8:40 AM IST
ದೇಶದೆಲ್ಲೆಡೆ ಈಗ ಪರೀಕ್ಷಾ ಸಮಯ. ಹೆಚ್ಚು ಅಂಕಗಳಿಸುವಂತೆ ಮಕ್ಕಳ ಮೇಲೆ ಪೋಷಕರೇನು ಕಡಿಮೆ ಒತ್ತಡ ಹೇರುತ್ತಾರೆಯೇ? ಹನಾ ಎಂಬ ವಿದ್ಯಾರ್ಥಿನಿ ಜಗತ್ತಿನ ಎಲ್ಲಾ ಪೋಷಕರಿಗೂ ಪಾಠದಂತಿರುವ ಟ್ವೀಟ್ ಒಂದನ್ನು ಮಾಡಿದ್ದಾಳೆ. ಅವಳ ಟ್ವೀಟ್ ಈ ರೀತಿ ಇದೆ. “ನನ್ನ ತಾಯಿಗೆ ನಾನು ಗಣಿತದಲ್ಲಿ ಫೇಲ್ ಆದೆ ಎಂದು ಹೇಳಿದೆ’.
ಆಕೆಯ ಉತ್ತರ ಈ ರೀತಿ ಇತ್ತು. “ನೀನು ಗಣಿತದಲ್ಲಿ ಫೇಲ್ ಆದರೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ. ಪರೀಕ್ಷೆಯಲ್ಲಿ 1,000 ಕಡಿಮೆ ಅಂಕ ಗಳಿಸಿದರೆ, ಸ್ಟಾಂಡ್ ಫೋರ್ಡ್ ವಿವಿಗೆ ನೀನು ಆಯ್ಕೆಯಾಗದಿದ್ದರೂ ಬೇಜಾ ರಿಲ್ಲ. ಆದರೆ ನೀನು ಅಳುತ್ತಾ ಕೂತರೆ ನನಗೆ ಬೇಜಾರಾ ಗುತ್ತದೆ. ನೀನು ಒತ್ತಡಕ್ಕೊಳಗಾದರೆ ಅಥವಾ ಬೇಸರದಿಂದ ದಿನ ದೂಡಿದರೆ ನನಗೆ ನೋವಾಗುತ್ತದೆ. ಹಸಿವಾದ ಕೂಡಲೆ ನಿನಗೆ ತಿನ್ನಲು ಏನೂ ಸಿಗದಿದ್ದರೆ ನನಗೆ ಆತಂಕ ವಾಗುತ್ತದೆ.’ ಎಂದು ತನ್ನ ತಾಯಿ ತನಗೆ ಮರುಸಂದೇಶ ನೀಡಿರುವುದಾಗಿ ಅವಳು ಟ್ವೀಟ್ ಮಾಡಿದ್ದಾಳೆ.