ಇದು ಲಾಯರ್ ನೋಟಿಸ್ ಅಲ್ಲ, ಲಗ್ನ ಪತ್ರಿಕೆ!
Team Udayavani, Mar 27, 2017, 6:23 AM IST
ಒಂದೇ ಕಲ್ಲಿನಲ್ಲಿ 2 ಹಕ್ಕಿಯನ್ನು ಹೊಡೆಯುತ್ತಾರೆ ಎನ್ನುವುದು ಗಾದೆ ಮಾತು. ಅದನ್ನು ಲಂಡನ್ನ
ಜೋಡಿಯೊಂದು ಪಾಲಿಸುತ್ತಿದೆ. ಅವರ ವಿವಾಹ ಆಮಂತ್ರಣ ನೋಡಿದವರಿಗೆ ಇದು ತಿಳಿಯುತ್ತದೆ. ಇವರ ಲಗ್ನ ಪತ್ರಿಕೆ ನೋಡಿದವರಿಗೆ ಒಂದು ಕ್ಷಣ ಹೃದಯ ನಿಂತೇ ಹೋದರೂ ಆಶ್ಚರ್ಯವಿಲ್ಲ. ಲಾಯರ್ ನೋಟಿಸ್ನಂತೆ ಈ ಆಮಂತ್ರಣ ವಿನ್ಯಾಸಿಸಲಾಗಿದೆ. ಆಮಂತ್ರಣ ಪಡೆದವರು ತಮ್ಮ ಹಾಜರಾತಿ ಕುರಿತು ಇದರಲ್ಲಿ ನಮೂದಿಸಬೇಕು. ಇದರಿಂದ ಯಾರೆಲ್ಲಾ ಮದುವೆಯಲ್ಲಿ ಭಾಗವಹಿಸುತ್ತಿದ್ದಾರೆ ಎಂದು ಸುಲಭಕ್ಕೆ ತಿಳಿಯುತ್ತದೆ. ಅಲ್ಲದೇ ಈ ಆಮಂತ್ರಣ ನೋಡಿ ಮದುವೆಗೆ ಹಾಜರಾಗುವುದಿಲ್ಲವೆಂದು ತೀರ್ಮಾನಿಸುವವರೂ ಇರುತ್ತಾರೆ.