ಸುದ್ದಿ ಓದುತ್ತಿದ್ದ ಆ್ಯಂಕರ್ ಪಕ್ಕದಲ್ಲೇ ಪ್ರತ್ಯಕ್ಷವಾದ ನಾಯಿ
Team Udayavani, May 24, 2017, 6:58 AM IST
ಸ್ಟುಡಿಯೋದಲ್ಲಿ ಕೂತು ಸುದ್ದಿ ಓದುವಾಗ ಆ್ಯಂಕರ್ಗಳು ಮಾಡುವ ಎಡವಟ್ಟುಗಳು ಸುದ್ದಿಯಾಗುತ್ತಲೇ ಇರುತ್ತವೆ. ಆದರೆ ರಷ್ಯಾದಲ್ಲಿ ಆ್ಯಂಕರ್ ಸುದ್ದಿ ವಾಚಿಸುವ ವೇಳೆಯೇ ನಾಯಿಯೊಂದು ಧುತ್ತೆಂದು ಪ್ರತ್ಯಕ್ಷವಾಗಿ ಇಲ್ಲಸಲ್ಲದ ಕಿತಾಪತಿ ಮಾಡಿದೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ನಡೆದಿದ್ದೇನು ಎಂದರೆ, ಮಾಸ್ಕೊದಲ್ಲಿ ಕಟ್ಟಡವೊಂದು ನೆಲಸಮವಾದ ಸುದ್ದಿಯನ್ನು ಆ್ಯಂಕರ್ ಓದುತ್ತಿದ್ದರು. ಹಿಂಭಾಗದಲ್ಲಿ ನಾಯಿ ಬೊಗಳಿದ ಶಬ್ದ ಕೇಳಿಸಿತು. ಆ್ಯಂಕರ್ ವಿಚಲಿತರಾಗಿ ಅಕ್ಕಪಕ್ಕ ನೋಡುತ್ತಿದ್ದಂತೆಯೇ, ಮುದ್ದಾದ ನಾಯಿಯೊಂದು ಅವರ ಪಕ್ಕದಲ್ಲೇ ಕೂತೇ ಬಿಟ್ಟಿತ್ತು. ಗಾಬರಿಯಿಂದ ಸುಧಾರಿಸಿಕೊಂಡ ಆ್ಯಂಕರ್ ನಾಯಿಯ ತಲೆ ಸವರುತ್ತಲೇ ಸುದ್ದಿ ಓದುವುದನ್ನು ಮುಂದುವರೆಸಿದರು.