ಯೋಗ ಪಟುವಿನ ಹೊಟ್ಟೆಯಲ್ಲಿ ಸೂಜಿ, ಬ್ಲೇಡ್!
Team Udayavani, Jun 18, 2017, 4:53 AM IST
ಕೆಲವರಿಗೆ ಯೋಗದ ಬಗ್ಗೆ ಎಷ್ಟು ಭ್ರಮೆಗಳಿರುತ್ತವೆ ಎಂದರೆ, ತಾವು ಪ್ರತಿದಿನ ಯೋಗಾಸನ ಮಾಡುತ್ತೇವೆ. ಆದ್ದರಿಂದ ಯಾವ ಕಾಯಿಲೆಗಳೂ ನಮ್ಮ ಹತ್ತಿರವೂ ಸುಳಿಯುವುದಿಲ್ಲ ಎಂದು ಅವರು ಭಾವಿಸಿರುತ್ತಾರೆ. ಇಂಥ ಭ್ರಮೆಗಳು ಹೆಚ್ಚಾದ ಕಾರಣ ಶೈಲೇಂದರ್ ಸಿಂಗ್ ಎಂಬ ವ್ಯಕ್ತಿಯೊಬ್ಬರು 4 ತಿಂಗಳಿನಿಂದ ಆಸ್ಪತ್ರೆಯ ಅತಿಥಿಯಾಗಿದ್ದಾರೆ. ಕಾರಣ ಯೋಗ ಮಾಡುವವರು ಏನೇ ತಿಂದರೂ ಅದನ್ನು ಜೀರ್ಣಿಸಿಕೊಳ್ಳುವ ಶಕ್ತಿ ಹೊಂದಿರುತ್ತಾರೆ ಎಂಬ ಭ್ರಮೆ ಯಿಂದ ಟ್ಯೂಬ್ಲೈಟ್, ಸೂಜಿ, ಬ್ಲೇಡ್, ಲೋಹದ ತಟ್ಟೆಗಳನ್ನೆಲ್ಲಾ ತಿಂದಿದ್ದು! ಅದೂ 9 ವರ್ಷಗಳ ಕಾಲ.
ಈ ವಿಷಯ ಬೆಳಕಿಗೆ ಬಂದದ್ದು ಅವರಿಗೆ ತೀವ್ರ ಸ್ವರೂ ಪದ ಹೊಟ್ಟೆ ನೋವಿನ ಕಾರಣ ದೆಹಲಿಯ ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಗೆ ದಾಖಲಾದ ಬಳಿಕವೇ. ಸದ್ಯಕ್ಕೇನೋ ವೈದ್ಯರು ಅವರ ಹೊಟ್ಟೆಯಲ್ಲಿ ಶೇಖರಣೆಯಾಗಿದ್ದ ಬೇಡದ ವಸ್ತುಗಳನ್ನೆಲ್ಲಾ ಹೊರತೆಗೆ ದಿದ್ದಾರೆ. ಆದರೆ ಅವರು ಸಂಪೂರ್ಣ ಗುಣವಾಗಲು ಇನ್ನಷ್ಟು ದಿನಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬೇಕಿದೆ ಎಂದಿದ್ದಾರೆ ವೈದ್ಯರು.