Updated at Sun,23rd Jul, 2017 11:55AM IST
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಮೋದಿ ಕಾರಣಕ್ಕೆ ಮದುವೆ ಮುರಿಯಿತು!

ಈಗಿನ ಯುವ ಸಮುದಾಯ ರಾಜಕೀಯವನ್ನು ಅಗತ್ಯ ಕ್ಕಿಂತ ಹೆಚ್ಚು ಗಂಭೀರವಾಗಿ ತೆಗೆದುಕೊಂಡಿದೆ. ಎಷ್ಟರ ಮಟ್ಟಿಗೆ ಎಂದರೆ ರಾಜಕೀಯ ಚರ್ಚೆ ಮದುವೆಯನ್ನು ಮುರಿಯುವಷ್ಟು. ಪ್ರಧಾನಿ ನರೇಂದ್ರ ಮೋದಿ ಕುರಿತ ಪರ ಮತ್ತು ವಿರೋಧಿ ನಿಲುವಿನಿಂದಾಗಿ ಸ್ವಲ್ಪ ದಿನಗಳಲ್ಲೇ ದಂಪತಿಯಾಗ
ಬೇಕಿದ್ದ ಜೋಡಿಯೊಂದು ಮದುವೆಯನ್ನೇ ಮುರಿದಿದ್ದಾರೆ.

ಈ ಅತಿರೇಕದ ಘಟನೆ ನಡೆದಿದ್ದು ಉತ್ತರಪ್ರದೇಶದಲ್ಲಿ. ಇಲ್ಲಿಯ ಉದ್ಯಮಿ ಮತ್ತು ಸರ್ಕಾರಿ ನೌಕರಿಯಲ್ಲಿದ್ದ ಯುವತಿಗೆ ಮದುವೆ ಗೊತ್ತಾಗಿತ್ತು. ಮದುವೆಯ ಅಂತಿಮ ಸಿದ್ಧತೆಗಳ ಕುರಿತು ಚರ್ಚಿಸಲು ಅವರಿಬ್ಬರೂ ದೇವಸ್ಥಾನದಲ್ಲಿ ಭೇಟಿ ಯಾಗಿದ್ದರು. ಆ ವೇಳೆ ಮಾತುಕತೆ ಮದುವೆಯಿಂದ ರಾಜಕೀಯಕ್ಕೆ ಹೊರಳಿದೆ. ಆರ್ಥಿಕ ಹಿನ್ನಡೆಗೆ ಮೋದಿಯೇ ಕಾರಣ ಎಂದು ಯುವತಿ ಹೇಳಿದ್ದಾಳೆ. ಮೋದಿಯ ಕಟ್ಟಾ ಹಿಂಬಾಲಕನಾದ ವರನಿಗೆ ಆಕೆ ಮಾಡಿದ ಆರೋಪವನ್ನು ಸಹಿಸಲಾಗಿಲ್ಲ.
ಆತ ರೇಗಿದ್ದಾನೆ. ಕಡೆಗೆ ಇಬ್ಬರೂ ವಾದಕ್ಕಿಳಿದಿದ್ದಾರೆ. ಇಬ್ಬರ ಮಧ್ಯೆ ಒಮ್ಮತ ಮೂಡದೇ ಹೋದಾಗ ಮದುವೆಯನ್ನೇ ಮುರಿದುಕೊಳ್ಳಲು ನಿರ್ಧರಿಸಿದ್ದಾರೆ. ತಮ್ಮ ಮನೆಗಳಿಗೆ ತೆರಳಿ ನಾವಿಬ್ಬರೂ ಮದುವೆಯಾಗುವುದಿಲ್ಲ ಎಂದು ಹೇಳಿದ್ದಾರೆ. 


Back to Top