CONNECT WITH US  
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಜಗತ್ತಿನ ಅತಿ ಕುಳ್ಳ ಕುದುರೆಯ ಎತ್ತರ 15 ಇಂಚುಗಳು!

ಬ್ಲ್ಯೂಯಿಗೆ ಈಗ ಎರಡೂವರೆ ವರ್ಷ ವಯಸ್ಸು. ಆದರೆ ಅದರ ಎತ್ತರ ಕೇವಲ 15 ಇಂಚುಗಳು! ನಾವು ಹೇಳುತ್ತಿರುವುದು ಜಗತ್ತಿನ ಅತಿ ಕುಳ್ಳ ಕುದುರೆಯ ಕುರಿತು. ಈ ಕುದುರೆ ಹುಟ್ಟಿದ್ದು ಫ್ರಾನ್ಸ್‌ನ ಅಕ್ವಟೈನ್‌ನ "ಮಿನಿಯೇಚರ್‌ ಹಾರ್ಸ್‌ ಸೆಂಟರ್‌'ನಲ್ಲಿ.

ಇಲ್ಲಿ ಮನೆಯಲ್ಲಿ ಮುದ್ದಾಗಿ ಸಾಕುವ ಸಲುವಾಗಿಯೇ ಕುಳ್ಳ ತಳಿಯ ಕುದುರೆ ತಳಿಯನ್ನು ಅಭಿವೃದ್ಧಿ ಮಾಡಲಾಗುತ್ತಿದೆ. ಆದರೆ ಬ್ಲೂéಯಿ ಬೆಳವಣಿಗೆ ಸ್ವತಃ ಈ ಕೇಂದ್ರದ ಮಾಲೀಕರಿಗೇ ಆಶ್ಚರ್ಯ ಉಂಟುಮಾಡಿದೆಯಂತೆ. "ಆದರೆ ಬ್ಲ್ಯೂಯಿ ನಮ್ಮ ಅತ್ಯಂತ ಪ್ರೀತಿಯ ಕುದುರೆ. ಪುಟ್ಟ ನಾಯಿಮರಿಯ ಹಾಗೆ ನಮ್ಮ ಹಿಂದೆ ಓಡಿ ಬರುತ್ತಾಳೆ' ಎಂದು ಹೇಳುತ್ತಾರೆ ಅವರು.

Back to Top