ಡೆಲ್ಲಿ ಝೂನಲ್ಲಿ ರೀಟಾಳ ಅದ್ದೂರಿ ಬರ್ತ್ಡೇ!
Team Udayavani, Jul 17, 2017, 6:56 AM IST
ರೀಟಾ ವಯಸ್ಸು ಈಗ 56 ಆಗಿರಬಹುದು. ಆಕೆ ಯಾವಾಗ ಹುಟ್ಟಿದಳು, ಎಲ್ಲಿ ಹುಟ್ಟಿದಳು ಅನ್ನೋ ಬಗ್ಗೆ ಯಾರಲ್ಲೂ ಸ್ಪಷ್ಟತೆ ಇಲ್ಲ. ಆದರೂ ಈಗ ರೀಟಾಗೆ ತನ್ನ ಜೀವನದ ಅತಿ ದೊಡ್ಡ ಬರ್ತ್ಡೇ ಪಾರ್ಟಿ ಪಡೆಯುವ ಭಾಗ್ಯ. ಪಾರ್ಟಿ ಕೊಡುತ್ತಿರುವುದು ಡೆಲ್ಲಿ ಪ್ರಾಣಿ
ಸಂಗ್ರಹಾಲಯದ ಆಡಳಿತ!
ಹಾಗಾದ್ರೆ ಈ ರೀಟಾ ಯಾರು? ಝೂ ಸಿಬ್ಬಂದಿಯಾ? ಅಲ್ಲ. 1964ರಲ್ಲಿ ದೂರದ ಆಮ್ಸ್ಟರ್ಡ್ಯಾಮ್ ತೀರದಿಂದ ಬಂದಿರುವ ರೀಟಾ ಒಂದು ಚಿಂಪಾಂಜಿ. ಕಳೆದ 53 ವರ್ಷಗಳಿಂದ ಝೂ ಸಿಬ್ಬಂದಿ ಜತೆ ಅವಿನಾಭಾವ ಬಂಧ ಹೊಂದಿರುವ ರೀಟಾ, ಯುವತಿ ಯಾಗಿದ್ದಾಗ ಪ್ರವಾಸಿಗರ ಪ್ರಮುಖ ಆಕರ್ಷಣೆಯಾಗಿ ದ್ದಳು. ವಯಸ್ಸಾದಂತೆ ಆಕೆಗಿದ್ದ ಜನಪ್ರಿಯತೆ ಕುಗ್ಗಿದೆ ಯಾದರೂ ತನ್ನ ಮಾನವೀಯ
ಗುಣಗಳಿಂದ ಸಿಬ್ಬಂದಿಗೆ ಈಕೆ ಹತ್ತಿರಾಗಿದ್ದಾಳೆ. ಹೀಗಾಗಿ ಈ ಬಾರಿ ಅದ್ಧೂರಿ ಪಾರ್ಟಿ ಮೂಲಕ ರೀಟಾಳನ್ನು ಖುಷಿಪಡಿಸಲು ಝೂ ಆಡಳಿತ ನಿರ್ಧರಿಸಿದೆ.