Updated at Fri,18th Aug, 2017 5:49PM IST
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಶ್ವೇತಭವನದ ಎದುರು ಭಾರತೀಯನಿಂದ "ಟ್ರಂಪ್‌ ಚಿಕನ್‌'!

ಅಮೆರಿಕನ್ನರು, ಮೆಕ್ಸಿಕನ್ನರು ವಿವಿಧ ರೀತಿಯಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ರನ್ನು ಅಪಹಾಸ್ಯ ಮಾಡಿದ್ದಾಯಿತು. ಈಗ ಆ ಸರದಿ ಭಾರತೀಯರದ್ದು.

ಟ್ರಂಪ್‌ ತೆರಿಗೆ ರಿಟರ್ನ್ಸ್ ಬಿಡುಗಡೆ ನೀತಿಯನ್ನು ವಿರೋಧಿಸಿ ಭಾರತೀಯ ಮೂಲದ ಸಾಕ್ಷ್ಯಚಿತ್ರ ನಿರ್ದೇಶಕ ತರಣ್‌ ಸಿಂಗ್‌ ಬ್ರಾರ್‌ ಅವರು ಟ್ರಂಪ್‌ರನ್ನು ಹೋಲುವ 30 ಅಡಿ ಎತ್ತರದ ಕೋಳಿ ಆಕೃತಿಯೊಂದನ್ನು ಪ್ರದರ್ಶನಕ್ಕಿರಿ ಸಿದ್ದಾನೆ. ಅದೂ ಬೇರೆಲ್ಲೂ ಅಲ್ಲ, ಶ್ವೇತಭವನದ ಆವರಣದಲ್ಲಿಯೇ. ಅದಕ್ಕೆ "ಚಿಕನ್‌ ಡಾನ್‌' ಎಂದು ಹೆಸರಿಸಿದ್ದಾರೆ.

ಪುತಿನ್‌ಗೆ ಹೆದರಿ ಟ್ರಂಪ್‌ ಟ್ಯಾಕ್ಸ್‌ ರಿಟರ್ನ್ ನೀಡುತ್ತಿಲ್ಲ. ಪುತಿನ್‌ ಎದುರು ಟ್ರಂಪ್‌ "ಕೋಳಿ ಮರಿ'. ಹೀಗಾಗಿ ಗಾಳಿತುಂಬುವ ಕೋಳಿ ಆಕೃತಿ ಇರಿಸಿದ್ದೇನೆ ಎಂದಿದ್ದಾರೆ.

Back to Top