ಮೊಬೈಲ್ ನೋಡುತ್ತಾ ಬೈಕ್ ಓಡಿಸಿ ಮ್ಯಾನ್ ಹೋಲ್ಗೆ ಬಿದ್ದ!
Team Udayavani, Aug 19, 2017, 4:29 AM IST
ಮೊಬೈಲ್ನಲ್ಲಿ ಮಾತನಾಡುತ್ತಾ ವಾಹನ ಚಲಾಯಿಸಬೇಡಿ. ಮೆಸೇಜ್ ಮಾಡುತ್ತಾ ನಡೆದಾಡಬೇಡಿ ಎಂದು ಎಷ್ಟೇ ಹೇಳಿದರೂ ಜನ ಕೇಳಬೇಕಲ್ಲ. ಗಮನವೆಲ್ಲಾ ಫೋನ್ ಕಡೆ ಕೊಟ್ಟು ಜೀವನವನ್ನು ಗಂಡಾಂತರಕ್ಕೆ ಒಡ್ಡಿಕೊಳ್ಳುತ್ತಾರೆ. ಇಂಥ ಘಟನೆಗಳು ಕೇವಲ ಭಾರತದಲ್ಲಿ ನಡೆಯುತ್ತದೆ ಎಂದು ಭಾವಿಸಬೇಕಿಲ್ಲ. ಎಲ್ಲಾ ದೇಶಗಳಲ್ಲೂ ಈ ಗೋಳು ತಪ್ಪಿದ್ದಲ್ಲ. ಇತ್ತೀಚೆಗೆ ಚೀನಾದಲ್ಲೊಂದು ವಿಡಿಯೋ ಹೆಚ್ಚು ಸದ್ದು ಮಾಡಿತ್ತು. ಕೈಯಲ್ಲಿ ಮೊಬೈಲ್ ಫೋನ್ ಹಿಡಿದಿದ್ದ ವ್ಯಕ್ತಿ ಬೃಹತ್ ಮ್ಯಾನ್ ಹೋಲ್ನಲ್ಲಿ ಬಿದ್ದಿದ್ದನು. ಗಮನವನ್ನೆಲ್ಲಾ ಮೊಬೈಲ್ ಮೇಲೇ ಕೇಂದ್ರೀಕರಿಸಿದ್ದ ಆತ ರಸ್ತೆಯಲ್ಲಿದ್ದ ಹೊಂಡವನ್ನು ನೋಡಲಿಲ್ಲ. ನೋಡಿದ್ದರೆ ಬಹುಶಃ ಆತ ಗಾಡಿಯನ್ನು ನಿಲ್ಲಿಸಲು ಅಥವಾ ವೇಗ ತಗ್ಗಿಸಲು ಅವಕಾಶ ಇತ್ತು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಆದರೆ ವೇಗವಾಗಿ ಬೈಕ್ನಲ್ಲಿ ಬಂದವನೇ 32 ಅಡಿ ಅಗಲ ಮತ್ತು 6 ಅಡಿ ಆಳದ ಹೊಂಡಕ್ಕೆ ಬಿದ್ದಿದ್ದಾನೆ. ಆದರೂ ಆತ ಬದುಕುಳಿದಿದ್ದಾನೆ.
ಟಾಪ್ ನ್ಯೂಸ್
MUST WATCH
ಹೊಸ ಸೇರ್ಪಡೆ
21 ಕಾಂಗ್ರೆಸ್ ಅಭ್ಯರ್ಥಿ ಪಟ್ಟಿ ಇಂದು?ದಿಲ್ಲಿಯಲ್ಲಿ ಮಂಗಳವಾರ ಪಕ್ಷದ ಚುನಾವಣ ಸಮಿತಿ ಸಭೆ
AI; ನಿಮ್ಮ ಮಕ್ಕಳ ‘ಧ್ವನಿ’ ಕೇಳಿ ಮೋಸ ಹೋಗದಿರಿ ಜೋಕೆ!
Kerala-ಕರ್ನಾಟಕ-ತಮಿಳುನಾಡು ತ್ರಿಜಂಕ್ಷನ್: ಮತ್ತೆ ನಕ್ಸಲರ ಸದ್ದು?
Lok Sabha ಅಖಾಡಕ್ಕೆ ಲಾಲು ಪ್ರಸಾದ್ ಪುತ್ರಿ ಡಾ| ರೋಹಿಣಿ ಹೆಜ್ಜೆ
Infosys; 4 ತಿಂಗಳ ಮೊಮ್ಮಗನಿಗೆ 243 ಕೋಟಿ ರೂ.ಷೇರು ಗಿಫ್ಟ್ ನೀಡಿದ ಮೂರ್ತಿ